dtvkannada

ಪುತ್ತೂರು: ಭಾರೀ ಮಳೆಗೆ ಅರಿಯಡ್ಕ ಸರಕಾರಿ ಹಿ ಪ್ರಾ ಶಾಲಾ ಕಟ್ಟಡದ ಗೋಡೆ ಬಿರುಕುಬಿಟ್ಟಿದ್ದು ಕುಸಿಯುವ ಭೀತಿಯಲ್ಲಿದ್ದು ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ.

ಶತಮಾನಗಳ ಇತಿಹಾಸ ಹೊಂದಿರುವ ಅರಿಯಡ್ಕ ಶಾಲೆಯಲ್ಲಿ ಒಂದರಿಂದ ಏನೇ ತರಗತಿ ತನಕ ವಿದ್ಯಾರ್ಥಿಗಳಿದ್ದು ಒಂದೇ ಕಟ್ಟಡದಲ್ಲಿ ೩,೭ ನೇ ತರಗತಿ ತನಕ ಕ್ಲಾಸ್‌ಗಳು ನಡೆಯುತ್ತಿದ್ದು ಅದೇ ಕಟ್ಟಡದ ಗೋಡೆ ಬಿರುಕುಬಿಟ್ಟಿದೆ. ಗೋಡೆ ಬಿರುಕುಬಿಟ್ಟಿರುವ ಕಾರಣ ಕಟ್ಟಡದ ಮಾಡು, ಪಕ್ಕಾಸುಗಳು ಕುಸಿತಗೊಂಡಿದ್ದು ಮುರಿದು ಬೀಳುವ ಹಂತದಲ್ಲಿದೆ. ಭಾನುವಾರ ಈ ಘಟನೆ ನಡೆದಿದ್ದು ಇಂದು ತರಗತಿಗೆ ವಿದ್ಯಾರ್ಥಿಗಳು ಬಂದಾಗ ವಿಷಯ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಿದರೂ ಅವರಿಗೆ ಅಲ್ಲಿ ಬದಲಿ ವ್ಯವಸ್ಥೆಗೆ ಯಾವುದೇ ತರಗತಿ ಕೋಣೇಗಳಿರುವುದಿಲ್ಲ. ರಂಗಮಂಟಪದಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಟ್ಟಡ ಶಿಥಿಲಗೊಂಡಿರುವ ಕಾರಣ ಕೆಲವು ಪೋಷಕರು ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿರುವುದಾಗಿ ಕೆಲವು ಪೋಷಕರು ಮಾಹಿತಿ ನೀಡಿದ್ದಾರೆ.

ಶಾಸಕರಿಗೆ ತಿಳಿಸಲಾಗಿದೆ ಎಸ್‌ಡಿಎಂಸಿ:- ಕಟ್ಟಡ ಬಿರುಕುಬಿಟ್ಟಿರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು ಸದ್ಯ ತರಗತಿ ಕೋಣೆಗಳು ಇಲ್ಲದೇ ಇರುವುದರಿಂದ ಒಂದೇ ಹಾಲ್ ಮತ್ತು ರಂಗಮಂಟಪದಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ. ಘಟನೆಯ ಬಗ್ಗೆ ಶಾಸಕರಿಗೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಇನ್ನುಳಿದ ಹಳೆಯ ಕಟ್ಟಡವೂ ಶಿಥಿಲಗೊಂಡಿದ್ದು ಈ ಬಗ್ಗೆ ಈ ಹಿಂದೆಯೇ ಸಂಬಂಧಿಸಿದವರಿಗೆ ಮಾಹಿತಿ ನೀಡಲಾಗಿದೆ. ಮಾಡು ದುರಸ್ಥಿಗೆ ಮಾತ್ರ ಅನುದಾನ ನೀಡಲಾಗಿದ್ದು ಅದರಲ್ಲಿ ಮಾಡು ದುರಸ್ಥಿ ಮಾಡಲಾಗಿದೆ. ಕಟ್ಟಡದ ಗೋಡೆಗಳು ತುಂಬಾ ಹಳೆಯದಾಗಿರುವ ಕಾರಣ ಮಳೆಗೆ ಕುಸಿತವಾಗುತ್ತಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷರಾದ ಹನೀಫ್‌ರವರು ಮಾಹಿತಿ ನೀಡಿದ್ದಾರೆ. ಕಟ್ಟಡ ಬಿರುಕುಬಿಟ್ಟ ವಿಷಯ ತಿಳಿದು ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಇಕ್ಬಾಲ್ ಹುಸೇನ್, ಒಳಮೊಗ್ರು ವಲಯ ಅಧ್ಯಕ್ಷ ಅಶೋಕ್‌ಪೂಜಾರಿ, ರಫೀಕ್ ದರ್ಖಾಸ್, ಮಹಮ್ಮದ್ ಬೊಳ್ಳಾಡಿ ಮೊದಲಾದವರು ಭೇಟಿ ನೀಡಿ ಸಹಕರಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!