ಮಂಗಳೂರು: ಧರ್ಮ ಧರ್ಮಗಳ ಮದ್ಯೆ ವಿಷ ಬೀಜ ಬಿತ್ತುವ ಮದ್ಯೆ ಇಲ್ಲೊಬ್ಬ ಮುಸಲ್ಮಾನ ಯುವಕ ಪವಿತ್ರ ರಂಜಾನ್ ಉಪವಾಸ ಹಿಡಿದು ಹಿಂದೂ ತಾಯಿಗೆ ರಕ್ತದಾನ ಮಾಡುವ ಮೂಲಕ ಜೀವದಾನಿಯಾಗಿದ್ದಾರೆ.
ಶುಕ್ರವಾರ ಓಪನ್ ಹಾರ್ಟ್ ಸರ್ಜರಿ ನಡೆಯಬೇಕಿದ್ದ ಬಾಯಾರು ಸಮೀಪದ ಮಹಿಳೆಯೋರ್ವರು ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರುನಲ್ಲಿ ಅಡ್ಮಿಟ್ ಆಗಿದ್ದು ಅವರಿಗೆ ತುರ್ತು A+ ರಕ್ತದ ಅವಶ್ಯಕತೆ ಎದುರಾಗಿದ್ದು ರಂಜಾನ್ ತಿಂಗಳಲ್ಲಿ ರಕ್ತ ನಿಧಿಗಳಲ್ಲಿ ರಕ್ತ ಸಂಗ್ರಹ ಇಲ್ಲದೇ ಇರುವುದರಿಂದ ರಕ್ತದಾನಿಗಳನ್ನು ಸಂಪರ್ಕಿಸುವಂತೆ ಸೀತಾ ರವರ ಕುಟುಂಬಸ್ಥರಲ್ಲಿ ಬ್ಲಡ್ ಬ್ಯಾಂಕ್ ನವರು ಮನವಿ ಮಾಡಿದ್ದರು.
ಈ ಮಹಿಳೆಯ ಕುಟುಂಬಸ್ಥರ ಜೊತೆ ಸೇರಿ ಈ ಮನವಿಗೆ ಸ್ಪಂದಿಸಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಕಾರ್ಯನಿರ್ವಾಹಕ ಬಾತಿಶ್ ತೆಕ್ಕಾರು ರವರು ಪವಿತ್ರ ರಂಜಾನ್ ಉಪವಾಸವಿದ್ದು ರಕ್ತದಾನ ಮಾಡುವ ಮೂಲಕ ಮಾನವೀಯ ಸಂದೇಶ ಸಾರಿದರು.
ಧರ್ಮ ಧರ್ಮಗಳ ಮದ್ಯೆ ವಿಷ ಬೀಜ ಬಿತ್ತುವವರ ಮದ್ಯೆ ಇಂತಹ ಮಾನವೀಯ ಸೇವೆಗಳು ಮನುಷ್ಯ ಮಾನವೀಯತೆಗಳನ್ನು ಗಟ್ಟಿಗೊಳಿಸುವಂತಿರುವುದಂತು ಸತ್ಯಕ್ಕೆ ಹತ್ತಿರವಾದಂತಿದೆ.