dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಾದ ಚೇತನ ಆಸ್ಪತ್ರೆಗೆ ಜುಲೈ 14 ಶುಕ್ರವಾರ ಬಾರ್ಯ ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಫೈಝಲ್ ಮೂರುಗೋಳಿ ಅವರು ಹೊಟ್ಟೆ ನೋವಿನ ಕಾರಣದಿಂದಾಗಿ ತನ್ನ 4 ವರ್ಷ ಪ್ರಾಯದ ಮಗಳಾದ ಫಹ್ಲಾಲನ್ನು ಮಕ್ಕಳ ತಜ್ಞರಾದ ಡಾ.ಶ್ರೀಕಾಂತ್ ಅವರ ಬಳಿ ಸಂದರ್ಶಿಸಿದಾಗ ವೈದ್ಯರು ಹೊಟ್ಟೆಯ ಸ್ಕ್ಯಾನ್ ಮಾಡಿ ಬರಲು ತಿಳಿಸುತ್ತಾರೆ. ಚೇತನಾ ಆಸ್ಪತ್ರೆಯಲ್ಲಿರುವ ಸ್ಕ್ಯಾನಿಂಗ್ ವಿಭಾಗದಲ್ಲಿ ಫಹ್ಲಾಲ ಹೊಟ್ಟೆಯ ಸ್ಕ್ಯಾನ್ ಮಾಡಿಸಿ ರಿಪೋರ್ಟ್ ವೈದ್ಯರ ಬಳಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಅಪೆಂಡಿಕ್ಸ್ 9 ಎಮ್ ಎಮ್ ಇದೆ ತಕ್ಷಣ ಅಡ್ಮೀಟ್ ಆಗಿ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡುವುದು ಒಳ್ಳೆಯದು ಇಲ್ಲದಿದ್ದರೆ ಹೊಟ್ಟೆಯ ಒಳಗಡೆ ಅಪೆಂಡಿಕ್ಸ್ ಸ್ಪೋಟಗೊಂಡರೆ ಅಪಾಯವಿದೆ ಎಂದು ಡಾ. ಶ್ರೀಕಾಂತ್ ತಿಳಿಸುತ್ತಾರೆ.

ಸಾಮಾಜಿಕ ಕಾರ್ಯಕರ್ತರು ಗ್ರಾಮ ಪಂಚಾಯತ್ ಸದಸ್ಯರು ಆಗಿರುವ ತಂದೆ ಫೈಝಲ್ ನೇರವಾಗಿ ತಮ್ಮ ಕುಟುಂಬದ ವೈದ್ಯರನ್ನು ಭೇಟಿ ಮಾಡಿ ರಿಪೋರ್ಟ್ ತೋರಿಸಿದಾಗ ಕುಟುಂಬದ ವೈದ್ಯರು ಇನ್ನೊಂದು ಕಡೆ ಸ್ಕ್ಯಾನಿಂಗ್ ಮಾಡಿ ನೋಡಿ ನಂತರ ಮುಂದಿನ ಹಂತಕ್ಕೆ ಬರುವ ಎಂದು ತಿಳಿಸುತ್ತಾರೆ. ಕೂಡಲೆ ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಅಲ್ಲಿನ ರಿಪೋರ್ಟ್ ನಲ್ಲಿ ಯಾವುದೇ ರೀತಿಯ ಅಪೆಂಡಿಕ್ಸ್ ಇರುವುದಿಲ್ಲ ನಾರ್ಮಲ್ ಎಂದು ಸ್ಕ್ಯಾನಿಂಗ್ ವೈದ್ಯರು ಸೂಚಿಸಿರುತ್ತಾರೆ.

'; } else { echo "Sorry! You are Blocked from seeing the Ads"; } ?>

ಒಂದು ಕಡೆ ಅಪೆಂಡಿಕ್ಸ್ ಇನ್ನೊಂದು ಕಡೆ ನಾರ್ಮಲ್ ರಿಪೋರ್ಟ್ ಹಿಡಿದುಕೊಂಡು ಏನು ಮಾಡಬೇಕೆಂದು ತೋಚದೆ ತಕ್ಷಣ ಪುತ್ತೂರಿನ ಸಾಮಾಜಿಕ ಕಾರ್ಯಕರ್ತ ಇಫಾಝ್ ಬನ್ನೂರು ಅವರಲ್ಲಿ ವಿಷಯ ತಿಳಿಸಿದಾಗ ಇಫಾಝ್ ಬನ್ನೂರು ಅವರು ಇನ್ನೊಂದು ಕಡೆ ಸ್ಕ್ಯಾನಿಂಗ್ ಮಾಡಿಸಿ ನೋಡಿ ನಂತರ ನಾವು ಇದರ ಬಗ್ಗೆ ಗಮನಹರಿಸುವ ಎಂದು ತಿಳಿಸುತ್ತಾರೆ.

ಇಂದಿನ ದಿನ ಜುಲೈ 15 ಶನಿವಾರ ಪುತ್ತೂರಿನ ದಿವ್ಯ ಸ್ಕ್ಯಾನಿಂಗ್ ಸೆಂಟರಿನಲ್ಲಿ 3 ನೆಯ ಬಾರಿ ಸ್ಕ್ಯಾನಿಂಗ್ ಮಾಡಿಸುತ್ತಾರೆ. ಅಲ್ಲಿನ ರಿಪೋರ್ಟ್ ಕೂಡ ನಾರ್ಮಲ್ ಎಂದು ತೋರಿಸುತ್ತದೆ.

ಅಲ್ಲಿಂದ ಫೈಝಲ್ ಮೂರುಗೋಳಿ ಅವರು ಪುತ್ತೂರಿನ ಸಾಮಾಜಿಕ ಕಾರ್ಯಕರ್ತರಾದ ಇಫಾಝ್ ಬನ್ನೂರು ಹಾಗೂ ಅಲಿ ಪರ್ಲಡ್ಕ ಅವರೊಂದಿಗೆ ಚೇತನಾ ಆಸ್ಪತ್ರೆಯ ಮಕ್ಕಳ ವೈದ್ಯರಾದ ಡಾ. ಶ್ರೀಕಾಂತ್ ಅವರ ಬಳಿ ವಿಚಾರಿಸಲು ಹೋದಾಗ ಡಾ. ಶ್ರೀಕಾಂತ್ ಅವರು ಏಕಾಏಕಿ ದರ್ಪಣ ರೀತಿಯಲ್ಲಿ ವರ್ತಿಸಿ ಸರಿಯಾಗಿ ಉತ್ತರಿಸದೆ ತನಗೆ ಸಮಯವಿಲ್ಲ ನೀವು ಕಾನೂನು ಕ್ರಮ ಕೈಗೊಳ್ಳಿ ನನಗೇನು ತೊಂದರೆ ಇಲ್ಲ ಎಂದರು ಮಾತ್ರವಲ್ಲ ನಾನು ನೇತ್ರಾವತಿ ನದಿಗೆ ಹಾರಿ ಸಾಯ್ತೇನೆ ಎಂದು ಉಡಾಫೆ ಉತ್ತರ ನೀಡಿ ಕಾಲ್ಕಿತ್ತರು.ಅಲ್ಲಿನ ಸಿಬ್ಬಂದಿಗಳು ಚೇತನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಅಡಿಗ ಅವರಿಗೆ ಕರೆ ಮಾಡಿ ಕೊಟ್ಟರು. ಡಾ. ಅಡಿಗ ಅವರೊಂದಿಗೆ ಮಾತನಾಡಿದಾಗ ಅವರ ಉತ್ತರ ಸ್ಕ್ಯಾನಿಂಗ್ ವಿಭಾಗಕ್ಕೂ ನನಗೂ ಸಂಬಂಧವಿಲ್ಲ ಎಂದು ಬೇಜವಾಬ್ದಾರಿಯಿಂದ ಉತ್ತರಿಸಿದರು. ನಿರ್ಲಕ್ಷ್ಯತನ ತೋರಿಸಿ ಸರಿಯಾಗಿ ಮಾತನಾಡಿಸದ ಚೇತನಾ ಆಸ್ಪತ್ರೆಯ ವಿರುದ್ಧ ಫಹ್ಲಾ ಮಗುವಿನ ತಂದೆ ಫೈಝಲ್ ಮೂರುಗೋಳಿ ಅವರು ತಾಲ್ಲೂಕು ಆರೋಗ್ಯಾಧಿಕಾರಿ ಪುತ್ತೂರು, ಜಿಲ್ಲಾ ಆರೋಗ್ಯ ಕೇಂದ್ರ ದಕ್ಷಿಣ ಕನ್ನಡ, ಆರೋಗ್ಯ ಸಚಿವರು ಕರ್ನಾಟಕ ವಿಕಾಸ ಸೌಧ ಬೆಂಗಳೂರು ಇವರಿಗೆ ದೂರನ್ನು ನೀಡಿರುತ್ತಾರೆ ಎಂದು ಡಿಟಿವಿ ಕನ್ನಡ ವರದಿಗಾರರಿಗೆ ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!