ಪುತ್ತೂರು: ಸೂರ್ಯ ಯುವಕ ಮಂಡಲ ರಿಜಿಸ್ಟರ್ ಇಡಬೆಟ್ಟು ಹಾಗೂ ಜೈ ಭಾರತ್ ಅಮ್ಮುಂಜೆ ಕುರಿಯ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಆಹ್ವಾನಿತ ತಂಡಗಳ ಪ್ಲಾಸ್ಟಿಕ್ ಬಾಲ್ ಕ್ರಿಕೆಟ್ ಪಂದ್ಯಾಕೂಟವು ಇನ್ನೇನು ಕೆಲವೇ ಕ್ಷಣಗಳಲ್ಲಿ ನಡೆಯಲಿದೆ.

ಈ ಒಂದು ಪಂದ್ಯಾಕೂಟದಲ್ಲಿ 18 ತಂಡಗಳು ಭಾಗವಹಿಸಲಿದ್ದು ಟೋಟಲ್ 45 ಮ್ಯಾಚ್ ನಡೆಯಲಿದೆ ಎಂದು ತಿಳಿದು ಬಂದಿದೆ. ಈ ಒಂದು ಕ್ರಿಕೆಟ್ ಪಂದ್ಯ ಕೂಟವನ್ನು ಡಿಟಿವಿ ಕನ್ನಡ ನ್ಯೂಸ್ ಚಾನೆಲ್‌ನಲ್ಲಿ ನೇರಪ್ರಸಾರ ನೀಡಲಾಗುತ್ತಿದೆ.
ಕ್ರಿಕೆಟ್ ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ಶಾಸಕರು ಸಹಿತ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದು ಈ ಒಂದು ಕ್ರಿಕೆಟ್ ಪಂದ್ಯಕೂಟವು ಇಡಬೆಟ್ಟು ಮೈದಾನದಲ್ಲಿ ಸಾಕ್ಷಿ ಆಗಲಿದೆ.
ಎಲ್ಲಾ ಕಡೆ ಕ್ರಿಕೆಟನ್ನು ಹಾರ್ಡ್ ಬಾಲ್ ರಬ್ಬರ್ ಬಾಲ್ ಮುಂತಾದ ಬಾಲ್ಗಳಲ್ಲಿ ಆಡುತ್ತಿರಬೇಕಾದರೆ ಇಡಬೆಟ್ಟುವಿನ ಯುವಕರ ತಂಡವು ಪ್ಲಾಸ್ಟಿಕ್ ಬಾಲ್ ನಲ್ಲಿ ಆಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಇಂತಹ ಕ್ರಿಕೆಟ್ ಪಂದ್ಯಕೂಟವನ್ನು ವೀಕ್ಷಿಸಲು ಹಲವು ಭಾಗಗಳಿಂದ ಜನರು ಬಂದು ಸೇರಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು ಅದೇ ರೀತಿ ಈ ಒಂದು ಕ್ರಿಕೆಟ್ ಪಂದ್ಯಕೂಟಕ್ಕೆ ನಮ್ಮೂರಿನ ನಾಡ ಜನತೆ ಮತ್ತು ಸಾರ್ವಜನಿಕ ಸಹಕಾರವನ್ನು ಸಂಘಟಕರು ಈ ಮೂಲಕ ಕೋರಿದ್ದಾರೆ.