ಯುಎಇ: ಕುಪ್ಪೆಟ್ಟಿ ನಿವಾಸಿ ಯುವ ಉದ್ಯಮಿಯೊಬ್ಬರು ದುಬೈ ದೇರಾದ ಹೋಟೆಲ್ ಒಂದರಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮೃತ ಉದ್ಯಮಿಯನ್ನು ಕುಪ್ಪೆಟ್ಟಿ ನಿವಾಸಿ ದಾವೂದ್ ಎಂಬವರ ಪುತ್ರ ಅವರ ಪುತ್ರ ರಾಝಿಕ್ ಕುಪ್ಪೆಟ್ಟಿ (24) ಎಂದು ಗುರುತಿಸಲಾಗಿದೆ. ದುಬೈಯ ಫಾರ್ಚುನ್ ಪಾರ್ಲ್ ದೇರಾ ಹೋಟೆಲ್ ಕೊಠಡಿಯಲ್ಲಿ ತಂಗಿದ್ದ ರಾಝಿಕ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
5 ವರ್ಷಗಳಿಂದ ದುಬೈಯಲ್ಲಿ ಉದ್ಯೋಗದಲ್ಲಿದ್ದ ಅವರು ಒಂದು ವರ್ಷದ ಹಿಂದೆ ಊರಿನಿಂದ ವಾಪಸಾಗಿದ್ದರು. ನವವಿವಾಹಿತರಾಗಿರುವ ಇವರು ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದು, ಪತ್ನಿ ಮತ್ತು 4 ತಿಂಗಳ ಮಗು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ಪಾರ್ಥಿವ ಶರೀರ ನಾಳೆ ತಾಯ್ನಾಡಿಗೆ:
ಮೃತ ಯುವಕನ ಪ್ರಾರ್ಥಿವ ಶರೀರ ನಾಳೆ(ಶನಿವಾರ) ತಾಯ್ನಾಡಿಗೆ ಬರಲಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 7:30ಕ್ಕೆ ತಲುಪಲಿದೆ. ಅಲ್ಲಿಂದ ಆಂಬ್ಯೂಲೆನ್ಸ್ ಮೂಲಕ ಸ್ವಗ್ರಾಮ ಕುಪ್ಪೆಟ್ಟಿ ಬರಲಿದೆ.
ಕುಟುಂಬದ ಆಧಾರಸ್ತಂಭವಾಗಿದ್ದ ಯುವಕನ ಸಾವಿನ ಸುದ್ಧಿ ತಿಳಿದು ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.