ಉಪ್ಪಿನಂಗಡಿ: ಕಳೆದ 180 ದಿನಗಳ ಹಿಂದೆ ಮೆಕ್ಕಾ ಮತ್ತು ಮದೀನಾಕ್ಕೆ ಕಾಲ್ನಡಿಗೆಯೊಂದಿಗೆ ಹೊರಟಿದ್ದ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಪೆರಿಯಡ್ಕದ ನೌಶಾದ್ BKSರವರು ಇದೀಗ ದೆಹಲಿಗೆ ತಲುಪಿದ್ದಾರೆ.

ಕಳೆದ ಆರು ತಿಂಗಳ ಹಿಂದೆ ಉಪ್ಪಿನಂಗಡಿಯ ಪೆರಿಯಡ್ಕದಿಂದ ಹೊರಟಿದ್ದ ನೌಶಾದ್ ರವರು ಇದೀಗ ದೆಹಲಿಗೆ ತಲುಪಿದ್ದು ಬರೋಬ್ಬರಿ 2972 ಕಿಲೋ ಮೀಟರ್ ಕಾಲ್ನಡಿಗೆಯಲ್ಲೇ ಸಾಗಿದ್ದಾರೆ ಎನ್ನುವುದು ವಿಶೇಷ.
ಮುಸ್ಲಿಂರ ಪವಿತ್ರ ಕರ್ಮಗಳಲ್ಲಿ ಒಂದಾಗಿರುವ ಹಜ್ ಮತ್ತು ಉಮ್ರಾ ಕರ್ಮವನ್ನು ನಿರ್ವಹಿಸಿಲು (2024 ಸಾಲಿನ) ಈ ಯಾತ್ರೆಯು ಕೈಗೊಂಡಿದ್ದು 8500 ಕಿಲೋ ಮೀಟರ್ ನಡೆದುಕೊಂಡು ಹೋಗುವ ಉದ್ದೇಶವನ್ನಿಟ್ಟುಕೊಂಡಿರುವ ನೌಶಾದ್ ಈಗಾಗಲೇ 2972 ಕಿಮೀ ದಾಟಿದ್ದಾರೆ.


ಮಳೆ,ಬಿಸಿಲು ಇದು ಯಾವುದನ್ನು ಲೆಕ್ಕಿಸದೇ ತನ್ನ ಗುರಿಯಾದ ಮೆಕ್ಕಾವನ್ನು ಮುಂದಿರಿಸಿಕೊಂಡು ನನ್ನ ಮನಸ್ಸಿನಲ್ಲಿರುವ ಕನಸನ್ನು ಸಾಧಿಸಲು ರಾತ್ರಿ ಹಗಲೆನ್ನದೆ ಕಾಲ್ನಡಿಗೆಯೊಂದಿಗೆ ಸಾಗುತ್ತಿದ್ದೇನೆ ಎನ್ನುತ್ತಿದ್ದಾರೆ ನೌಶದ್‌ರವರು.
ನೌಶದ್‌ರವರು ಕಳೆದ ಆರು ತಿಂಗಳ ಹಿಂದೆ ಉಪ್ಪಿನಂಗಡಿಯ ಪೆರಿಯಡ್ಕದಿಂದ ಹೊರಟ ಸಂದರ್ಭದಲ್ಲಿ ಊರವರ ಪ್ರೋತ್ಸಾಹದೊಂದಿಗೆ ಹೊರಟಿದ್ದ ಯಾತ್ರೆಯು ಮಾಣಿ,ಮಂಗಳೂರು ರಸ್ತೆಯಾಗಿಯೇ ಸಾಗಿದ್ದು ಆದರೆ ಕರಾವಳಿ ಭಾಗದ ಒಂದಷ್ಟು ಜನರು ಅಷ್ಟೊಂದು ವಿಶೇಷತೆಯಾಗಿ ಕಂಡಿರದ ಕಾರಣ ನೌಶದ್‌ರವರಿಗೆ ದಾರಿಯುದ್ದಕ್ಕೂ ನಾಗರಿಕರ ಸಂಪರ್ಕ ಕರಾವಳಿ ಭಾಗದಲ್ಲಿ ಬಹಳ ಕಡಿಮೆಯಾಗಿತ್ತು.

ಆದರೆ ಕರಾವಳಿ ಕಳೆದು ಕರ್ನಾಟಕ ಬಾರ್ಡರ್ ದಾಟಿದ ನಂತರ ವಿಶೇಷ ವೆಂಬಂತೆ ನೌಶದ್‌ರವರ ಹಿಂದೆ ಜನ ಸಾಗರವೇ ಸೇರಿಕೊಂಡಿತ್ತು. ಎಷ್ಟೆಂದರೆ ಗುಜರಾತ್ ಗೋದ್ರಾ ಭಾಗದಲ್ಲಿ ನೌಶದ್‌ರವರಿಗೆ ನಡೆದಾಡಲು ಬಿಡದ ಜನರನ್ನು ಚದುರಿಸಲು ಪೊಲೀಸರು ಬರಬೇಕಾಗಿದ್ದು ನಂತರ ಪೊಲೀಸರ ಬೆಂಗಾವಲಿನೊಂದಿಗೆ ತನ್ನ ಯಾತ್ರೆಯನ್ನು ಮುಂದುವರಿಸಿದ್ದರು.
ಉಳಿದ ಎಲ್ಲಾ ರಾಜ್ಯಗಳಲ್ಲಿ ಕಾಲ್ನಡಿಗೆಯೊಂದಿಗೆ ದಾರಿಯುದ್ದಕ್ಕೂ ಸಾಗುತ್ತಿರಬೇಕಾದರೆ ನೌಶದ್‌ರವರು ಬರುವ ದಾರಿಯಲ್ಲಿ ಅವರನ್ನು ನೋಡಲಿಕ್ಕೊಸ್ಕೋರ ಕಾದು ಕುಳಿತುಕೊಳ್ಳುವ ಸನ್ನಿವೇಶವು ಕಂಡುಬಂದಿದ್ದು ಇದರ ವೀಡಿಯೋಗಳು ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲಾಗುತ್ತಿದೆ.

ಮಕ್ಕಳು ವಯಸ್ಕರು ಯುವಕರ ದಂಡೆ ನೌಶದ್‌ರವರನ್ನು ಕಾಣಲು ಬರುತ್ತಿರುವುದು ವಿಶೇಷವಾದರೆ ಇವರೆಲ್ಲರೂ ನನ್ನನ್ನು ಕಾಣಲು ಬರುತ್ತಿಲ್ಲ ಬದಲಾಗಿ ನಾನು ಹೋಗುತ್ತಿರುವ ಆ ಮಣ್ಣಿನಲ್ಲಿರುವ ಮೊಹಮ್ಮದ್ ಪೈಗಂಬರರ ಬಳಿ ಇರುವ ಮೊಹಬ್ಬತ್ತಿನಿಂದ ಜನ ಬರುತ್ತಿದ್ದಾರೆ ಹೊರತು ನಾನು ಏನು ಅಲ್ಲ ನಾನು ಕೂಡ ಅವರಂತೆಯೇ ಪೈಗಂಬರರ ಅನುಯಾಯಿಯಾಗಿ ದ್ದು ನಾನು ಕೂಡ ಆ ಮಣ್ಣಿಗೆ ತಲುಪುವ ಕಾತರದಲ್ಲಿರುವ ಒರ್ವ ಸಾಧಾರಣ ವ್ಯಕ್ತಿಯಾಗಿದ್ದೇನೆ ಎನ್ನುತ್ತಾರೆ ನೌಶದ್‌ರವರು.
ಈಗಾಗಲೇ ಆರು ರಾಜ್ಯಗಳನ್ನು ಕಾಲ್ನಡಿಗೆಯೊಂದಿಗೆ ಸಾಗಿರುವ ನೌಶದ್‌ರವರು ಇನ್ನು 5 ದೇಶಗಳನ್ನು ದಾಟಬೇಕಾಗಿದ್ದು ಭಾರತ ಸೇರಿ ಆರು ದೇಶಗಳಾಗಲಿವೆ.ಇನ್ನು ಕಾಲ್ನಡಿಗೆಯಲ್ಲಿ ಇವೆಲ್ಲವನ್ನು ಪೂರ್ಣಗೊಳಿಸಿದರೆ ಕಾಲ್ನಡಿಗೆಯಲ್ಲಿ ಹಜ್ ಕರ್ಮ ನಿರ್ವಹಿಸಿದ ಮೊದಲ ಕನ್ನಡಿಗ ಹಾಗೂ ಆರು ದೇಶಗಳನ್ನು ಕಾಲ್ನಡಿಗೆಯಲ್ಲಿ ಪೂರ್ಣಗೊಳಿಸಿದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

8500 ಕಿ.ಮೀಟರಿನಲ್ಲಿ ಭಾರತ, ಪಾಕಿಸ್ತಾನ,ಯಮಾನ್,ಓಮಾನ್ ದುಬೈ,ಸೌದಿ ಅರೇಬಿಯಾ ದಾಟಿ ಮೆಕ್ಕಾ ಮದೀನಾ ತಲುಪಿದ್ದಾರೆ ಎಂದು ತಿಳಿದು ಬಂದಿದ್ದು ಶ್ರೀಯುತ ನೌಶಾದ್ BKSರವರು ತಂದೆ ಮಹಮ್ಮದ್ BKS ಮತ್ತು ತಾಯಿ ನಬೀಸಾ BKS ರವರ ಪುತ್ರನಾಗಿರುತ್ತಾರೆ.