ಪುತ್ತೂರು : ಉತ್ತರ ಕನ್ನಡ ಮೂಲದ ಇಬ್ಬರು ಹಿಂದೂ ಯುವಕರು ಪುತ್ತೂರು ಮೂಲದ ಅನ್ಯಕೋಮಿನ ಯುವತಿ ಮತ್ತು ರಾಮಕುಂಜ ಮೂಲದ ಯುವತಿಯನ್ನು ಭೇಟಿಯಾಗಲು ಪುತ್ತೂರಿಗೆ ಬಂದ ಪ್ರಸಂಗ ಇಂದು ಮಧ್ಯಾಹ್ನ ನಡೆದಿದೆ.
ಪುತ್ತೂರಿನ KSRTC ಬಸ್ ನಿಲ್ದಾಣದಲ್ಲಿ ಬೇಟಿಯಾಗಿ ಬಳಿಕ ಅಲ್ಲೇ ಪಕ್ಕದಲ್ಲಿರುವ ಲಾಡ್ಜ್ ನಲ್ಲಿ ರೂಮ್ ಬುಕ್ ಮಾಡಲು ತೆರಳುತ್ತಿದ್ದ ವೇಳೆ ಅನ್ಯಕೋಮಿನ ಯುವಕರು ಇವರನ್ನು ಪ್ರಶ್ನಿಸಿದ್ದು, ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಭೇಟಿಯಾಗಲು ಬಂದ ಮಾಹಿತಿ ಹೊರಬಿದ್ದಿದೆ.
ಅನ್ಯಕೋಮಿನ ಯುವತಿಯೊಂದಿಗೆ ಲಾಡ್ಜ್ ಹೋಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ, ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಕೂಡಲೇ KSRTC ಸಿಬ್ಬಂದಿಗಳು ಅವರನ್ನು ಆಟೋ ಮೂಲಕ ಪೊಲೀಸ್ ಠಾಣೆಗೆ ಹೋಗಲು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ .
ಇನ್ಮಾಗ್ರಾಮ್ ಮೂಲಕ ರಾಯಚೂರು ಮೂಲದ ಹಿಂದೂ ಯುವಕರಿಗೆ ಪುತ್ತೂರು ಮೂಲದ ಅನ್ಯಕೋಮಿನ ಯುವತಿಯರ ಪರಿಚಯವಾಗಿದ್ದು ಅವರನ್ನು ಭೇಟಿ ಮಾಡಲು ಇಂದು ಪುತ್ತೂರಿಗೆ ಬಂದಿದ್ದರು ಎನ್ನಲಾಗಿದೆ. ಸದ್ಯ ಪುತ್ತೂರು ನಗರ ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದು, ಹುಡುಗ ಮತ್ತು ಹುಡುಗಿಯ ಮನೆಯವರನ್ನು ಠಾಣೆಗೆ ಕರೆಸಲಾಗಿದೆ. ಹೆಚ್ಚಿನ ವಿವರ ಇನ್ನಷ್ಟೇ ತಿಳಿಯಬೇಕಿದೆ.