ಮಂಗಳೂರು: ಸಾಮಾಜಿಕ ಜಾಲತಾಣಗಳ ಬರಹಗಾರ ಮಿತ್ರರ ಒಕ್ಕೂಟವಾದ ಪೆನ್ ಪಾಯಿಂಟ್ ಸ್ನೇಹ ವೇದಿಕೆ ವತಿಯಿಂದ ಬೃಹತ್ ಇಫ್ತಾರ್ ಕೂಟ ರಾಜ್ಯ ಮತ್ತು ಅಂತರಾಷ್ಟ್ರದ ನಾಲ್ಕು ಕಡೆಗಳಲ್ಲಿ ಯಶಸ್ವಿಯಾಗಿ ನಡೆಯಿತು.

ಮಂಗಳೂರಿನ ಅರ್ಕುಲ ನೇತ್ರಾವತಿ ನದಿ ಕಿನಾರೆ ಬಳಿ ನಡೆದ ಕಾರ್ಯಕ್ರಮದಲ್ಲಿ ಹಲವಾರು ಪೆನ್ ಪಾಯಿಂಟ್ ಸದಸ್ಯರು ಬಾಗವಹಿಸಿದರು.ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿ ಕೊಳ್ಳುತ್ತಿರುವ ಹಲವಾರು ಮುಖಗಳನ್ನು ಭೇಟಿಯಾಗಿ ಕುಶಲೋಪರಿಗಳನ್ನು ನಡೆಸುವ ಅಮೋಘ ಮತ್ತು ವಿಶೇಷ ಸಂಗಮಕ್ಕೆ ನಿನ್ನೆಯ ಪೆನ್ ಪಾಯಿಂಟ್ ಇಫ್ತಾರ್ ಕೂಟ ಸಾಕ್ಷಿಯಾಯಿತು.ಇದೇ ವೇಳೆ ಆನ್ ಲೈನ್ ಮುಕಾಂತರ ನಡೆಸಿದ ಹಲವಾರು ಕಾರ್ಯಕ್ರಮಗಳಿಗೆ ಬಹುಮಾನ ವಿತರಿಸಲಾಯಿತು.
ಮಂಗಳೂರು, ಬೆಂಗಳೂರು, ಸೌದಿ ಅರೇಬಿಯಾದ ರಿಯಾದ್ ನಲ್ಲಿ, UAE ದುಬಾಯಿ ನಲ್ಲೂ ಬೃಹತ್ ಇಫ್ತಾರ್ ಕೂಟವನ್ನು ಪೆನ್ ಪಾಯಿಂಟ್ ಪ್ರತಿನಿಧಿಗಳು ನಡೆಸಿ ಯಶಸ್ವಿಗೊಳಿಸಿದರು.

ಕಳೆದ ಐದು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಹಿತೈಷಿ ಅಭಿಮಾನಿಗಳನ್ನು ಹುಟ್ಟು ಹಾಕಿಸಿದ ಪೆನ್ ಪಾಯಿಂಟ್ ತನ್ನ ನಡೆಯನ್ನು ಸಂಪೂರ್ಣವಾಗಿ ಸಾಮಾಜಿಕ ಮತ್ತು ಧಾರ್ಮಿಕವಾಗಿ ಮುನ್ನಡೆಸಿಕೊಂಡು ಬಂದಿದೆ.
ತನ್ನೊಳಿಗಿನ ಸದಸ್ಯರ ಕಷ್ಟ ನಷ್ಟ ಗಳಿಗೆ ಸ್ಪಂದಿಸುತ್ತಿರುವ ಈ ಬಳಗ ಈದ್ ಕಿಟ್, ರಂಜಾನ್ ಕಿಟ್, ರೇಷನ್ ಕಿಟ್, ತನ್ನ ಬಳಗದ ಸಹೋದರಿಯರ ಮದುವೆ ಸಹಾಯ, ಅನಾರೋಗ್ಯ ಹಿನ್ನಲೆ ಆಸ್ಪತ್ರೆಯಲ್ಲಿರುವ ಸದಸ್ಯರಿಗೆ ಆರ್ಥಿಕ ಸಹಾಯ, ಮತ್ತು ಅವರ ಆರೋಗ್ಯ ವಿಚಾರಣೆಗಳನ್ನು ಸಹಿತ ಇನ್ನಿತರ ಎಲ್ಲಾ ಸಮಾಜ ಮುಖಿ ಸೇವೆಗಳಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದೆ.