ಉಪ್ಪಿನಂಗಡಿ: ನಿನ್ನೆ (ಗುರುವಾರ) ಸಂಜೆ ಬಡಿದ ಸಿಡಿಲಿಗೆ ಮನೆಯೊಂದು ಭಾಗಶಃ ಬಿರುಕು ಬಿಟ್ಟಿದ್ದು ಮನೆ ಸಂಪೂರ್ಣವಾಗಿ ಹಾನಿಯಾದ ಘಟನೆ ಉಪ್ಪಿನಂಗಡಿ ಸಮೀಪದ ತೆಕ್ಕಾರು ಎಂಬಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ತೆಕ್ಕಾರುವಿನ ಕಾಪಿಗುಡ್ಡೆಯ ತಾಹಿರ ಎಂಬವರ ಮನೆಗೆ ಸಿಡಿಲು ಬಡಿದು ಹಾನಿಯಾಗರುವುದು.
ಸರಿ ಸುಮಾರು 2ಲಕ್ಷಕ್ಕೂ ಮಿಕ್ಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಸಿಡಿಲಿನ ರಭಸಕ್ಕೆ ಮನೆಯ ಗೋಡೆಗಳು ಸಂಪೂರ್ಣವಾಗಿ ಬಿರುಕು ಬಿಟ್ಟಿದ್ದು ಮನೆಯ ವಯರಿಂಗ್ ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಮನೆಯ ಪ್ರತಿ ಗೋಡೆಗಳು ಬಿರುಕು ಬಿಟ್ಟಿದ್ದು ಯಾವಾಗಲೂ ಬೇಕಾದರೂ ಮನೆ ಬೀಳುವ ಸಾಧ್ಯತೆ ಹೆಚ್ಚಿದೆ.
ಗ್ರಾಮ ಆಡಳಿತ ಅಧಿಕಾರಿ ಸಾಕಮ್ಮ ಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ಕುಟುಂಬಸ್ಥರು v.a ಸಮ್ಮುಖದಲ್ಲಿ ತಹಸೀಲ್ದಾರ್ ರರಿಗೆ ಸೂಕ್ತ ಪರಿಹಾರ ಕೋರಿ ಮನವಿ ನೀಡಿದರು.
ತೆಕ್ಕಾರು ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ರಜಾಕ್, ಪಂಚಾಯತ್ ಮಾಜಿ ಸದಸ್ಯ N. H ಅಬ್ದುಲ್ ರಹಿಮಾನ್, ಪಂಚಾಯತ್ ಸದಸ್ಯ ಅನ್ವರ್ ನಿಯೋಗದಲ್ಲಿದ್ದರು