dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು:ಬಡವರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ತಾನು ಶಾಸಕನಾಗಿ ಮೊದಲ ಆದ್ಯತೆ ನೀಡುತ್ತೇನೆ. ಸರಕಾರದ ಯೋಜನೆಗಳು ಎಲ್ಲ ಅರ್ಹ ಫಲಾನುಭವಿಗಳಿಗೂ ಸಿಗುವಂತಾಗಬೇಕು ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಬಡಗನ್ನೂರು ವಲಯ ಕಾಂಗ್ರೆಸ್ ವತಿಯಿಂದ ಬಡಗನ್ನೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.
ಐದು ಗ್ಯಾರಂಟಿ ಯೋಜನೆಗಳು ಇಂದು ಎಲ್ಲರ ಮನೆಯನ್ನು ಬೆಳಗಿಸಿದೆ. ಅಧಿಕಾರಕ್ಕೆ ಬಂಧ ಮೂರೇ ತಿಂಗಳೊಳಗೆ ಗ್ಯಾರಂಟಿಯನ್ನು ಈಡೇರಿಸಿದ್ದೇವೆ ಇದು ಕಾಂಗ್ರೆಸ್ ಪಕ್ಷದ ತಾಕತ್ತು ರಂದು ಶಾಸಕರು ಹೇಳಿದರು.

ಟೀಕೆ ಮಾಡುವವರು ಮಾಡುತ್ತಲೇ ಇದ್ದಾರೆ, ಇವರ ಟೀಕೆಗಳ ನಡುವೆಯೃ ಸರಕಾರ ಐದು ಗ್ಯಾರಂಟಿಯನ್ನು ಜಾರಿಗೆ ತಂದಿದ್ದು ಜನತೆಗೆ ಕೊಟ್ಟ ಮಾತನ್ನು ಸರಕಾರ ಈಡೇರಿಸಿದೆ.
ಭೃಷ್ಟಾಚಾರ ಮುಕ್ತ ತಾಲೂಕಾಗಿ ಪುತ್ತೂರು ಪರಿವರ್ತನೆಯಾಗಲಿದೆ. ಯಾವ ಅಧಿಕಾರಿಗಳಿಗೂ ನಯಾ ಪೈಸೆ ಕೊಡಬೇಡಿ. 3400 ಅಕ್ರಮ ಸಕ್ರಮ ಕಡತ ಕಚೇರಿಯಲ್ಲಿ ಕೊಳೆಯುತ್ತಿದೆ.

'; } else { echo "Sorry! You are Blocked from seeing the Ads"; } ?>

ಉಳ್ಳವರು ಹಣ ಕೊಟ್ಟು ಮಾಡಿಸಿದ್ದಾರೆ.ಒಂದು ತಿಂಗಳೊಳಗೆ ಅಕ್ರಮಸಕ್ರಮ ಸಮಿತಿ ರಚನೆಯಾಗಲಿದ್ದು ನಯಾ ಪೈಸೆ ಲಂಚವಿಲ್ಲದೆ ಕೆಲಸ ಮಾಡಿಸುತ್ತೇನೆ ಎಂದು ಶಾಸಕರು ಹೇಳಿದರು.ಅಭಿವೃದ್ದಿಯಲ್ಲಿ ಎಂದಿಗೂ ರಾಜಕೀಯ ಮಾಡಲಾರೆ. ಬೇರೆ ಪಕ್ಷದವರಿಗೂ ನಾನೇ ಶಾಸಕನಾಗಿದ್ದು ನಿಮ್ಮ ಕೆಲಸಗಳಿದ್ದರೆ ನನ್‌ ಕಚೇರಿಗೆ ಬನ್ನಿ ಎಂದು ವಿರೋಧ ಪಕ್ಷದವರಿಗೆ ಶಾಸಕರು ಮನವಿ ಮಾಡಿದರು.

ಇಲ್ಲಿನ ಯುವಕರಿಗೆ ಉದ್ಯೋಗವನ್ನು ಕೊಡಿಸಬೇಕಿದೆ. ಬಡವರ,ನೊಂದವರ ಕಣ್ಣೀರೊರೆಸುವ ಕೆಲಸವನ್ನು‌ಮಾಡಬೇಕಿದೆ ಎಂದು ಶಾಸಕರು ಹೇಳಿದರು.

ಕಚೇರಿಗೆ ಬನ್ನಿ
ಮುಂದಿನ ಕೆಲವೇ ದಿನಗಳಲ್ಲಿ ತನ್ನ ಕಚೇರಿ ಆರಂಭವಾಗಲಿದ್ದು ನಿಮ್ಮ ಯಾವುದೇ ಅರ್ಜಿಗಳಿದ್ದರೂ ಕಚೇರಿಗೆ ಬಂದು ಕೊಡಿ ಅದಕ್ಮೆ ಸ್ಪಂದಿಸುವ ಕೆಲಸವನ್ನು ಮಾಡುತ್ತೇನೆ.94 ಸಿ ಅರ್ಜಿ ಹಾಕಿದವರಿಗೆಲ್ಲರಿಗೂ ಹಕ್ಕುಪತ್ರ ಕೊಡಿಸುತ್ತೇನೆ, ಫ್ಲಾಟಿಂಗ್ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ‌ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ,ಈಶ್ವರಮಂಗಲ ಮಂಡಲ ಪಂಚಾಯತ್ ಮಾಜಿ ಉಪ ಪ್ರಧಾನ ಬಾಲಕೃಷ್ಣ ರೈ ಕುದ್ದಾಡಿ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದಾಲಿ, ಗ್ರಾ.ಪಂ ಮಾಜಿ ಅಧ್ಯಕ್ಷೆ ಶ್ರೀಮತಿ ಕೆ, ಸದಸ್ಯರಾದ ರವಿರಾಜ ರೈ ಸಜಂಕಾಡಿ, ಜ್ಯೋತಿ ಅಂಬಟೆಮೂಲೆ, ಧರ್ಮೇಂದ್ರ ಪದಡ್ಕ, ಕಲಾವತಿ ಗೌಡ ಪಟ್ಲಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು

ಜಿಲ್ಲಾ ಕಾಮಹಮ್ಮದ್ ಬಡಗನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಮಾಜಿ ಸದಸ್ಯ ಗುರುಪ್ರಸಾದ್ ವಂದಿಸಿದರು.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!