ಕುಂಬ್ರ: ಕುಂಬ್ರ ಸರ್ಕಾರಿ ಕಾಲೇಜಿಗೆ ತೆರಳುವ ರಸ್ತೆ ಬದಿಯಲ್ಲಿ ಎಡೆಬಿಡದೆ ಜರಿಯುತ್ತಿರುವ ಭಾರೀ ಮಳೆಗೆ ಸುಮಾರು 60 ವರ್ಷಗಳ ಇತಿಹಾಸವಿರುವ ಬಾವಿಯೊಂದು ಭೂಕುಸಿತ ಉಂಟಾಗಿ ಮಣ್ಣಿನಡಿಗೆ ಹೋದ ಘಟನೆ ನಡೆದಿದೆ.
ಕಳೆದ ಎರಡು ಮೂರು ದಿನಗಳಿಂದ ಕರಾವಳಿಯಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿದ್ದು ಕುಂಬ್ರದಲ್ಲೂ ಮಳೆ ಜೋರಾಗಿ ಸುರಿಯುತ್ತಿದೆ. ಕುಂಬ್ರ ಶಾಲೆಗೆ ತೆರಳುವ ರಸ್ತೆ ಬದಿಯಲ್ಲಿ ಸುಮಾರು 60 ವರ್ಷಗಳ ಹಿಂದೆ ನಿರ್ಮಿಸಿದ ಬಾವಿಯೊಂದು ಪ್ರಕೃತಿ ವಿಕೋಪದಿಂದ ಉಂಟಾದ ಭೂಕುಸಿತದಿಂದ ಮಣ್ಣಿನೊಳಗೆ ಹೂತು ಹೋಗಿದೆ.
ಇದರ ಪಕ್ಕದಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಇದ್ದು ಪಂಚಾಯತಿನ ಕಟ್ಟಡದ ಮುಂಭಾಗದಲ್ಲಿ ಹಾಸಿದ್ದ ಇಂಟಾರ್ಲಾಕ್ ಸಹಿತ ಮಣ್ಣಿನೊಳಗೆ ಜರಿದು ಬಿದ್ದಿದೆ. ಪಕ್ಕದಲ್ಲಿ ಲೈಟ್ ಕಂಬ ಇದ್ದು ಅದು ಕೂಡ ಈ ಒಂದು ಕುಸಿತಕ್ಕೆ ಮಣ್ಣಿನಡಿಯಿಂದ ಎದ್ದು ಬಂದಿದ್ದು ಅಪಾರ ನಷ್ಟ ಉಂಟಾಗಿದೆ.
ಈ ಒಂದು ಕುಸಿತಗೊಂಡ ಸ್ಥಳದಲ್ಲಿ ಬಾಕಿ ಸಮಯದಲ್ಲಿ ಜನಸಂದಣಿ, ವಾಹನ ಪಾರ್ಕಿಂಗ್ ಸ್ಥಳವಾಗಿದ್ದು ಮಳೆಯಾದ ಕಾರಣ ಆ ಸ್ಥಳದಲ್ಲಿ ಯಾರು ಇರದಿದ್ದ ಕಾರಣ ಬಾರಿ ಅನಾಹುತವೊಂದು ತಪ್ಪಿದೆ ಅನ್ನಬಹುದು.
ಅರುವತ್ತು ವರ್ಷ ಇತಿಹಾಸವಿರುವ ಈ ಒಂದು ಬಾವಿಯಿಂದ ಎಲ್ಲಾ ಜನರು ನೀರು ಪಡೆದಿದ್ದು ಒಂದು ಸಮಯದಲ್ಲಿ ಶಾಲಾ ಮಕ್ಕಳು ಕೂಡ ಈ ಒಂದು ಬಾವಿಯಿಂದ ನೀರನ್ನು ಬಳಸುತ್ತಿದ್ದರೆ ಸಾರ್ವಜನಿಕರಿಗೂ ಬಲು ಉಪಕಾರಿಯಾಗಿತ್ತು.ಈ ಇತಿಹಾಸವಿರುವ ಬಾವಿ ಮತ್ತೆ ಮುಂದಿನಂತೆ ಎದ್ದು ನಿಲ್ಲಲಿದೆಯಾ, ಅಥವಾ ಸಂಬಂಧಪಟ್ಟವರು ಎದ್ದು ನಿಲ್ಲಿಸಲಿದ್ದಾರಾ ಎಂದು ಕಾದು ನೋಡಬೇಕಾಗಿದೆ. ಭೂಕುಸಿತ ಉಂಟಾದ ಸ್ಥಳದ ವೀಡಿಯೋ ನೋಡಿ 👇