ಪುತ್ತೂರು: ಕಳೆದ ಹದಿನೆಂಟು ವರ್ಷಗಳಿಂದ ವರ್ತಕರಿಗೆ, ಸಾರ್ವಜನಿರಿಗೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ಕುಂಬ್ರ ವರ್ತಕರ ಸಂಘವು ಮಳೆಗಾಲದ ವಿಶೇಷ ಕಾರ್ಯಕ್ರಮವಾಗಿ ವರ್ತಕ ಸ್ನೇಹ ಸಂಜೆ, ಸಾಧಕರಿಗೆ ಸನ್ಮಾನ ಹಾಗೂ ವಿಠಲ ನಾಯಕ್ ಕಲ್ಲಡ್ಕರವರ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಆ. 6ರಂದು ಸಂಜೆ ಕುಂಬ್ರ ರೈತ ಸಭಾಭವನದಲ್ಲಿ ನಡೆಯಲಿದೆಯೆಂದು ವರ್ತಕ ಸಂಘದ ಸಮಿತಿಯು ತಿಳಿಸಿದೆ.

ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಜು.30 ರಂದು ಕುಂಬ್ರ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿರುವ ವರ್ತಕರ ಸಂಘದ ಕಛೇರಿಯಲ್ಲಿ ನಡೆಯಿತು. ಪರ್ಪುಂಜ ರಾಜ್ ಕಾಂಪ್ಲೆಕ್ಸ್ ಮಾಲಕ ಪ್ರೇಮ್‌ರಾಜ್ ರೈಯವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಆಲ್‌ರಾಯ, ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ, ಮಾಜಿ ಅಧ್ಯಕ್ಷರಾದ ಎಸ್. ಮಾಧವ ರೈ ಕುಂಬ್ರ, ದಿವಾಕರ ಶೆಟ್ಟಿ, ಮೆಲ್ವಿನ್ ಮೊಂತೆರೋ ಹಾಗೂ ಪದಾಧಿಕಾರಿಗಳಾದ ರೇಷ್ಮಾ, ರಮ್ಯ ಶ್ರೀ, ಅಶ್ರಫ್, ಹನೀಫ್, ರಾಜೇಶ್ ರೈ ಪರ್ಪುಂಜ, ಸಂಶುದ್ದೀನ್ ಎ.ಆರ್, ಹನೀಫ್, ವಿಶ್ವನಾಥ ರೈ, ರಮೇಶ್ ಆಳ್ವ ಕಲ್ಲಡ್ಕ, ಪುರಂದರ ರೈ ಕೋರಿಕ್ಕಾರು,ಪದ್ಮನಾಭ ಆಚಾರ್ಯ, ಚರಿತ್ ಕುಮಾರ್, ಉದಯ ಆಚಾರ್ಯ ಕೃಷ್ಣನಗರ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಭವ್ಯ ರೈ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭದಲ್ಲಿ ವಿಶ್ವ ಸೌಟ್ ಜಾಂಬೂರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ದಕ್ಷಿಣ ಕೊರಿಯಾಕ್ಕೆ ತೆರಳುತ್ತಿರುವ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಭವ್ಯ ರೈಯವರ ಪುತ್ರ, ಸುದಾನ ಶಾಲಾ 10 ನೇ ತರಗತಿ ವಿದ್ಯಾರ್ಥಿ ವೃಷಭ್ ಆರ್.ರೈಯವರಿಗೆ ವರ್ತಕರ ಸಂಘದ ವತಿಯಿಂದ ಗೌರವಿಸಿ, ಬೀಳ್ಕೊಡುಗೆ ಮಾಡಲಾಯಿತು.


ಗೀತಾ ಸಾಹಿತ್ಯ ಸಂಭ್ರಮ: ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ವಿಠಲ ನಾಯಕ್ ಕಲ್ಲಡ್ಕರವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಮೊದಲಿಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು, ಕುಂಬ್ರದ ಉದ್ಯಮಿ, ಕೊಡುಗೈ ದಾನಿ ಕುಂಬ್ರ ಮೋಹನದಾಸ ರೈ ಸನ್ಮಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಾಧಕರಿಗೆ ಸನ್ಮಾನ: ನಿವೃತ್ತ ಕಂಪೌಂಡ ನರಸಿಂಹ ಭಟ್ ಪುತ್ತೂರು, ಕುಶಲಕರ್ಮಿ ಸುಂದರಿ ಆಚಾರಿ, ಕುಂಬ್ರ ಮೆಸ್ಕಾಂನ ಪವರ್‌ಮ್ಯಾನ್ ಚಂದ್ರಶೇಖರ ಬಿ.ಜೆ, ನಂದಿನಿ ಹಾಲು ಮಾರಾಟದಲ್ಲಿ ಗ್ರಾಮೀಣ ಭಾಗದಲ್ಲಿ ಪ್ರಥಮ ಪ್ರಶಸ್ತಿ ವಿಜೇತ ಮೆಲ್ವಿನ್ ಮೊಂತೆರೋ, ಎಸ್.ಎಸ್.ಎಲ್.ಸಿಯಲ್ಲಿ ಶೇ.93 ಅಂಕ ಪಡೆದ ಅನುಷ್ ರೈರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆಯೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.