ಬೆಂಗಳೂರು: ಪ್ರೀತಿಯಲ್ಲಿ ಮೋಸ ಹೋಗದವರಿಲ್ಲ ಅದೇ ರೀತಿ ಈಗೀನ ಪರಿಸ್ಥಿತಿಯಲ್ಲಿ ಮೋಸ ಮಾಡದವರು ಬಹಳ ಕಡಿಮೆ ಅನ್ನಬಹುದು. ಇಲ್ಲೊಂದು ಪ್ರೇಮ ಪ್ರಕರಣ ಬಹಳ ವಿಭಿನ್ನವಾಗಿದೆ ನೋಡಿ. ಪ್ರೀತಿಸಿದ ಹುಡುಗ ಮೋಸ ಮಾಡಿ ವಂಚನೆ ಮಾಡಿದ ಕಾರಣಕ್ಕೆ ನೊಂದ ಯುವತಿ ಡೆತ್ ನೋಟ್ ಬರೆದಿಟ್ಟು ಬೆಂಗಳೂರಿನ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜಿಮ್ ತರಬೇತುದಾರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಒಂದು ಪ್ರಕರಣದಲ್ಲಿ ಪ್ರೀತಿಯೆಂಬ ಮಾಯಾ ಜಾಲಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಯುವತಿ ವಿದ್ಯಾಶ್ರೀ(25) ಎಂದು ಗುರುತಿಸಲಾಗಿದೆ.ಈ ಒಂದು ಆತ್ಮಹತ್ಯೆ ಕಾರಣ ಅಕ್ಷಯ್ (27) ಎಂದು ತಿಳಿದು ಬಂದಿದ್ದು ಇದೀಗ ಈ ಆರೋಪಿಯನ್ನು ಬಂಧಿಸಲಾಗಿದೆ.
ವಿದ್ಯಾಶ್ರಿಯು ನಗರದ ಕಂಪನಿಯೊಂದದರಲ್ಲಿ ಕೆಲಸ ಮಾಡುತ್ತಿದ್ದರು.ಅಲ್ಲದೆ ‘ಮಿಸ್ ಆಂಧ್ರ’ ಕಿರೀಟವನ್ನು ಪಡೆದಕೊಂಡಿದ್ದರು.ಇವರು ಕೆಂಪಾಪುರದಲ್ಲಿ ತಾಯಿ ಜೊತೆ ವಾಸವಿದ್ದ ಬಗ್ಗೆ ಮೂಲಗಳು ತಿಳಿಸಿವೆ.ಆರೋಪಿ ಅಕ್ಷಯ್ ಮೂಲತಃ ಮಂಡ್ಯದವನಾಗಿದ್ದು, ಪೋಷಕರ ಜೊತೆ ನಗರದಲ್ಲಿ ವಾಸವಾಗಿದ್ದನೆಂದು ತಿಳಿದು ಬಂದಿದೆ.
2021ರಲ್ಲಿ ಫೇಸ್ ಬುಕ್ ನಲ್ಲಿ ಅಕ್ಷಯ್ ವಿದ್ಯಾಶ್ರೀ ಗೆ ರಿಕ್ವೆಸ್ಟ್ ಕಳುಹಿಸಿ ‘ನಾನು ನಿಮ್ಮ ಅಭಿಮಾನಿ ಎಂದು ಹೇಳಿದ್ದನು.ಆ ಮೇಲೆ ಇವರ ಮಧ್ಯೆ ಸ್ನೇಹ ಶುರುವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಬಳಿಕ ಇವರಿಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿದ್ದರು.ಅನೇಕ ಬಾರಿ ಭೇಟಿ ಆಗಿದ್ದು, ಮದುವೆಯಾಗುತ್ತೇನೆ ಎಂದು ನಂಬಿಸಿದ್ದನು ಎನ್ನಲಾಗಿದೆ.ಅಕ್ಷಯ್‌ನು ವಿದ್ಯಾಶ್ರೀ ಜೊತೆ 1.76 ಲಕ್ಷ ಸಾಲ ಪಡೆದಿದ್ದು, ಜೊತೆಗೆ ಲೈಂಗಿಕವಾಗಿ ಬಳಸಿಕೊಂಡಿದ್ದನು ಎಂದು ವರದಿಯಾಗಿದೆ.
ವಿದ್ಯಾಶ್ರೀ ಜೊತೆ ಪಡೆದುಕೊಂಡ ಹಣ ವಾಪಸು ಕೇಳಿದಾಗ ಕಿರುಕುಳ ನೀಡಲು ಆರಂಭಿಸಿದ್ದನು.ಜೊತೆಗೆ ಬಸವೇಶ್ವರ ನಗರದಲ್ಲಿರುವ ಜಿಮ್ ನಲ್ಲಿ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದನು.ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದನು.ಹಾಗಾಗಿ ನೊಂದ ವಿದ್ಯಾಶ್ರೀ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಡೆತ್ ನೋಟ್ ನಲ್ಲಿ ವಿದ್ಯಾಶ್ರೀಯು ‘ಪ್ರೀತಿಯ ನಾಟಕವಾಡಿದ್ದ ಅಕ್ಷಯ್ ನನ್ನ ಕೈಯಿಂದ 1.76 ಲಕ್ಷ ಸಾಲ ಪಡೆದಿದ್ದನು.ಅದನ್ನು ವಾಪಸು ಕೇಳಿದರೆ ಬೈಯುತ್ತಿದ್ದ. ಅಲ್ಲದೆ ಕುಟುಂಬವನ್ನು ನಿಂದಿಸುತ್ತಿದ್ದ.ಈತನ ಕಿರುಕುಳದಿಂದ ಮಾನಸಿಕವಾಗಿ ನೊಂದಿದ್ದಾನೆ.ನನಗೆ ಬದುಕಲು ಆಗುತ್ತಿಲ್ಲ’ ಎಂದು ಬರೆದು ಕೊನೆಗೆ ‘ಎಲ್ಲ ಹುಡುಗಿಯರಿಗೆ ನನ್ನದೊಂದು ವಿನಂತಿ.ಯಾರನ್ನೂ ನಂಬಿ ಪ್ರೀತಿ ಮಾಡಬೇಡಿ.ಅಮ್ಮ, ತಮ್ಮ ನನ್ನನ್ನು ಕ್ಷಮಿಸಿ’ ಎನ್ನುವ ದುಖಃದ ಬರಹದದೊಂದಿಗೆ ಡೆತ್ ನೋಟ್ ಕಂಪ್ಲೀಟ್ ಮಾಡಿದ್ದಾರೆ ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.