ಮಂಗಳೂರು: 20 ತಿಂಗಳ ಕಾಲ ಕೇವಲ ಸಾವಿರ ರೂಪಾಯಿ ಕಟ್ಟಿ ಗೃಹಪಯೋಗಿ ಪಡೆದುಕೊಳ್ಳುವ ಜೊತೆಗೆ ಪ್ರತಿ ತಿಂಗಳು ಬಂಪರ್ ಡ್ರಾಗಳ ಮೂಲಕ 2BHK ಮನೆ ನೀಡುವ ಬೃಹತ್ ಸ್ಕೀಮ್ ಯೋಜನೆಗೆ ವಿಷನ್ ಇಂಡಿಯಾ ಸಂಸ್ಥೆ ಆ.4ರಂದು ಮಂಗಳೂರಿನ ಪುರಭವನದಲ್ಲಿ ಅದ್ಧೂರಿಯಾಗಿ ಚಾಲನೆ ನೀಡಿದೆ.
ತಿಂಗಳಿಗೆ ಸಾವಿರ ರೂಪಾಯಿಯಂತೆ ಇಪ್ಪತ್ತು ತಿಂಗಳ ಕಾಲ ಕಟ್ಟಿ ಗೃಹಪಯೋಗಿ ವಸ್ತುಗಳ ಖರೀದಿ ಹಾಗೂ ಪ್ರತಿ ತಿಂಗಳು ನಡೆಯುವ ಡ್ರಾ ಮೂಲಕ 6 ಕನಸಿನ ಮನೆ, 2 ಸೆಲೆರಿಯೋ ಕಾರುಗಳು, ಪಲ್ಸರ್ ಬೈಕ್, ರಾಯಲ್ ಎನ್‌ಫಿಲ್ಡ್ ಬುಲ್ಲೇಟ್ ಸೇರಿದಂತೆ 16 ದ್ವಿಚಕ್ರ ವಾಹನಗಳು,13 ಚಿನ್ನಾಭರಣಗಳು, 20 ಲಕ್ಷ ನಗದು, 11 ಸಮಾಧಾನಕರ ಬಹುಮಾನಗಳು ಪ್ರತಿಯೊಬ್ಬ ಸದಸ್ಯರಿಗೂ. ಜೊತೆಗೆ 250ಕ್ಕಿಂತಲೂ ಅಧಿಕ ಸರ್ಪ್ರೈಸ್ ಗಿಫ್ಟ್ ನೀಡುವ ಮಹತ್ವದ ಯೋಜನೆಯ ಬಗ್ಗೆ ಸಂಸ್ಥೆಯ ಮಾಲಕರಾದ ಸಿರಾಜ್ ಎರ್ಮಾಳ್ ಜನತೆಯ ಮುಂದಿಟ್ಟರು.
ಕಾರ್ಯಕ್ರಮದ ನಿರೂಪಕರಾದ ಅಂತಾರಾಷ್ಟ್ರೀಯ ಹೋಸ್ಟ್ ಆ್ಯಂಡ್ ದೋಸ್ತ್ ಶಾಹೀಲ್ ಅವರ ಕಂಚಿನ ಕಂಠದಲ್ಲಿ ಶುರುವಾದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ಮಧ್ಯಮ ಹಾಗೂ ಬಡ ವರ್ಗದ ಜನತೆಯ ಮಹತ್ವಾಕಾಂಕ್ಷೆಯ ಯೋಜನೆ “ವಿಷನ್ ಇಂಡಿಯಾ” ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಿಯಾಝ್ ಫರಂಗಿಪೇಟೆ ಶುಭ ಹಾರೈಸಿದರು. ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್ ಮಾತಾನಾಡಿ, ಅನಗತ್ಯ ಖರ್ಚಿಗೆ ತಡೆ ಹಾಕಿ ಇಂತಹ ಯೋಜನೆಗಳಲ್ಲಿ ಕೂಡಿಟ್ಟರೆ ಜನರು ಅದರ ಅನುಕೂಲಗಳನ್ನು ಪಡೆಯಬಹುದು ಎಂದರು.
ಇದೆ ವೇಳೆ ಪ್ರಕಾಶ್ ಗರೋಡಿ, ಸ್ಥಳೀಯ ಕಾರ್ಪೊರೇಟರ್ ಲತೀಫ್ ಕಂದುಕ, ಚಿತ್ರನಟ ಪ್ರಕಾಶ್ ಧರ್ಮ ನಗರ ಎಸ್ಡಿಪಿಐ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆ ಮಜಲು, ಯುನೈಟೆಡ್ ಎಂಪವರ್ಮೆಂಟ್ ಅಸೋಶಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಹಜಾಜ್, ಇಕ್ರಾ ಕೋಚಿಂಗ್ ಸೆಂಟರ್ ಮಾಲಕ ಆಶಿಕ್ ಸುರತ್ಕಲ್, ಕೊಸ್ಟಲ್ ಫ್ರೆಂಡ್ಸ್ ಸ್ಥಾಪಕಧ್ಯಕ್ಷರಾದ ಶರೀಫ್ ಅಬ್ಬಾಸ್ ವಳಾಲ್, ಹಾಲಿ ಅಧ್ಯಕ್ಷರಾದ ಇಮ್ತಿಯಾಝ್ ಎಸ್.ಎಮ್, ವಿನೋದ್ ಬೊಲ್ಲೂರು ಮಾಜಿ ಜಿಲ್ಲಾ ಪಂಚಾಯತ್, ರಾಜೇಶ್ ಕುಮಾರ್ ನಿರ್ದೇಶಕರು ಸಿಎಮ್ಎಸ್ ಉಡುಪಿ, ಮೋಹನ್ ದಾಸ್ ಪಡಪಣಂಬೂರ್, ಇಮ್ತಿಯಾಝ್ ಸೌಲ್ ಅರ್ಕಿಟೆಕ್, ಪ್ರವೀಣ್ ಕುಮಾರ್ ಮೊಕ್ತೆಸರು, ಶಾಂತಿಮೊಗರು ಸುಬ್ರಹ್ಮಣ್ಯ ದೇವಸ್ಥಾನ ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ವಿಷನ್ ಇಂಡಿಯನ್ ಸಂಸ್ಥೆಯ ಸಾಧಕಾರದ ಸಲಾಂ ಸಮ್ಮಿ ತಾಳಿತ್ತನೂಜಿ ಲೇಖಕರು, ಸಾಮಾಜಿಕ ಚಿಂತಕರು, ಖಾಲೀದ್ ಡಯಾಲಿಸಿಸ್ಟ್ ದೇರಳಕಟ್ಟೆ, ರಫೀಖ್ ಹಾಗೂ ಮತ್ತಿತ್ತರರನ್ನು ಸನ್ಮಾನಿಸಿಲಾಯಿತು. ಇದೇ ವೇಳೆ ಮಾಲಕರಾದ ಕೀರ್ತೇಶ್ ಶೆಟ್ಟಿ, ಅನ್ವರ್ ಷಾ, ದಾವೂದ್ ವಿಷನ್ ಇವೆಂಟ್ಸ್, ಸಿದ್ದೀಕ್, ಅಶ್ರಫ್ ಕೃಷ್ಣಾಪುರ ಮತ್ತಿತ್ತರರು ಉಪಸ್ಥಿತರಿದ್ದರು.





