ಬೆಂಗಳೂರು: ಐದು ಕೋಟಿ ವಂಚನೆ ಆರೋಪದಲ್ಲಿ ಸಿಸಿಬಿ ಕಷ್ಟಡಿಯಲ್ಲಿರುವ ಚೈತ್ರಾಳ ಆರೋಗ್ಯ ವರದಿ ಪ್ರಕಾರ ಎಲ್ಲಾ ತಪಾಸಣೆಯಲ್ಲೂ ನಾರ್ಮಲ್ ಇದ್ದು, ಇಸಿಜಿ ಕೂಡ ನಾರ್ಮಲ್ ಇದೆ. ನ್ಯೂರಾಲಾಜಿಸ್ಟ್, ಮನೋ ವೈದ್ಯರು ತಪಾಸಣೆ ಮಾಡಿದ್ದಾರೆ.
ಎಲ್ಲೂ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ದೃಢೀಕರಿಸಿ ಸೋಮವಾರ ಮಧ್ಯಾಹ್ನ ಆಕೆಯನ್ನು ಡಿಸ್ಚಾರ್ಜ್ ಮಾಡಿದ್ದಾರೆಂದು ತಿಳಿದು ಬಂದಿದೆ.
ಡಿಸ್ಚಾರ್ಜ್ ಬಳಿಕ ಆಕೆಯನ್ನು ಆಸ್ಪತ್ರೆಯಿಂದ ಸಿಸಿಬಿ ಕಚೇರಿಗೆ ಕರೆದೊಯ್ದಿದ್ದು ಇದೀಗ ಇಂದು ಮಂಗಳವಾರದಿಂದ ಆಕೆಯ ವಿಚಾರಣೆ ಮತ್ತೆ ಶುರುವಾಗಲಿದೆ ಎನ್ನಲಾಗಿದೆ.