dtvkannada

ದಕ್ಷಿಣ ಕನ್ನಡ: ಕಳೆದ ಕೆಲವು ದಿನಗಳ ಹಿಂದೆ ಪುತ್ತೂರಿನಲ್ಲಿ ತಲೆ ಎತ್ತಿ ನಿಂತ ಬ್ರೈಟ್ ಭಾರತ್ ಎಂಬ ಸಂಸ್ಥೆಯು ತಮ್ಮ ಸಂಸ್ಥೆಯ ಅಧೀನದಲ್ಲಿ ಬ್ರೈಟ್ ಭಾರತ್ ಲಕ್ಕಿ ಸ್ಕೀಂ ಎಂಬ ಪ್ರಾಜೆಕ್ಟ್ ಒಂದನ್ನು ಪುತ್ತೂರು ತಾಲೂಕಿನ ಜನತೆಗೆ ಪರಿಚಯಿಸಿದ್ದು ಸದಸ್ಯರಾಗಲು ಬಯಸುವ ಎಲ್ಲಾ ಜನತೆಗೆ ಮುಕ್ತ ಅವಕಾಶವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅವಕಾಶ ಕಲ್ಪಿಸಿ ಕೊಟ್ಟಿದ್ದರು.

ಇದೀಗ ನಿರೀಕ್ಷೆಗೂ ಮೀರಿ ಕೇರಳ,ಕರ್ನಾಟಕ,ಎಂಬಂತೆ ಹಲವು ರಾಜ್ಯಗಳ ಹೊರತು ಪಡಿಸಿ ಹೊರ ದೇಶಗಳಿಂದಲೂ ಪ್ರತಿಕ್ರಿಯೆ ಬರುತ್ತಿದ್ದು ಕೇವಲ ಎಂಟು ದಿನದಲ್ಲಿ ಬರೋಬ್ಬರಿ 1057 ಮಂದಿ ತಮ್ಮ ಹೆಸರನ್ನು ಬ್ರೈಟ್ ಭಾರತ್ ಜೊತೆ ನೋಂದಾಯಿಸಿ ಕೊಂಡಿದ್ದಾರೆ.

ಈ ಒಂದು ಸಂಸ್ಥೆಯು ಇದೀಗ ತಂದಿರುವ ಈ ಯೋಜನೆಯು ಪುತ್ತೂರಿನಲ್ಲಿ ಪ್ರಥಮವಾಗಿದ್ದು ಎರಡು ಬೆಡ್‌ರೂಮಿನ ನಾಲ್ಕು ಮನೆ ಹಾಗು ಒಂದು ಸೆಲೆರೋ ಕಾರು, 6 ಆಕ್ಟಿವಾ 2 ಬೈಕ್,ಚಿನ್ನ, ಡೈಮಂಡ್,ಐಫೋನ್,200 ಸರ್‌ಪ್ರೈಸ್ ಗಿಫ್ಟ್ ಸೇರಿದಂತೆ ಲಕ್ಷಾಂತರ ಮೌಲ್ಯದ ಬಹುಮಾನವನ್ನು ಉಡುಗೊರೆಯಾಗಿ ನೀಡಲಿದೆ.

ಈಗಾಗಲೇ ಬ್ರೈಟ್ ಭಾರತ್ ಸಂಸ್ಥೆಯ ಕಚೇರಿಯು ಪುತ್ತೂರಿನ ಕಲ್ಲಿಮಾರಿನಲ್ಲಿ ತೆರೆದುಕೊಂಡಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಅದ್ದೂರಿಯಾದ ಗ್ರಾಂಡ್ ಇನಾಗ್ರೇಶನ್ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.

ಇನ್ನೂ ಯಾರೆಲ್ಲಾ ಈ ಸಂಸ್ಥೆಯ ಈ ಒಂದು ಯೋಜನೆಯಲ್ಲಿ ಸೇರಿಕೊಂಡಿಲ್ಲ ಅವರೆಲ್ಲರೂ ತಮ್ಮ ಹೆಸರನ್ನು ಆದಷ್ಟು ಬೇಗ ಕೆಳಗೆ ಕೊಟ್ಟಿರುವ ನಂಬರಿಗೆ ಕರೆ ಮಾಡುವ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!