dtvkannada

ಕಲ್ಲಡ್ಕ: ರೋಯಲ್ ಹೆಲ್ತ್ ಪ್ಲಸ್ ಕ್ಲಿನಿಕ್ ನೂತನ ಶಾಖೆ ಕಲ್ಲಡ್ಕ ಜಂಕ್ಷನ್ ನಲ್ಲಿ ಶುಭಾರಂಭಗೊಂಡಿತು.

ಉದ್ಘಾಟನೆಯನ್ನು ಇರ್ಶಾದ್ ದಾರಿಮಿ ಮಿತ್ತಬೈಲ್ ನೆರವೇರಿಸಿದರು. ‌ಉಸ್ಮಾನ್ ದಾರಿಮಿ ಖತೀಬರು ಕಲ್ಲಡ್ಕ ದುಃಆ ಆಶಿರ್ವಚನಗೈದರು.
ರಫೀಕ್ ಮದನಿ ಶೇರ ಹಿತವಚನ ನೀಡಿದರು. ಮತ್ತು ಮೋಟಿವೇಶನ್ ಸ್ಪೀಕರ್ ರಫೀಕ್ ಮಾಸ್ಟರ್ ಮಂಗಳೂರು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ಹನೀಫ್ ಹಾಜಿ ಕಲ್ಲಡ್ಕ, ರಹೀಂ ಸುಲ್ತಾನ್, ರಾಜೇಂದ್ರ ಹೊಳ್ಳ, ಜಿ.‌ ಎಸ್ ಸಿದ್ದೀಕ್, ಹಾರಿಸ್ ಅಮರ್ ಉಪಸ್ಥಿತರಿದ್ದರು.

ವೈದ್ಯರುಗಳಾದ ಡಾ.‌ಮುಬಶ್ಶಿರ್, ಡಾ. ಶ್ರೀಲತಾ ಭಟ್, ಡಾ. ಅಶ್ವಿನ್ ಆಳ್ವ ರವರು ವೈದ್ಯರಾದ ನೂರ ರವರಿಗೆ ಶುಭ ಆರೈಸಿದರು.

ಡಾ.ನೂರ ಹಾಗೂ ಹಲವು ಹೆಸರಾಂತ ವೈದ್ಯರುಗಳನ್ನು ಹೊಂದಿರುವ ಈ ಶಾಖೆಯಲ್ಲಿ ಎಲ್ಲಾ ರೀತಿಯ ಚಿಕಿತ್ಸೆ ಲಭ್ಯವಿರಲಿದೆ. ಪ್ರತಿನಿತ್ಯ ಬೆಳಗ್ಗೆ 9:00 ರಿಂದ ಸಂಜೆ 5:00ರವರೆಗೆ ವೈದ್ಯರು ಸೇವೆ ನೀಡಲು ಲಭ್ಯವಿರಲಿದ್ದಾರೆ ಎಂದು ಮಾಲಕರು ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!