ತಬೂಕ್ ಸೌದಿ ಅರೇಬಿಯಾ : ಇಲ್ಲಿ ನಡೆದ ಅದ್ಧೂರಿ ಕ್ರಿಕೆಟ್ ಪಂದ್ಯಾಕೂಟ ಅಸೆಂಟ್ ಕಪ್ -23 ಕಳೆದ ಮೂರು ವಾರಗಳ ಭರ್ಜರಿ ಪಂದ್ಯಾಕೂಟ ಸಮಾಪ್ತಿಗೊಂಡಿತು.
ಸೌದಿ ಅರೇಬಿಯಾದ ಪ್ರತಿಷ್ಠಿತ ಕಂಪೆನಿ ASCENT ಪ್ರಾಯೋಜಕತ್ವದಲ್ಲಿ ನಡೆದ ಆಯ್ದ ಹನ್ನೆರಡು ಬಲಿಷ್ಠ ತಂಡಗಳ ಈ ಪಂದ್ಯಾಕೂಟದಲ್ಲಿ ನವಾಝ್ ಪಡುಬಿದ್ರೆ ನೇತ್ರತ್ವದ ಆಯೋಜಕ ತಂಡವಾದ ಟೀಮ್ ಅಸೆಂಟ್ ತಬೂಕ್ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಕ್ರಮವಾಗಿ AMA ಮತ್ತು ಅಸ್ಕಲ್ ರವಾನ್ನು ಭರ್ಜರಿಯಾಗಿ ಸೋಲಿಸಿ ಚಾಂಪಿಯನ್ ಪಟ್ಟ ತನ್ನದಾಗಿಸಿ ಕೊಂಡಿತು. ಫೈನಲ್ ತಂಡದ ಶ್ರೇಷ್ಟ ಆಟಗಾರನಾಗಿ ಶೋಭನಾಥ್, ಪಂದ್ಯಾಕೂಟದ ಶ್ರೇಷ್ಟ ಕೀಪರ್ ಮತ್ತು ದಾಂಡಿಗನಾಗಿ ನೌಷಾದ್ ಬಜಾಲ್ ಮತ್ತು ಸರಣಿ ಶ್ರೇಷ್ಟ ಆಟಗಾರನಾಗಿ ತೌಸೀಫ್ ಅಸೆಂಟ್ ಆಯ್ಕೆಯಾದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಬ್ದುಲ್ ಮಜೀದ್ ತಬೂಕ್ ವಿಟ್ಲ ( ಮಾಲೀಕರು ಮಿಡ್ಲ್ ಈಸ್ಟ್ ) ಕ್ರೀಡಾ ಮನೋಭಾವದೊಂದಿಗೆ ಆಡಿದ ಎಲ್ಲಾ ತಂಡಗಳಿಗೆ ಮುಂದಿನ ಪಂದ್ಯಾಕೂಟಗಳಲ್ಲಿ ಶುಭಹಾರೈಸಿ ಅಸೆಂಟ್ ತಂಡವನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಅಬ್ದುಲ್ ಲತೀಫ್ (ಸದಸ್ಯರು CCW), ಕರೀಂ ಉಳ್ಳಾಲ, ಪ್ರಜೀತ್ ಮಾಸ್ಟರ್ ಬ್ಲಾಸ್ಟರ್, ಇಸ್ಮಿ ಲಯನ್ಸ್ ತಬೂಕ್ ಹಾಗೂ ಉದೈಫ್ ಉಡುಪಿ ಭಾಗವಹಿಸಿದ್ದರು.