';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಪ್ಪಿನಂಗಡಿ: ಉದ್ಯಮಿ ಮುಸ್ಲಿಂ ಸಮುದಾಯದ ಉಮರಾ ನಾಯಕ ಹಾಜಿ ಮುಸ್ತಫಾ ಕೆಂಪಿ ರವರ ಅಗಲುವಿಕೆಗೆ ಉಪ್ಪಿನಂಗಡಿ ಬಾವಪೂರ್ಣ ವಿದಾಯ ಹೇಳಿತು.
ಇಂದು ಬೆಳಿಗ್ಗೆ 10 ರ ವೇಳೆಗೆ ಮನೆಯಿಂದ ಉಪ್ಪಿನಂಗಡಿ ಕೇಂದ್ರ ಮಸೀದಿಗೆ ಹೊರಟ ಅಂತಿಮ ಯಾತ್ರೆಯಲ್ಲಿ ಸಾವಿರಾರು ಮಂದಿಗಳು ಭಾಗವಹಿಸಿದರು.
ಮೃತದೇಹ ತೆಗೆದುಕೊಂಡು ಹೋಗುವ ವೇಳೆ ಗೌರವಾರ್ಥವಾಗಿ ಉಪ್ಪಿನಂಗಡಿ ಪೇಟೆ ಸಂಪೂರ್ಣ ಬಂದ್ ಆಗಿತ್ತು.
ಸಾವಿರಾರು ಮಂದಿಗಳು ಕಾಲ್ನಡಿಗೆ ಮೂಲಕ ಉಪ್ಪಿನಂಗಡಿಯ ಸೌಹಾರ್ದತೆಯ ಹರಿಕಾರ ಹಾಜಿ ಮುಸ್ತಫಾ ಕೆಂಪಿ ರವರ ಅಂತಿಮ ವಿದಾಯಕ್ಕೆ ಸಾಕ್ಷಿಯಾದರು.
ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿಯಲ್ಲಿ ದಫನ್ ಕಾರ್ಯ ನಡೆಯಿತು.
ಕಿಡ್ನಿ ವೈಫಲ್ಯದಿಂದ ಸೋಮವಾರ ರಾತ್ರಿ ವೇಳೆ ಅವರು ಇಹಲೋಕ ತ್ಯಜಿಸಿದ್ದರು.
ಕೆಂಪಿ ಮುಸ್ತಫ ಹಾಜಿ ರವರ ನಿಧನಕ್ಕೆ ವಿವಿಧ ಗಣ್ಯರು, ರಾಜಕೀಯ ಮುಖಂಡರು ಸಂತಾಪ ಸೂಚಿಸಿದರು.