ಮಗನ ಶವ ಒಂದು ಕಡೆ ಇನ್ನೊಂದು ಕಡೆ ಕಣ್ಣೆರು ಹಾಕುತ್ತಿರುವ ತಂದೆ; ಸ್ಥಳದಲ್ಲಿ ಬೀಡು ಬಿಟ್ಟ ಪೊಲೀಸರು
ಪುತ್ತೂರು: ತಾಲೂಕನ್ನೇ ಬೆಚ್ಚಿ ಬೀಳಿಸುವ ಘಟನೆಯೊಂದು ಇದೀಗ ಮಧ್ಯರಾತ್ರಿ ನಡೆದಿದ್ದು ಕಲ್ಲೇಗದ ಓರ್ವ ಯುವಕನ ಬರ್ಬರ ಹತ್ಯೆ ನಡೆದಿದ್ದು ಪುತ್ತೂರಿನ ಜನತೆಯನ್ನೇ ಬೆಚ್ಚಿ ಬೀಳಿಸಿದೆ.
ಹತ್ಯೆಯಾದ ಯುವಕನನ್ನು ಪುತ್ತೂರಿನ ಖ್ಯಾತ ಕಲ್ಲೇಗ ಟೈಗರ್ಸ್ನ ಅಕ್ಷಯ್ ಕಲ್ಲೇಗ ಎಂದು ತಿಳಿದು ಬಂದಿದೆ. ತನ್ನ ಮಗ ಪಕ್ಕದಲ್ಲಿರುವ ಪೊದೆಯಲ್ಲಿ ಶವವಾಗಿ ಮಲಗಿದ್ದು ಇತ್ತ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಮೃತ ಅಕ್ಷಯ್ ಅವರ ತಂದೆ ದಿಕ್ಕು ತೋಚದೆ ಅಕ್ಷಯ್ ಅಕ್ಷಯ್ ಎಂದು ಕೂಗುತ್ತಾ ಕಣ್ಣೀರು ಹಾಕುವ ದೃಶ್ಯ ಎಲ್ಲರ ಮನಕಲಕುವಂತೆ ಮಾಡುತ್ತಿದೆ.
https://youtu.be/CDzi-U_jQJ0?si=amobVl60XW61vkTi
ನಗರದ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಕೊಲೆ ನಡೆದಿದ್ದು ಯಾತಕ್ಕಾಗಿ ಈ ಕೊಲೆ ನಡೆದಿದೆ ಯಾರು ನಡೆಸಿದ್ದಾರೆ ಎನ್ನುವ ಮಾಹಿತಿ ಇನ್ನಷ್ಟೇ ಹೊರಬರಬೇಕಾಗಿದೆ. ಘಟನಾ ಸ್ಥಳದಲ್ಲಿ ಅಕ್ಷಯ್ ಅವರ ಗೆಳೆಯರ ತಂಡ ಮತ್ತು ಸಾರ್ವಜನಿಕರು ಸೇರಿದ್ದು ಸ್ಥಳಕ್ಕೆ ಎಸ್ಪಿ ಆಗಮಿಸಿದ್ದು ಸ್ಥಳದಲ್ಲಿ ಪೊಲೀಸ್ ತಂಡ ಬೀಡು ಬಿಟ್ಟಿದ್ದಾರೆ.