ಪುತ್ತೂರು: ನಿನ್ನೆ ಬಿಜೆಪಿಗೆ ಸೇರ್ಪಡೆಯಾಗಬೇಕಾಗಿದ್ದ ಪುತ್ತಿಲರ ಕಾರ್ಯಕ್ರಮ ಹಲವು ಕಾರಣಗಳಿಂದ ಹಠತ್ತಾಗಿ ರದ್ದಾಗಿದ್ದು ಎಲ್ಲರನ್ನೂ ದಿಗ್ಭ್ರಮೆ ಗೊಳಿಸಿದೆ.
ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ನಾಯಕರ ಜೊತೆ ಸೇರಿ ಬಾಗಿಲು ಹಾಕಿಕೊಂಡು ನಡೆಸಿದ ಆಂತರಿಕ ಸಭೆಯಲ್ಲಿ ಬಿಜೆಪಿಯ ಒಂದಷ್ಟು ನಾಯಕರಿಂದ ವಿರೋಧ ವ್ಯಕ್ತವಾಗಿದ್ದು ಈ ಒಂದು ಕಾರಣದಿಂದ ಮಂಗಳೂರಿನಲ್ಲಿ ಪುತ್ತಿಲರ ಸೇರ್ಪಡೆ ನಿನ್ನೆ ರದ್ದಾಗಿದ್ದು ಮುಂದಿನ ನಿರ್ಧಾರ ಏನೆಂದು ನೋಡಬೇಕಾಗಿದೆ.
ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಕುಂಪಲರವರ ಸಮ್ಮುಖದಲ್ಲಿ ನಡೆದ ತುರ್ತು ಸಭೆಯಲ್ಲಿ ವಿರೋಧ ವ್ಯಕ್ತವಾಗಿದ್ದು ಪುತ್ತಿಲರು ಬಿಜೆಪಿಗೆ ಬರುವುದಾದರೆ ಮೂರು ಷರತ್ತುಗಳನ್ನು ಇಟ್ಟಿದ್ದು ಈ ಮೊದಲು ಪುತ್ತಿಲ ಪರಿವಾರ್ ಸಂಘಟನೆಯು ಬಿಜೆಪಿಗೆ ಬರಬೇಕಾದರೆ ಹಲವು ಷರತ್ತುಗಳನ್ನು ನೀಡಿದ್ದು ಇದೀಗ ಬಿಜೆಪಿಗೆ ಬಂದಾಗ ಬಿಜೆಪಿ ನಾಯಕರು ತಿರುಗೇಟು ನೀಡುವಂತೆ ಈ ಕಡೆಯಿಂದ ಹಲವು ಷರತ್ತು ವಿಧಿಸಿದ್ದಾರೆ ಎನ್ನಲಾಗಿದೆ.ಈ ಷರತ್ತುಗಳಿಗೆ ಪುತ್ತಿಲ ರವರು ಬದ್ದರಾಗುತ್ತಾರ ಎಂದು ನೋಡಬೇಕಾಗಿದೆ.
ಷರತ್ತುಗಳು-
೧- ಅರುಣ್ ಪುತ್ತಿಲ ಅವರಿಗೆ ಪುತ್ತೂರಿನಲ್ಲಿ ಬಿಜೆಪಿ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡದಿರುವುದು.
೨- ಬಿಜೆಪಿ ಕಾರ್ಯಕರ್ತನ ವಿರುದ್ಧ ಪುತ್ತಿಲ ಪರಿವಾರ ದಾಖಲಿಸಿರುವ ಕೇಸ್ ಅನ್ನು ಹಿಂಪಡೆಯುವುದು. ೩- ಪುತ್ತಿಲ ಸೇರ್ಪಡೆಗೆ ಮೊದಲೇ ಮಂಡಲ ಅಧ್ಯಕ್ಷ ಸ್ಥಾನಕ್ಕೆ ಬೇರೇ ಹೆಸರನ್ನು ಅಂತಿಮಗೊಳಿಸಿ ಪ್ರಕಟಿಸಬೇಕು.
ಈ ರೀತಿಯ ಮೂರು ಬೇಡಿಕೆಯನ್ನು ತುರ್ತು ಸಭೆಯಲ್ಲಿ ಪ್ರಸ್ತಾವಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಜೊತೆಗೆ ಬಿಜೆಪಿ ನಾಯಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ. ಪುತ್ತಿಲ ಪರಿವಾರ್ ಮುಂದಿನ ನಿರ್ಧಾರ ಏನೆಂದು ಮುಂದಕ್ಕೆ ನೋಡಬೇಕಾಗಿದೆ.