ಮಂಗಳೂರು: ಕಳೆದ ದಿನ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಕಣ್ಣೀರಿನಲ್ಲಿ ಮುಳುಗಿಸಿದ ಕಹಿ ಘಟನೆಯೊಂದು ನಡೆದಿದ್ದು ಮದುವೆಯಾಗಿ ಕೇವಲ ಮೂರು ತಿಂಗಳಾದ ನವ ವಿವಾಹಿತ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕರುಣಾಜನಕ ಸ್ಥಿತಿ ನಡೆದಿದೆ.
ಈ ಯುವತಿ ಯಾಕೆ ಆತ್ಮಹತ್ಯೆ ಮಾಡಿಕೊಂಡಳು ಎಂದು ಕೇಳಿದರೆ ನಿಮ್ಮ ರಕ್ತ ಕೊಥ ಕೊಥ ಕುದಿಯುವುದರಲ್ಲಿ ಸಂಶಯವಿಲ್ಲ,ಇನ್ನೇನು ಮದುವೆಯಾಗಿ ಗಂಡನ ಮನೆಗೆ ಬಂದು ಎರಡು ಮೂರು ತಿಂಗಳಾಗುವಷ್ಟರಲ್ಲಿ ಆ ಯುವತಿ ಆತ್ಮಹತ್ಯೆ ಎಂಬ ಘೋರ ಯುದ್ದಕ್ಕೆ ಕೈ ಹಾಕಿ ತನ್ನ ಜೀವವನ್ನು ಅರ್ಪಿಸಿದ್ದಾಳೆಂದರೆ ಅಲ್ಲಿ ಎಂತಹ ಒಂದು ಘಟನೆ ನಡೆದಿರಬಹುದು ಎಂದು ನೀವೇ ಊಹಿಸಿ ನೋಡಿ.
ಘಟನೆ ಬಗ್ಗೆ ಸಿಕ್ಕಿದ ಮಾಹಿತಿ- ಇವರಿಬ್ಬರೂ ಪರಸ್ಪರ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿ ಕೊನೆಗೆ ಮನೆಯವರೆಲ್ಲರ ಒಪ್ಪಿಗೆಯ ಮೇರೆಗೆ ಅದು ವಿವಾಹದ ಕಡೆಗೆ ತಲುಪಿ ಕೊನೆಗೆ ಎಲ್ಲರ ಸಮ್ಮುಖದಲ್ಲಿ ಭರ್ಜರಿಯಾಗಿ ವಿವಾಹವು ಕೂಡ ಕಳೆದ ಮೂರು ತಿಂಗಳ ಹಿಂದೆ ನಡೆದಿತ್ತು..
ಮದುವೆ ಆದದ್ದೇ ತಪ್ಪಾಯ್ತಾ- ಹುಡುಗಿಯ ಮನೆಯವರಿಗೆ ಗೊತ್ತಿಲ್ಲ ನಮ್ಮ ಮಗಳನ್ನು ವಿವಾಹ ಮಾಡುತ್ತಿರುವುದು ಒರ್ವ ಗತಿಕೆಟ್ಟ ನರರಾಕ್ಷಸನಿಗೆ ಹಾಗೂ ಯುವತಿಗೂ ಗೊತ್ತಿರಲಿಲ್ಲ ನಾನು ಕಾಲಿಡುತ್ತಿರುವ ಮನೆ ಯಕ್ಷಿಣಿಯಂತ ಮಹಿಳೆಯರು ತುಂಬಿರುವ ಮನೆಯೆಂದು..ಮುಂದೆ ಕೇಳಿ..
ಇವರಿಬ್ಬರೂ ಪ್ರೇಮವಿವಾಹ ಆದರೂ ಕೂಡ ವಿವಾಹ ಸಂದರ್ಭದಲ್ಲಿ ಸೊಂಟದಲ್ಲಿ ಎಲುಬಿಲ್ಲದ ಯುವಕನಿಗೆ ವಿವಾಹದ ನಂತರ ಮುಕ್ಕಿ ತಿನ್ನಲು ಬೇಕಾಗಿ 18 ಪವನ್ ಚಿನ್ನವನ್ನು ಉಡುಗೂರೆಯಾಗಿ ನೀಡಲಾಗಿತ್ತಂತೆ. ಆದರೆ ಹುಡುಗಿ ಕಡೆಯವರು ನೀಡಿದ ವರದಕ್ಷಿಣೆ ಕಡಿಮೆಯಾಗಿದ್ದು, ಪ್ರೀತಿಸಿ ಮದುವೆಯಾದರಿಂದ ಒಳ್ಳೆಯ ಹುಡುಗಿ ಸಿಗಲಿಲ್ಲ ಇಲ್ಲದಿದ್ದರೆ ನನ್ನ ಶಾರುಕ್ ಖಾನ್ ತರ ಇರುವ ಮಗನಿಗೆ ಒಳ್ಳೆಯ ಹುಡುಗಿ ಸಿಗಬಹುದಿತ್ತಂತೆ ಎಂದು ಅತ್ತೆ ಝೂಬೈದಾರವರ ಅನಿಸಿಕೆಗೆ ಅತ್ತೆಯ ಪ್ರೀತಿಯ ಮಗಳ ಅಶ್ಮೀಯಾಳ ಅಭಿಪ್ರಾಯವಂತೆ ಜೊತೆಗೆ ನರರಾಕ್ಷಸ ಗಂಡ ಸೇರಿಕೊಂಡು ಇದನ್ನೆಲ್ಲಾ ಹೇಳುತ್ತಾ ಹೀಯಾಳಿಸಿದ್ದಲ್ಲದೆ, ಮಾನಸಿಕ ಕಿರುಕುಳ ಕೊಡುತ್ತಿದ್ದರಂತೆ. ಹೀಗೆ ಮಾನಸಿಕವಾಗಿ ನೊಂದಿದ್ದ ನನ್ನ ತಂಗಿ ನೌಸೀನ ಆ.25 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವತಿಯ ಸಹೋದರ ನಾಸೀರ್ ಆರೋಪಿಸಿ ಪ್ರಕರಣವನ್ನು ಠಾಣೆಯ ಮೆಟ್ಟಿಲಿಗೆ ತಲುಪಿಸಿದ್ದಾರೆ.
ಸಾವಿನ ಬಗ್ಗೆ ಸೂಕ್ತವಾದ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈಗಾಗಲೇ ಮದುವೆಯಾದ ಭೂಪ ಯುವತಿಯ ಎಲ್ಲಾ ಚಿನ್ನವನ್ನು ಮಾರಿದ್ದು ಇನ್ನೂ ಮಾರಲು ಚಿನ್ನವಿಲ್ಲಾ ಎಂದಾಗ ಶುರು ಮಾಡಿದ್ದಾನೆ ಯುವತಿಗೆ ಕಿರುಕುಳ ನೀಡಲು.. ಹಾಗೆ ಮುಂದುವರಿದ ಹಿಂಸೆ ಕೊನೆಗೆ ಅಲ್ಲಿಂದ ತನ್ನ ತಾಯಿ ಮನೆಗೆ ಹೊರಟ ನೌಶಿನಾ ತಾಯಿ ಮನೆಯಲ್ಲಿ ಬಂದು ನೇಣೆಂಬ ಅಸ್ತ್ರಕ್ಕೆ ಕೊರಳೊಡ್ಡಿದ್ದಾಳೆ.ಇನ್ನೂ ಯುವತಿಯ ಮನೆಯವರಿಗೆ ನ್ಯಾಯ ಮರಿಚೀಕೆಯಾಗಬಹುದೇ ಅಥವಾ ರಾಕ್ಷಸ ರಾಕ್ಷಸಿಗಳನ್ನು ಒದ್ದು ಒಳಗೆ ಹಾಕಿಯಾರೆ ಎಂದು ಕಾದು ನೋಡಬೇಕಿದೆ.ಇದೆಲ್ಲಕ್ಕಿಂತಲೂ ಮಿಗಿಲಾದ ಇಂಟ್ರೆಸ್ಟಿಂಗ್ ಸ್ಟೂರಿ ಮತ್ತೊಂದಿದೆ ಓದಿ ಮುಂದಕ್ಕೆ..
ಯುವತಿಯ ಮರಣದ ವಾರ್ತೆ ಕೇಳಿ ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜನತೆಯು ಈ ಒಂದು ಕುಟುಂಬಕ್ಕೆ ಶಾಪ ಹಾಕಿದ್ದೇ ಹಾಕಿದ್ದು.. ಎಷ್ಟು ಎಂದರೆ ಇಡೀ ಸಾಮಾಜಿಕ ಜಾಲ ತಾಣಗಳಲ್ಲಿ ಈ ಒಂದು ಕುಟುಂಬಕ್ಕೆ ಹಾಕಿದ ಶಾಪ ಅಷ್ಟಿಷ್ಟಲ್ಲ.. ಹಾಕಿದ ಕಮೆಂಟುಗಳು ಪೊಷ್ಟರುಗಳು ಹೇಳಿ ಸುಖವಿಲ್ಲ ಹೋದ ಜೀವ ಮರಳಿ ಬಂದಿತೇ ಇಲ್ಲಾ..
ನಿನ್ನೆ ಮೊನ್ನೆ ಇನ್ಷಟಾಗ್ರಾಂ ಟ್ರೋಲರ್ ಪೇಜಿನಲ್ಲಿ ಈ ಒಂದು ಮರಣದ ಕುರಿತು ಯುವತಿಯ ಪರವಾಗಿ ಟ್ರೋಲರ್ಸ್‌ಗಳು ವೀಡಿಯೋ ಪೊಷ್ಟ್‌ಗಳನ್ನು ಹರಿಯಬಿಟ್ಟಿದ್ದು ಅದರಲ್ಲಿ ನೆಟ್ಟಿಗರು ಕೇಳಬಾರದ ಪ್ರಶ್ನೆಗಳನ್ನು ಕೇಳಿದ್ದು ಹೇಳಬಾರದ ಮಾತುಗಳನ್ನು ಹೇಳಿದ್ದು ಹಾಕಬಾರದ ಶಾಪಗಳನ್ನು ಹಾಕಿದ್ದಾಗಿದೆ. ಹುಡುಗನ ವಿರುದ್ಧ ಹಾಗೂ ಅತ್ತೆಯ ವಿರುದ್ದವಂತೂ ಗೀಚಬಾರದನ್ನೆಲ್ಲಾ ಗೀಚಿದ್ದಾರೆ. ಯುವತಿಯರಂತೂ ವಾಟ್ಸಪ್ ಇನ್ಷಟಾ ಸ್ಟೇಟಸಿನಲ್ಲಿ ಇಂತಹ ಗತಿಯಿಲ್ಲದ ಪುಟಗೋಸಿ ಮಕ್ಕಳನ್ನು ಚರಂಡಿಗೆ ಬಿಸಾಡಿ ನಮ್ಮಂತಹ ಯುವತಿಯರ ಬಾಳಿನಲ್ಲಿ ಚೆಲ್ಲಾಟವಾಡಲು ಮದುವೆ ಮಾಡಿಸಬೇಡಿ ಎಂದು ಹರಿಹಾಯ್ದಿದ್ದಾರೆ. ಒಟ್ಟಿನಲ್ಲಿ ದಕ್ಷಿಣ ಕನ್ನಡ ಜನತೆಗೆ ಈ ತಾಯಿ ಮತ್ತು ಮಗು ವಿಲನ್ ಆಗಿದ್ದು ಒಂದು ಬಡ ಜೀವದ ಜೊತೆ ಚೆಲ್ಲಾಟವಾಡಿದ ಕಟುಕರಿಗೆ ತಕ್ಕ ಶಿಕ್ಷೆಯಾಗಬೇಕು ಯಾರೆ ಆಗಲಿ ಕಾನೂನು ತಪ್ಪಿಸದೆ ನ್ಯಾಯಯುತವಾಗಿ ಅಧಿಕಾರಿಗಳು ಈ ಒಂದು ತನಿಖೆಯನ್ನು ನಡೆಸಿ ಇಹಲೋಕ ತ್ಯಜಿಸಿದ ಯುವತಿಗೆ ನ್ಯಾಯ ದೊರಕಿಸಿ ಕೊಡುವುದು ಕರ್ತವ್ಯವಾಗಿದೆ.ಕೊಡುವರೆಂಬ ನೀರಿಕ್ಷೆಗಳೇ ಹೆಚ್ಚು ಎಂದು ನೆಟ್ಟಿಗರು ತಮಗೆ ತಾವೇ ಸಮಾಧಾನ ಹೇಳಿಕೊಂಡಿದ್ದಾರೆ.
ಯುವಕನಿಗೆ ಬೇರೆ ಹುಡುಗಿಯ ಜೊತೆ ನಂಟು..!!??
ಅದೇ ಮರಣ ಹೊಂದಿದ ಯುವತಿಯ ಗಂಡನಿಗೆ ಬೇರೆ ಯುವತಿಯೊಂದಿಗೆ ಸಂಪರ್ಕವಿದ್ದು ಈ ಮೊದಲೇ ನೌಶಿನಾ ವಾರ್ನಿಂಗ್ ಕೊಟ್ಟಿದ್ದಾರೆನ್ನುವ ಗುಸು ಗುಸು ಸುದ್ದಿಗಳು ಕೇಳಿಬಂದಿದೆ. ಜೊತೆಗೆ ಎಚ್ಚರಿಕೆನ್ನು ಕೂಡ ಕೊಟ್ಟಿದ್ದಳಂತೆ ಎಲ್ಲಿಯಾದರೂ ನೀನು ಬೇರೆ ಹುಡುಗಿಯ ಜೊತೆ ನಂಟು ಬೆಳಿಸಿದ್ದಲ್ಲಿ ನಾನು ಜೀವಂತವಾಗಿರುವುದಿಲ್ಲ ಎಂದು ಈ ಮೊದಲೇ ತಿಳಿಸಿದ್ದಳು ಎಂದು ಒಂದಷ್ಟು ಜನ ಹೇಳುತ್ತಿದ್ದರೆ ಬಹುತೇಕ ಮಂದಿ ಅದರ ಜೊತೆಗೆ ಹಣ ಮತ್ತು ಒಡವೆ ತರಲು ಮನೆಯವರು ಜೊತೆ ಸೇರಿಕೊಂಡು ಗಂಡನು ಶಿಕ್ಷಿಸುತ್ತಿದ್ದರೆಂದು ಆಡಿಕೊಳ್ಳುತ್ತಾರೆ ತಿಳಿದು ಬಂದಿದೆ.ಹಾಗೂ ಮರಣ ಹೊಂದಿದ ತನ್ನ ಪತ್ನಿಯ ಮೃತದೇಹವನ್ನು ನೋಡಲು ಬರಲು ಹಿಂದೇಟು ಹಾಕಿದ ಪ್ರಸಂಗವು ನಡೆದಿದ್ದು ಎನ್ನುವ ವರದಿ ಬಂದಿದೆ.
ರಾತ್ರಿ ರೂಮಿಗೆ ಹೋಗಲು ಅವಕಾಶವಿಲ್ಲ..!!??
ಬಲ್ಲ ಮೂಲಗಳಿಂದ ತಿಳಿದು ಬಂದ ಪ್ರಕಾರ ಮಧ್ಯ ರಾತ್ರಿ ಒಂದು ಗಂಟೆಯಾದರೂ ಯುವತಿಯನ್ನು ಯಕ್ಷಿಣಿಯಂತ ಅತ್ತೆ ಹೊರಗಡೆ ತಡೆದಿಟ್ಟು ತನ್ನ ಕೈಕಾಲುಗಳನ್ನು ಮಸಾಜ್ ಮಾಡಿಸಿಕೊಳ್ಳುವುದು ಇಂತಹ ಹಣೆಬರಹಕೆಟ್ಟ ಕೆಲಸ ಮಾಡಿಸುವುದಲ್ಲದೆ ಗಂಡನ ಜೊತೆ ರೂಮಿಗೆ ಹೋಗಲು ಬಿಡುತ್ತಿರಲಿಲ್ಲ ಎಂದು ಒಂದಷ್ಟು ಗುಪ್ತಚರ ವಾಹಿನಿಯಿಂದ ಮಾಹಿತಿ ಬಂದಿದೆ.ಇದೆಲ್ಲವೂ ಇನ್ನು ಪೊಲೀಸರ ತನಿಖೆಯಿಂದಷ್ಟೇ ಹೊರಬರಬೇಕಾಗಿದೆ ನ್ಯಾಯ ಯಾರ ಕಡೆ ಬರಲಿದೆ ಎಂದು ಕಾದು ನೋಡೋಣ..