ಪುತ್ತೂರು: ಮೂಲತಃ ಪುತ್ತೂರಿನ ಸಂಪ್ಯ ನಿವಾಸಿಯಾಗಿದ್ದ ಮರ್ಹೂಮ್ ಅಬುಬಕ್ಕರ್ ಪಟ್ಲಮೂಲೆ ರವರ ಮಗ ಮಾಡಾವು ನಿವಾಸಿಯಾಗಿರುವ ಗಲ್ಫ್ ನ ಒಮಾನ್ ನಲ್ಲಿ ಉದ್ಯೋಗಿಯಾಗಿರುವ ಮುಹಮ್ಮದ್ ರಫೀಕ್ ರವರ ಪತ್ನಿ ಎರಡು ಪುಟ್ಟ ಮಕ್ಕಳ ತಾಯಿ ಹೆರಿಗೆ ಸಂದರ್ಭ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತಪಟ್ಟ ಮಹಿಳೆಯನ್ನು ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಬ್ಯಾಸ ಬೋರ್ಡ್ (SKIMBV )ಇದರ ಸದಸ್ಯರಾದ ಪರ್ಲಡ್ಕ ಅಬ್ದುಲ್ ರಶೀದ್ ಹಾಜಿಯವರ ಪ್ರಥಮ ಪುತ್ರಿ ಮರಿಯಮ್ ರಮೀಝಾ ಎಂದು ಗುರುತಿಸಲಾಗಿದೆ.
ಇದೀಗ ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಮೂರನೇಯ ಹೆರಿಗೆ ಸಂದರ್ಭ ನಿಧನರಾಗಿದ್ದು ಮಗು ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ. ಮೂವರು ಮಕ್ಕಳನ್ನು ತಬ್ಬಲಿಯನ್ನಾಗಿಸಿ ಇಹಲೋಕ ತ್ಯಜಿಸಿದ ತಾಯಿಯನ್ನು ಕಂಡು ಇಡೀ ಕುಟುಂಬವೇ ಮೂಕವಿಸ್ಮಿತರಾಗಿದ್ದಾರೆ.