ಪುತ್ತೂರು: ಎಸ್ಸೆಸ್ಸೆಫ್ ನ 50ನೇ ವಾರ್ಷಿಕ ದ ಗೋಲ್ಡನ್ ಫಿಫ್ಟಿ ಸಮ್ಮೇಳನ ಸೆಪ್ಟೆಂಬರ್ 10 ರಂದು ಬೆಂಗಳೂರಿನಲ್ಲಿ ಆಚರಿಸಲಾಗುತ್ತಿದೆ. ಇದರ ಪ್ರಯುಕ್ತ ಪುತ್ತೂರು ಡಿವಿಶನ್ ವ್ಯಾಪ್ತಿಯ 41 ಶಾಖೆಗಳಿಗೆ ನಾಯಕರು ಗ್ರಾಮ ಸವಾರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಚೆನ್ನಾವರ ಶಾಖೆಯಲ್ಲಿ ಅದ್ದೂರಿಯ ಸ್ವಾಗತ ಮಾಡಲಾಯ್ತು. ಸಯ್ಯಿದ್ ಸಾಬಿತ್ ತಂಙಳ್ ಪಾಟ್ರಕೋಡಿ ನಾಯಕತ್ವ ದ ಡಿವಿಶನ್ ತಂಡವನ್ನು ಪಾಲ್ತಾಡ್ ನಲ್ಲಿ ಬರಮಾಡಿಕೊಂಡು ಚೆನ್ನಾರ್ ತನಕ ಜಾಥಾದ ಮೂಲಕ ಕರೆ ತರಲಾಯಿತು. ಡಿವಿಶನ್ ಅಧ್ಯಕ್ಷ ಅಬ್ದುಲ್ ಕರೀಮ್ ಬಾಅಸನಿ ರವರ ಅಧ್ಯಕ್ಷತೆಯಲ್ಲಿ ನಡೆದ ಗೋಲ್ಡನ್ ಫಿಫ್ಟಿ ಪ್ರಚಾರ ಸಭೆಯನ್ನು ಎಸ್ ವೈಎಸ್ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಹನೀಫಿ ಉದ್ಘಾಟಿಸಿ ಮಾತನಾಡಿದರು.

ಕಳೆದ 28 ವರ್ಷಗಳಿಂದ ಚೆನ್ನಾವರ ಎಸ್ಸೆಸ್ಸೆಫ್ ಎಂಬ ವಿಷಯವನ್ನು ವಿಸ್ತರಿಸಿ ಅಬ್ದುಲ್ ಅಝೀಝ್ ಚೆನ್ನಾರ್ ರವರು ಸರ್ವರನ್ನೂ ಸ್ವಾಗತಿಸಿದರು. ರಫೀಕ್ ಬಾಅಸನಿ , ಸಿನಾನ್ ಸಖಾಫಿ ಹಸನ್ ನಗರ , ಹಾರಿಸ್ ಸ್ನೇಹ ಜೀವಿ ಅಡ್ಕ ಮೊದಲಾದವರು ಸಾಂದರ್ಭಿಕವಾಗಿ ಮಾತನಾಡಿ ಎಸ್ಸೆಸ್ಸೆಫ್ ನ ಗೋಲ್ಡನ್ ಫಿಫ್ಟಿ ಸಮ್ಮೇಳನ ದ ಸಂದೇಶವನ್ನು ಸಾರಿದರು. ಸಯ್ಯಿದ್ ಸಾಬಿತ್ ಸಖಾಫಿ ತಂಙಳ್ ರವರು ಪ್ರಾರ್ಥನೆ ಮಾಡಿದರು. ಎಸ್ಸೆಸ್ಸೆಫ್ ಡಿವಿಷನ್ ಪ್ರ.ಕಾರ್ಯದರ್ಶಿ ಮುಹ್ಸಿನ್ ಕಟ್ಟತ್ತಾರ್ ಶಾಖಾ ಎಸ್ಸೆಸ್ಸೆಫ್ ನ ನಾಯಕರೊಂದಿಗೆ ಸಾಂಘಿಕ ಸಂವಾದವನ್ನು ನಡೆಸಿದರು, ಡಿವಿಶನ್ ನಾಯಕರು ಶಾಖಾ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಡಿವಿಷನ್ ಕೋಶಾಧಿಕಾರಿ ಖಲಂದರ್ ಪಾಟ್ರಕೋಡಿ, ಶಫೀಕ್ ಮಾಸ್ಟರ್ ತಿಂಗಳಾಡಿ, ಸಲಾಂ ಹನೀಫಿ ಕಬಕ, ಬೀಟಿಗೆ, ಅಶ್ಫಾಕ್ ಸಅದಿ , ಮಾಡಾವು ಸೆಕ್ಟರ್ ಕಾರ್ಯದರ್ಶಿ ಶಹೀಮ್, ಕೋಶಾಧಿಕಾರಿ ಮುನಾಝ್, ಕೆ ಎಮ್ ಜೆ ಕಾರ್ಯದರ್ಶಿ ಮುಹಮ್ಮದ್ ಬಾಯಂಬಾಡಿ, ಇಸ್ಮಾಯಿಲ್ ಸಅದಿ ಚೆನ್ನಾರ್, ಎಸ್ ವೈಎಸ್ ಅಧ್ಯಕ್ಷ ಮೊಹಮ್ಮದ್ ಕುಂಡಡ್ಕ, ಅಬ್ಬಾಸ್ ಎನ್, ಶಾಕಿರ್ ಕೊಳ್ತಿಗೆ, ಶಫೀಕ್ ಬಾಯಂಬಾಡಿ, ಉಮರ್ ಮುಸ್ಲಿಯಾರ್ ಪಿಎಮ್, ಅಬ್ದುಸ್ಸತ್ತಾರ್, ಸಿದ್ದೀಕ್ ಸಿ, ಎಸ್ಸೆಸ್ಸೆಫ್ ಅಧ್ಯಕ್ಷ ನಿಝಾರ್ ಸಅದಿ, ಕಾರ್ಯದರ್ಶಿ ಖಾಲಿದ್ ಹಿಮಮಿ, ವಫೀಕ್ ಅಹ್ಮದ್, ಇಸ್ಮಾಯಿಲ್ ಅನ್ವರ್, ಉಮರ್ ಕುಂಡಡ್ಕ, ಮೀಡಿಯಾ ಕಾರ್ಯದರ್ಶಿ ಮುಂಝಿರ್ ಮೊದಲಾದವರು ಉಪಸ್ಥಿತರಿದ್ದರು.