ಸುಳ್ಯ: ಬೆಳ್ಳಾರೆ ಪೆರುವಾಜೆಯ ಚೆನ್ನಾರ್ ಕುಂಡಡ್ಕ ಬಳಿಯ ಹನೀಫ್ ಎಂಬವರ ಮಗ ಎಂಟನೇ ತರಗತಿಯ ವಿದ್ಯಾರ್ಥಿ ನಿನ್ನೆ ಸಂಜೆಯಿಂದ ಕಾಣೆಯಾದ ಬಗ್ಗೆ ವರದಿಯಾಗಿದೆ.

ಕಾಣೆಯಾದ ವಿದ್ಯಾರ್ಥಿಯನ್ನು ಅಬೂಬಕರ್ ಬಿಲಾಲ್ ಎಂದು ಗುರುತಿಸಲಾಗಿದ್ದು ಈತ ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ನಿನ್ನೆ ಎಂದಿನಂತೆ ಬೆಳಗ್ಗೆದ್ದು ಶಾಲೆಗೆ ಹೋಗಿ ಮತ್ತೆ ತಿರುಗ ಸಂಜೆ ಮಸೀದಿಗೆ ಬಂದಿದ್ದು ಅಲ್ಲಿಂದ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋರಟ ಬಿಲಾಲ್ ಮತ್ತೆ ಬರಲಿಲ್ಲ ಎನ್ನಲಾಗಿದೆ.

ಮೂಲತಹ ಬಾಲಕ ಚೆನ್ನಾರಿನ ಕುಂಡಡ್ಕ ನಿವಾಸಿಯಾಗಿದ್ದು ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಯಾಗಿದ್ದ ಎಂದು ತಿಳಿದು ಬಂದಿದೆ. ಗೋಧಿ ಮೈಬಣ್ಣ ಹೊಂದಿದ್ದು ಎತ್ತರ ನಾಲ್ಕೂವರೆ ಅಡಿ ಉದ್ದವಿದ್ದು ಕಾಣಲು ಸೌಮ್ಯ ಸ್ವಭಾವದ ಬಾಲಕನಾಗಿದ್ದು ಯಾರಾದರೂ ಕಂಡು ಬಂದಲ್ಲಿ ತಕ್ಷಣ ಈ ನಂಬರಿಗೆ 9731293268, 9686123077 ಕರೆ ಮಾಡಬೇಕಾಗಿ ಮನೆಯವರು ವಿನಂತಿಸಿಕೊಂಡಿದ್ದಾರೆ. ತನ್ನ ಮಗನನ್ನು ಕಾಣದೆ ತಂದೆ ಈಗಾಗಲೇ ಚಿಂತಿರಾಗಿದ್ದು ಯಾರಾದರೂ ಕಂಡಲ್ಲಿ ಅದಷ್ಟು ಬೇಗ ನನ್ನ ಮಗನನ್ನು ಹುಡುಕಿ ಕೊಡಿ ಎಂದು ಡಿಟಿವಿ ಮೂಲಕ ಕೇಳಿಕೊಂಡಿದ್ದಾರೆ.