dtvkannada

ದೆಹಲಿ: ಬಾಲಿವುಡ್ ಖ್ಯಾತ ನಟ ಆಮಿ‌ರ್ ಖಾನ್ ಅವರ ‘ದಂಗಲ್’ ಸಿನಿಮಾದಲ್ಲಿ ಬಾಲಕಿ ಬಬಿತಾ ಕುಮಾರಿ ಫೋಗಟ್ ಪಾತ್ರದಲ್ಲಿ ಮಿಂಚಿದ್ದ ಸುಹಾನಿ ಭಟ್ನಾಗ‌ರ್ ತಮ್ಮ 19ನೇ ವಯಸ್ಸಿನಲ್ಲಿ ಇಂದು ರಾಜಧಾನಿಯಲ್ಲಿ ನಿಧನರಾಗಿದ್ದಾರೆ.

ಕಾಲಿನ ಮೂಳೆ ಮುರಿತಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಸುಹಾನಿ ಅವರಿಗೆ ಔಷಧಿಯ ಅಡ್ಡಪರಿಣಾಮದಿಂದ ಆರೋಗ್ಯ ಸಮಸ್ಯೆ ಉಲ್ಬಣಿಸಿ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಆಕೆ ಕೆಲ ಸಮಯದಿಂದ ದಿಲ್ಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಂಗಲ್ ಸಿನಿಮಾದ ನಂತರ ಆಕೆ ಕೆಲವೊಂದು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದರು. 2019ರಲ್ಲಿ ಸುಹಾನಿ ತಮ್ಮ ಶಿಕ್ಷಣದತ್ತ ಗಮನಹರಿಸಲು ನಟನೆಯಿಂದ ವಿರಾಮ ಪಡೆದಿದ್ದರು.ಈದೀಗ ಇವರು ನಿಧನದ ಸುದ್ದಿ ತಿಳಿದ ಜನತೆ ದಿಗ್ಭ್ರಮೆಗೊಂಡಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!