ಕೇರಳ: ಇನ್ನು ಮುಂದಕ್ಕೆ ಕೇರಳ ರಾಜ್ಯದ ಹೆಸರನ್ನು ಬದಲಾಯಿಸಿ “ಕೇರಳಂ” ಎಂದು ಮರುನಾಮಕರಣ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರಿ ಮುಖ್ಯಮಂತ್ರಿ ಪಿನರಾಯಿ ವಿಜಯನ್‌ರವರು ಮಂಡಿಸಿದ ನಿರ್ಣಯಕ್ಕೆ ಕೇರಳ ವಿಧಾನಸಭೆ ಬುಧವಾರ ಸದ್ವಾನುಮತದ ಒಪ್ಪಿಗೆ ನೀಡಿದೆ.
ಕೇಂದ್ರ ಜಾರಿಗೆ ತರಲು ಮುಂದಾಗಿರುವ ಏಕರೂಪ ನಾಗರಿಕ ಸಂಹಿತೆ ವಿರುದ್ಧ ಕೇರಳ ವಿಧಾನ ಸಭೆ ಅವಿರೋಧವಾಗಿ ನಿರ್ಣಯ ಅಂಗೀಕರಿಸಿದ ಮರುದಿನವೇ ರಾಜ್ಯದ ಹೆಸರು ಬದಲಾವಣೆಗೆ ಮುಂದಾಗಿದೆ.
ಸಂವಿಧಾನದ ಎಂಟನೇ ಪರಿಚ್ಛೇಧ ಸೇರಿದಂತೆ ಎಲ್ಲ ಭಾಷೆಗಳಲ್ಲಿ ರಾಜ್ಯದ ಹೆಸರನ್ನು “ಕೇರಳಂ ” ಎಂದು ಕೇಂದ್ರ ಸರಕಾರ ಬದಲಾಯಿಸಬೇಕು ಎನ್ನುವ ನಿರ್ಣಯವನ್ನು ಸಿಎಂ ಪಿಣರಾಯಿ ವಿಜಯನ್ ಮಂಡಿಸಿದರು
ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಮೈತ್ರಿಕೂಟ ಯುಡಿಎಫ್ ಯಾವುದೇ ಬದಲಾವಣೆ ಅಥವಾ ತಿದ್ದುಪಡಿ ಇಲ್ಲದೇ ಒಪ್ಪಿಗೆ ಸೂಚಿಸಿತು.
ಇದಾದ ನಂತರ ಸ್ಪೀಕರ್ ಎ.ಎನ್ .ಶಂಶೀರ್ ಅವರು ನಿರ್ಣಯ ಸರ್ವಾನುಮತದಿಂದ ಅಂಗೀಕಾರಗೊಂಡಿದೆ ಎಂದು ಘೋಷಿಸಿದರು.
ಸಂವಿಧಾನದ 3ನೇ ವಿಧಿಯಡಿ ಅದನ್ನು “ಕೇರಳಂ” ಎಂದು ಮರುನಾಮಕರಣ ಮಾಡಲು ತುರ್ತು ಕ್ರಮಗಳ ಅಗತ್ಯವಿದೆ ” ಎಂದು ನಿರ್ಣಯವು ಹೇಳಿದೆ
ಸಂವಿಧಾನದ 3ನೇ ವಿಧಿಯು ಹೊಸ ರಾಜ್ಯಗಳ ರಚನೆ ಮತ್ತು ಪ್ರದೇಶಗಳು , ಗಡಿಗಳು ಅಥವಾ ಅಸ್ತಿತ್ವದಲ್ಲಿರುವ ರಾಜ್ಯಗಳ ಹೆಸರುಗಳ ಬದಲಾವಣೆಗೆ ಸಂಬಂಧಿಸಿದ್ದಾಗಿದೆ ಎಂದು ತಿಳಿದು ಬಂದಿದೆ.