dtvkannada

ಪುತ್ತೂರು: ಹವಾಮಾನ ಆಧಾರಿತ ಕೃಷಿ ಬೆಳೆ ವಿಮೆಯಲ್ಲಿ ಅಡಿಕೆಯನ್ನು ಕೈ ಬಿಡಲಾಗಿದ್ದು ಅದನ್ನು ಸೇರಿಸುವ ಕೆಲಸ ಆಗಿಲ್ಲ ತಕ್ಷಣವೇ ಅದನ್ನು ಸೇರಿಸುವ ಕೆಲಸ ಆಗಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಯವರು ವಿಧಾನಸಭಾ ಅಧಿವೇಶನದಲ್ಲಿ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಸಭೆಯಲ್ಲಿ ಮಾತನಾಡಿದ ಶಾಸಕರು ಇದುವರೆಗೂ ಹವಮಾನ ಆಧಾರಿತ ಕೃಷಿ ವಿಮೆಯಲ್ಲಿ ಅಡಿಕೆಯನ್ನು ಸೇರಿಸುವ ಕೆಲಸ ಆಗಿಲ್ಲ. ಕಳೆದ ಬಾರಿ ಕೇಂದ್ರ ಸರಕಾರದಿಂದ ೨೨೪ ಕೋಟಿ ಹಾಗೂ ರಾಜ್ಯ ಸರಕಾರದಿಂದ ೪೮೧ ಕೋಟಿ ರೂ ನೀಡಿದೆ. ವಿಮಾ ಕಂಪೆನಿಯವರು ೧೪೮ ಕೋಟಿ ರೂ ಲಾಭಪಡೆದುಕೊಂಡಿದ್ದಾರೆ, ಹೀಗಿದ್ದರೂ ಇದುವರೆಗೂ ವಿಮಾ ಯೋಜನೆಯಲ್ಲಿ ಅಡಿಕೆಯನ್ನು ಸೇರಿಸುವ ಕೆಲಸ ಆಗಿಲ್ಲ ಇದು ಕರಾವಳಿ ಜಿಲ್ಲೆಯ ಕೃಷಿಕರಲ್ಲಿ ಆತಂಕಕ್ಕೆ ಕಾರಣವಾಗಿದ್ದು ಸರಕಾರ ತಕ್ಷಣವೇ ವಿಮ ಯೋಜನೆಗೆ ಅಡಿಕೆಯನ್ನು ಸೇರಿಸುವ ಕೆಲಸವನ್ನು ಮಾಡಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.

ಸಭಾಧ್ಯಕ್ಷರೇ ಒಂದ್ನಿಮಿಷ ನೀವು ಕೂಡಾ ಆ ಭಾಗದವರೇ-
ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡುವಾಗ ಸಭಾಧ್ಯಕ್ಷರು ವಿಷಯ ಏನೆಂದು ಹೇಳಿ ಸಾಕು ಎಂದು ಸಭಾಧ್ಯಕ್ಷರಾದ ಯು ಟಿ ಖಾದರ್ ಅವರು ಸೂಚನೆ ನೀಡಿದಾಗ ಮಾನ್ಯ ಸಭಾಧ್ಯಕ್ಷರೇ ನೀವು ಕೂಡಾ ಆ ಭಾಗದವರೇ ಎಂದು ಹೇಳಿದಾಗ ಸಭಾಧ್ಯಕ್ಷರು ಹೇಳಿ ಎಂದಾಗ ವಿಷಯವನ್ನು ಶಾಸಕರು ಮತ್ತೆ ಮಾತನ್ನು ಮುಂದುವರೆಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!