dtvkannada

'; } else { echo "Sorry! You are Blocked from seeing the Ads"; } ?>

ಕಾರವಾರ: ಅಕ್ಕ ತಂಗಿಯರು ಆಟವಾಡುತ್ತಿದ್ದ ವೇಳೆ ಮಗುವೊಂದು ತನ್ನ ಅಕ್ಕ ಚಾಕ್ಲೇಟ್ ಎಂದು ಕೊಟ್ಟ ಪ್ಯಾಂಟ್ ಬಟನ್ ನುಂಗಿ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆ ಭಟ್ಕಳ ನಗರದ ರಂಗೀಕಟ್ಟೆ ನಿವಾಸಿ ಪಾಲಿಷ್ ಕಮಲ ಕಿಶೋರ ಪುತ್ರಿ ಅಮೃತ (2 ತಿಂಗಳು) ಬಟನ್ ನುಂಗಿದ್ದ ಪುಟ್ಟ ಮಗು ಎಂದು ತಿಳಿದು ಬಂದಿದೆ.

2 ವರ್ಷದ ಮಗು ನರ್ಮತಾ ಆಟವಾಡುತ್ತಾ ಚಾಕ್ಲೇಟ್ ಎಂದು ಪ್ಯಾಂಟ್ ಬಟನ್ ಅನ್ನು 2 ತಿಂಗಳ ಮಗು ಅಮೃತಾಳಿಗೆ ಕೊಟ್ಟಿದ್ದಾಳೆ.ಏನೂ ತಿಳಿಯದ ಮಗು ಚಾಕಲೇಟ್ ಎಂದು ನುಂಗಿದೆ.ಪರಿಣಾಮ ಮಗುವಿಗೆ ಉಸಿರಾಡಲು ತೊಂದರೆಯಾಗಿದೆ.

'; } else { echo "Sorry! You are Blocked from seeing the Ads"; } ?>

ಒದ್ದಾಡುತ್ತಿದ್ದ ಮಗುವನ್ನು ಕಂಡ ಪೋಷಕರು ಕೂಡಲೇ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.ವೈದ್ಯರ ಯಶಸ್ವಿ ಚಿಕಿತ್ಸೆಯಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ ಎನ್ನಲಾಗಿದೆ.

ಸರ್ಕಾರಿ ಆಸ್ಪತ್ರೆಯ ಇಎನ್‍ಟಿ ತಜ್ಞ ಡಾ. ಸತೀಶ್ ನೇತೃತ್ವದ ವೈದ್ಯರ ತಂಡದಿಂದ ಯಶಸ್ವಿ ಚಿಕಿತ್ಸೆ ನಡೆದಿದೆ.ವೈದ್ಯರು ಕೊಳವೆ ಮೂಲಕ ಬಟನ್ ಹೊರ ತೆಗೆದು ಪುಟ್ಟ ಕಂದಮ್ಮನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!