ಕಲ್ಲಿಕೋಟೆ: ಮಲೇಷಿಯಾ ಪ್ರಧಾನಿಯ ವಿಶೇಷ ಆಹ್ವಾನದ ಮೇರೆಗೆ ಮಲೇಷಿಯಾಗೆ ತೆರಳಿ ಮತ್ತೆ ಮರಳಿ ಇಂದು ತಾಯ್ನಾಡಿಗೆ ಆಗಮಿಸಿದ ಇಂಡಿಯನ್ ಗ್ರಾಂಡ್ ಮುಫ್ತಿ ಶೈಖ್ ಅಬೂಬಕ್ಕರ್ ಅಹ್ಮದ್ ರವರಿಗೆ ಕೇರಳದ ಕರಿಪ್ಪುರ್ ವಿಮಾನ ನಿಲ್ದಾಣದಲ್ಲಿ ಭರಪೂರ ಸ್ವಾಗತ ಲಭಿಸಿತು.

ಇಂದು (ಭಾನುವಾರ) ಬೆಳಿಗ್ಗೆ 8:30 ರ ಹೊತ್ತಿಗೆ ಕರಿಪ್ಪುರ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸುಲ್ತಾನುಲ್ ಉಲಮಾ ಎ,ಪಿ ಅಬೂಬಕ್ಕರ್ ಮುಸ್ಲಿಯಾರ್ ರವರನ್ನು ಅವರ ಅಪಾರ ಅಭಿಮಾನಿಗಳು ಹಿತೈಷಿಗಳು ಸೇರಿ ಸಾವಿರಾರು ಮಂದಿಗಳು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಕೇಂದ್ರ ಮುಷಾವರ ನಾಯಕರಾದ ಸೆಯ್ಯದ್ ಕಡಲುಂಡಿ ತಂಗಳ್, ಪೇರೋಡ್ ಉಸ್ತಾದ್, ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ ಸಹಿತ ಹಲವಾರು ನಾಯಕರು ಎ, ಪಿ ಉಸ್ತಾದರಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು.
ಸಾವಿರಾರು ಅಭಿಮಾನಿ ಹಿತೈಷಿಗಳೊಂದಿಗೆ ವಿಮಾನ ನಿಲ್ದಾಣದಿಂದ ಕಾರಂದೂರು ಮರ್ಕಝ ತನಕ ಬೃಹತ್ ವಾಹನ ಜಾಥದೊಂದಿಗೆ ಬೃಹತ್ ಮಟ್ಟದ ಸ್ವಾಗತ ಕೋರಲಾಯಿತು.
ಇನ್ನು ಮರ್ಕಜ್ ನಲ್ಲಿ ತಾಯ್ನಾಡಿನ ಅತೀ ದೊಡ್ಡ ಸ್ವೀಕರಣವನ್ನು ಎ,ಪಿ ಉಸ್ತಾದ್ ಸ್ವೀಕರಿಸಲಿದ್ದಾರೆ.
ಅನಾರೋಗ್ಯ ಹಿನ್ನಲೆ ಕಳೆದ 9 ತಿಂಗಳುಗಳಿಂದ ವಿಶ್ರಾಂತಿಯಲ್ಲಿದ್ದ ಉಸ್ತಾದ್ ತದ ನಂತರ ಪ್ರಥಮ ಬಾರಿಯಾಗಿದೆ ಈ ವಿದೇಶ ಯಾತ್ರೆ ಕೈಗೊಂಡಿರುವುದು.
ಮಲೇಷಿಯಾ ಪ್ರಧಾನಿಯ ವಿಶೇಷ ಆಹ್ವಾನದ ಮೇರೆಗೆ ಉಸ್ತಾದ್ ಈ ಯಾತ್ರೆ ಕೈಗೊಂಡಿದ್ದರು.
ಖುದ್ದು ಪ್ರಧಾನಿಗಳೇ ಉಸ್ತಾದರಿಗೆ ವಿಶೇಷ ವಿಮಾನವನ್ನು ಕಳುಹಿಸಿದ್ದರು ಎಂದು ತಿಳಿದು ಬಂದಿದೆ.
ಮಲೇಷಿಯಾ ಸರಕಾರ ಈ ಭೇಟಿ ವೇಳೆ ಎ,ಪಿ ಉಸ್ತಾದರಿಗೆ ಹಿಜ್ರಾ ಅವಾರ್ಡ್ ಪ್ರಧಾನಗೈದಿತ್ತು.
ಮಲೇಷಿಯಾ ಪ್ರವಾಸ ಮುಗಿಸಿ ತಾಯ್ನಾಡಿಗೆ ಮರಳಿದ ಉಸ್ತಾದರಿಗೆ ಅಭಿಮಾನಿಗಳು ವಿವಿಧ ಸಂಘ ಸಂಸ್ಥೆಗಳು ನೀಡಿದ ಪೌರ ಸನ್ಮಾನದ ತುಣುಕುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗುತ್ತಿದೆ.