ಪುತ್ತೂರು: ದ.ಕ ಜಿಲ್ಲಾ ಲೋಕಸಭಾ ಅಭ್ಯರ್ಥಿಯಾಗಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಬ್ರಿಜೇಶ್ ಚೌಟರ ಬಗ್ಗೆ ಪುತ್ತಿಲ ಪರಿವಾರದ ವಕ್ತಾರ ಶ್ರೀ ಕೃಷ್ಣ ಉಪಾಧ್ಯಯ ಫಸ್ಟ್ ರಿಯಾಕ್ಷನ್ ನೀಡಿದ್ದು.ಬ್ರಿಜೇಶ್ ರವರು ಒಬ್ಬ ಒಳ್ಳೆಯ ನಾಯಕ ಅವರ ಆಯ್ಕೆ ಸಂತೋಷ ತಂದಿದೆ ಎಂದಿದ್ದಾರೆ.
ರಾಷ್ಟ್ರದ ಸೈನ್ಯವನ್ನು ಮುನ್ನಡೆಸಿದ ಅವರು ನಮ್ಮ ಜಿಲ್ಲೆಯನ್ನು ಮುನ್ನಡೆಸಲಿದ್ದಾರೆ.
ಆ ಮೂಲಕ ಅವರಿಗೆ ಶಕ್ತಿ ತುಂಬಲಿದ್ದೇವೆ.
ಪುತ್ತೂರಿನಲ್ಲಿ ಕೆಲ ಪಕ್ಷ ಸಮಸ್ಯೆಗಳಿವೆ ಅವುಗಳನ್ನು ಅವರು ಪರಿಹರಿಸಬಹುದು ಎನ್ನುವ ಮೂಲಕ ಲೋಕಸಭಾ ಕಣದಿಂದ ಪುತ್ತಿಲ ಪರಿವಾರ ಹಿಂದೆ ಸರಿಯುವ ಮುನ್ಸೂಚನೆಯನ್ನು ನೀಡಿದ್ದಾರೆ.
ಮೊನ್ನೆ ಪುತ್ತಿಲ ಪರಿವಾರ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಉಪಾಧ್ಯಯರು ಉಪಸ್ಥಿತರಿದ್ದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ದಿಸುವುದು ಖಚಿತ ಎಂದು ಹೇಳಲಾಗಿತ್ತು.
ಇದೀಗ ಬಿಜೆಪಿ ಕ್ಯಾಪ್ಟನ್ ಬ್ರಿಜೇಶ್ ಚೌಟರವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ ಬೆನ್ನಲ್ಲೇ ಉಪಾಧ್ಯಯರ ರಿಯಾಕ್ಷನ್ ಬಹುತೇಕ ಪುತ್ತಿಲ ಪರಿವಾರ ಲೋಕಸಭಾ ಕಣದಿಂದ ಯೂ ಟರ್ನ್ ಹೊಡೆಯುವಂತಿದೆ.
ಎಲ್ಲದಕ್ಕೂ ಅರುಣ್ ಕುಮಾರ್ ಪುತ್ತಿಲ ಕಾರ್ಯಕರ್ತರ ಅಭಿಪ್ರಾಯದಂತೆ ಮುನ್ನಡೆಯುತ್ತೇನೆ ಎಂದಿದ್ದಾರೆ.