dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಕರ್ನಾಟಕ ರಬ್ಬರ್ ನಿಗಮದಲ್ಲಿ ದಿನಗೂಲಿ ಕಾರ್ಮಿಕರಿಗೆ ಬಾಕಿ ಇರುವ ಬೋನಸ್ ನ್ನು ವಾರದೊಳಗೆ ಪಾವತಿ ಮಾಡುವುದಾಗಿ ಅರಣ್ಯ ಸಚಿವ ಈಶ್ವರಖಂಡ್ರೆ ಒಪ್ಪಿಕೊಂಡಿದ್ದಾರೆ.

ಕಳೆದ ೫೦ ವರ್ಷಗಳಿಂದ ಕರ್ನಾಟಕ ರಬ್ಬರ್ ನಿಗಮದಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಪ್ರತೀ ದೀಪಾವಳಿ ಸಮಯದಸಲ್ಲಿ ೨೦ ಶೇ. ಬೋನಸ್ ನೀಡುವುದಾಗಿ ಸರಕಾರ ತಿಳಿಸಿತ್ತು. ಆದರೆ ಕಳೆದ ಸಾಲಿನಲ್ಲಿ ೨೦ ಶೇ. ಬೋನಸ್‌ನಲ್ಲಿ ಕೇವಲ೮.೬೭% ಮಾತ್ರ ನೀಡಲಾಗಿತ್ತು. ಉಳಿದ ೧೧.೩೩ ಬೋನಸ್ ಬಾಕಿ ಇರಿಸಲಾಗಿತ್ತು.ಬೋನಸ್ ಬಾಕಿ ಇರಿಸಿರುವ ಬಗ್ಗೆ ಪುತ್ತೂರು, ಸುಳ್ಯ ಮತ್ತು ಕಡಬ ಭಾಗದ ಕಾರ್ಮಿಕರು ಪುತ್ತೂರು ಶಾಸಕರಾದ ಆಶೋಕ್ ರೈಯವರಲ್ಲಿ ಮನವಿ ಮಾಡಿ ಸರಕಾರದಿಂದ ಬೋನಸ್ ತೆಗೆಸಿಕೊಡುವಂತೆ ಕೇಳಿಕೊಂಡಿದ್ದರು.

'; } else { echo "Sorry! You are Blocked from seeing the Ads"; } ?>

ಈ ಸಂದರ್ಭದಲ್ಲಿ ಭರವಸೆ ನೀಡಿದ್ದ ಶಾಸಕರು ಈ ಬಗ್ಗೆ ಅರಣ್ಯ ಸಚಿವರನ್ನು ಭೇಟಿಯಗಿ ಅವರ ಜೊತೆ ಖುದ್ದು ಮಾತುಕತೆ ನಡೆಸಿ ಬಾಕಿ ಇರುವ ಬೋನಸ್ ಪಾವತಿ ಮಾಡುವಂತೆ ಮನವಿ ಮಾಡುವುದಾಗಿಯೂ ಮತ್ತು ಈ ವಿಚಾರವನ್ನು ಸರಕಾರದ ಗಮನಕ್ಕೆ ತರುವುದಾಗಿ ಹೇಳಿದ್ದರು. ಕಾರ್ಮಿಕರ ಬೋನಸ್ ಬಾಕಿ ಇರಿಸಿರುವ ವಿಚಾರವನ್ನು ಶಾಸಕರಾದ ಅಶೋಕ್ ರೈ ಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ತಿಳಿಸಿದ್ದರು.

ಆ. ೨೫ ರಂದು ಈ ಬಗ್ಗೆ ಸಚಿವರನ್ನು ಭೇಟಿಯಾದ ಶಾಸಕ ಅಶೋಕ್ ರೈ ಬಾಕಿ ಇರುವ ಬೋನಸ್ ನ್ನು ಕಾರ್ಮಿಕರಿಗೆ ನೀಡುವ ಬಗ್ಗೆ ಅರಣ್ಯ ಸಚಿವರಾದ ಈಶ್ವರಖಂಡ್ರೆ ಜೊತೆ ಚರ್ಚೆ ನಡೆಸಿದ್ದು ಈ ವೇಳೆ ಮಾತನಾಡಿದ ಸಚಿವರು ಒಂದು ವಾರದೊಳಗೆ ಬಾಕಿ ಇರುವ ಬೋನಸನ್ನು ಕಾರ್ಮಿಕರಿಗೆ ನೀಡಲು ಹಣಕಾಸು ಇಲಾಖೆಯು ಅನುಮತಿ ನೀಡಿದ್ದು ಬೋನಸ್ ನೀಡುವುದಾಗಿ ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

ಎಷ್ಟು ಕಾರ್ಮಿಕರು?
ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕು ವ್ಯಾಪ್ತಿಯಲ್ಲಿ ಕರ್ನಾಟಕ ರಬ್ಬರ್ ನಿಗಮದಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುವ ಸುಮಾರು ೧೫ ಸಾವಿರ ಕಾರ್ಮಿಕರಿದ್ದಾರೆ. ಈ ಕಾರ್ಮಿಕರು ಹೆಚ್ಚು ದುಡಿಯಬೇಕು ಎಂಬ ಉದ್ದೇಶದಿಂದ ಸರಕಾರ ಇವರಿಗೆ ಬೋನಸ್ ನೀಡುವುದಾಗಿ ಹೇಳಿತ್ತು. ಪ್ರತೀ ದೀಪಾವಳಿ ಸಮಯದಲ್ಲಿ ಕಾರ್ಮಿಕರಿಗೆ ಅವರು ಮಾಡಿರುವ ಕೆಲಸದ ಆಧಾರದ ಮೇಲೆ ೨೦ ಶೇ ಬೋನಸ್ ನೀಡುತ್ತಿತ್ತು. ಆದರೆ ಕಳೆದ ಬಾರಿ ಪೂರ್ತಿ ಬೋನಸ್ ನೀಡಿರಲಿಲ್ಲ. ಇದೀಗ ಪುತ್ತೂರು ಶಾಸಕರಾದ ಅಶೋಕ್ ರೈಯವರ ಮುತುವರ್ಜಿಯಿಂದ ಸುಮಾರು ೧೫ ಸಾವಿರ ಕಾರ್ಮಿಕ ಕುಟುಂಬಗಳಿಗೆ ಬೋನಸ್ ಲಭಿಸುವಂತಾಗಿದೆ.

ಹೇಳಿಕೆ: ಕೆಎಫ್‌ಡಿಸಿ ನಿಗಮದಲ್ಲಿ ದಿನಗೂಲಿ ನೌಕರರ ಬೋನಸ್ ಬಾಕಿ ಇರಿಸಿದ ಬಗ್ಗೆ ಕಾರ್ಮಿಕರು ನನ್ನ ಗಮನಕ್ಕೆ ತಂದಿದ್ದರು. ಈ ಬಗ್ಗೆ ನಾನು ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರಲ್ಲಿ ಮನವಿ ಮಾಡಿದ್ದೆ. ಆ. ೨೫ ರಂದು ಅರಣ್ಯ ಸಚಿವರು ಸೀಎಂ ಆದೇಶದ ಮೇರೆಗೆ ಬೋನಸ್ ನೀಡಲು ಒಪ್ಪಿಕೊಂಡಿದ್ದು ಮುಂದಿನ ವಾರ ಎಲ್ಲರಿಗೂ ಬಾಕಿ ಇರುವ ಬೋನಸ್ ಸಿಗಲಿದೆ. ಕಾರ್ಮಿಕರ ನೋವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಈ ವಿಚಾರದಲ್ಲಿ ಅಭಿನಂದನೆಯನ್ನು ಸಲ್ಲಿಸುತ್ತೇನೆ

ಅಶೋಕ್‌ಕುಮಾರ್ ರೈ, ಶಾಸಕರು ಪುತ್ತೂರು

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

You missed

error: Content is protected !!