ಪುತ್ತೂರು: NRI ಪ್ರವಾಸಿಗರು ಕಲ್ಲೇಗ ಸಮಿತಿಯ ವಾರ್ಷಿಕ ಮಹಾಸಭೆಯು 21/07/2023 ಮತ್ತು 22/07/2023ರಂದು online ಮುಖಾಂತರ ನಡೆಯಿತು.

ಸಭಾಧ್ಯಕ್ಷರಾಗಿ ಬಿ.ಎ.ಶಕೂರ್ ಹಾಜಿಯವರು ಕಾರ್ಯ ನಿರ್ವಹಿಸಿದರು. ಜುಮಾ ನಮಾಝ್ ಬಳಿಕ ಕಲ್ಲೇಗ ಜಮಾಅತ್ ಕಮಿಟಿಯ ಕಚೇರಿಯಲ್ಲಿ ಕಲ್ಲೇಗ ಮುದರ್ರಿಸ್ ಬಹುಃ ಶಾಫಿ ಫೈಝಿ, ಇರ್ಫಾನಿ, ಉಸ್ತಾದ್ ರವರ ದುವಾಃ ಮತ್ತು ನಸೀಯತ್ ನೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮದಲ್ಲಿ ಊರಿಗೆ ಬಂದಿದ್ದ NRI ಪ್ರವಾಸಿಗರು, ಜಮಾಅತ್ ಕಮಿಟಿಯ ಪದಾಧಿಕಾರಿಗಳು, ಅಲ್ ಅಮೀನ್ ಯಂಗ್ ಮೆನ್ಸ್ ನ ಪದಾಧಿಕಾರಿಗಳು, ಪಾಲ್ಗೊಂಡು ಉತ್ತಮ ಸಲಹೆಗಳನ್ನು ನೀಡಿದರು
ಸಮಿತಿಯ ಅಧ್ಯಕ್ಷರಾದ ಬಹುಃ ಸುಲೈಮಾನ್ ಉಸ್ತಾದ್ ರವರು ಕೆಲವೊಂದು ಯೋಜನೆಗಳ ಬಗ್ಗೆ ಮಾತನಾಡಿದರು. ಜಮಾಅತ್ ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕಾರ್ಯ ಕ್ರಮದಲ್ಲಿ ಭಾಗ ವಹಿಸಿದರು. ಮುಂದಿನ ದಿನಗಳಲ್ಲಿ NRI ಪ್ರವಾಸಿಗರು ಕಲ್ಲೇಗ ಸಮಿತಿಯ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು NRI ಪ್ರವಾಸಿಗರು ಕಲ್ಲೇಗ ಸಮಿತಿಯು ಆರು ವರ್ಷಗಳಲ್ಲಿ ನಡೆದು ಬಂದ ದಾರಿ ಉತ್ತಮ ಸೇವೆಗಳ ಬಗ್ಗೆ ಶಕೂರ್ ಹಾಜಿಯವರು ಮಾಹಿತಿ ನೀಡಿದರು. ಕೊನೆಗೆ ಹನೀಫ್ ಹಾಜಿ ಉದಯ ರವರು ಧನ್ಯವಾದ ಅರ್ಪಿಸಿದರು.
ಬಳಿಕ ವಾಟ್ಸ್ ಆಪ್ (ಆನ್ ಲೈನ್) ನಲ್ಲಿ NRI ಪ್ರವಾಸಿಗರು ಕಲ್ಲೇಗ ಸಮಿತಿಯ ಏಳನೇಯ ವರ್ಷದ ಮಹಾಸಭೆ ಮುಂದುವರಿಯಿತು. ಬಶೀರ್ ಹಾಜಿ ಕಬಕ ರವರು ಎಲ್ಲರನ್ನೂ ಆತ್ಮೀಯ ವಾಗಿ ಸ್ವಾಗತಿಸಿದರು. ಒಂದುವರೆ ವರ್ಷದ ವರದಿಯನ್ನು ಪ್ರಧಾನ ಕಾರ್ಯದರ್ಶಿ ಶಾನಿಫ್ ಬೊಳ್ವಾರ್ C.ಆ ರವರು ಓದಿದರು. ನಂತರ ಕೋಶಾಧಿಕಾರಿ ಅಬ್ದುಲ್ ರಹಿಮಾನ್ (ಅದ್ದು ಪೋಳ್ಯ) ರವರು ಲೆಕ್ಕಪತ್ರ ವನ್ನು ಮಂಡಿಸಿದರು. ಅದನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.ನಂತರ ಎಲ್ಲಾ ಸದಸ್ಯರ ಆಯ್ಕೆಯ ಮೂಲಕ ಹಳೇ ಕಮಿಟಿ ವಿಸರ್ಜನೆ ಮಾಡಿ ಹೊಸ ಕಮಿಟಿ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಶಕೂರ್ ಹಾಜಿ ಕಲ್ಲೆಗ ಹಿರಿಯ ಮಾರ್ಗದರ್ಶಕರಾಗಿ ಕೆ.ಪಿ. ಮುಹಮ್ಮದ್ ಹಾಜಿ ಅಧ್ಯಕ್ಷರು ಜಮಾಅತ್ ಕಮಿಟಿ ಕಲ್ಲೇಗ ಪುತ್ತೂರು ಅಧ್ಯಕ್ಷರಾಗಿ ಮುಹಮ್ಮದ್ ಬೊಳ್ವಾರ್ (ಕುವೈಟ್ )
ಉಪಾಧ್ಯಕ್ಷರಾಗಿ :- ಸಿದ್ದೀಕ್ ಕಲ್ಲೇಗ ( ಮಾಹಿ), ಝಕರಿಯಾ ಮುರ, ಅಸೀಫ್ ಕಬಕ, ಹಾಗೂ ರಫೀಕ್ ಬೊಳ್ವಾರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಬಕ (ದಮ್ಮಾಮ್)
ಕೋಶಾಧಿಕಾರಿ ಇಬ್ರಾಹಿಂ ಬಾತಿಷಾ ಕಬಕ ಕತ್ತರ್ ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್(ಅದ್ದು)ಪೋಳ್ಯ (ಕುವೈಟ್), ಶಾಫಿ ಮಂಜಲ್ಪಡ್ಪು (ಕತ್ತಾರ್), ಸಿದ್ದೀಕ್ ಕಲಂಬಿ ದುಬೈ, ಅಬ್ದುಲ್ ರಝಾಕ್ ಕಬಕ ರಿಯಾದ್, ಖಲಂದರ್ ಕಬಕ ರಿಯಾದ್, ಸವಾದ್ ಶಾಂತಿ ನಗರ ಅಜ್ಮಾನ್
ಸಂಘಟನಾ ಕಾರ್ಯದರ್ಶಿ ಮುನೀರ್ ಶಾಂತಿ ನಗರ ಸಂಚಾಲಕರಾಗಿ ಅಬ್ದುಲ್ ಲತೀಫ್ ಹಾಜಿ ಕಲ್ಲೇಗ ಪತ್ರಿಕಾ ಕಾರ್ಯದರ್ಶಿ ಇಕ್ಬಾಲ್ ಅಜೇಯ ನಗರ ಊರಿನ ಪ್ರತಿನಿಧಿ ಹನೀಫ್ ಹಾಜಿ ಉದಯ ಮತ್ತು ಪಾರೂಕ್ ಮುರ
ಗ್ರೂಪ್ ನಿರ್ವಹಕರು (ಎಡ್ಮಿನ್ ) ಇಬ್ರಾಹಿಂ ಕಲ್ಲೇಗ ದಮಾಮ್ ಸಲಹೆಗಾರರಾಗಿ ಬಹುಃ ಸುಲೈಮಾನ್ ಉಸ್ತಾದ್ ಬಶೀರ್ ಹಾಜಿ ಕಬಕ ಮೊಯಿದು ಬೊಳ್ವಾರ್ ಮುಹಮ್ಮದ್ ರಫೀಕ್ (ಅಕ್ಕಿ ಬನಾರಿ )ದಮಾಮ್ ಅಬ್ದುಲ್ ಸಮದ್ ಹಾಜಿ ಕಲ್ಲೇಗ
ಫರಾಝ್ ಅಬ್ದುಲ್ ಖಾದರ್ ಶಾಹುಲ್ ಹಮೀದ್ ಹಾರಾಡಿ
ಕಾರ್ಯಕ್ರಮದ ಕೊನೆಯಲ್ಲಿ ನೂತನ ಕೋಶಾಧಿಕಾರಿ ಇಬ್ರಾಹಿಂ ಬಾತಿಷಾ ರವರು ಧನ್ಯವಾದ ಸಮರ್ಪಿಸಿದರು.ಕೊನೆಗೆ 3 ಸಲಾತ್ ನೊಂದಿಗೆ ಸಭೆಯನ್ನು ಮುಕ್ತಾಯ ಮಾಡಲಾಯಿತು.ಕಾರ್ಯ ಕ್ರಮವನ್ನು ಶಕೂರ್ ಹಾಜಿ ಕಲ್ಲೆಗ ರವರು ನಿರೂಪಿಸಿದರು.