dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಪುತ್ತೂರಿನಲ್ಲಿ ನಿನ್ನೆ ನಡೆದ ಅನ್ಯಕೋಮಿನ ಯುವಕ ಯುವತಿಯರ ಭೇಟಿ ಪ್ರಕರಣ ಸಂಬಂಧಿಸಿ ಪುತ್ತೂರಿನ ಪ್ರತಿಷ್ಟಿತ ಹಿಂದೂಸ್ತಾನ್ ಹೋಟೆಲ್’ನ ಹೆಸರು ಕೆಡಿಸಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದ್ದು, ಲಾಡ್ಜ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಮಾತನಾಡಿದ ಹಿಂದೂಸ್ತಾನ್ ಹೊಟೇಲ್ ಮಾಲಕ, ಪುತ್ತೂರಿನ ಪ್ರಕರಣದಲ್ಲಿ ನಮ್ಮ ಲಾಡ್ಜ್ ಹೆಸರನ್ನು ದುರ್ಬಳಕೆ ಮಾಡಿ ಕೆಲವೊಂದು ನ್ಯೂಸ್’ಗಳು ವರದಿ ಮಾಡುತ್ತಿದ್ದು ಸತ್ಯಕ್ಕೆ ದೂರವಾಗಿದೆ . ರಾಯಚೂರಿನ ಯುವಕರು ಹಾಗೂ ಪುತ್ತೂರಿನ ಯುವತಿಯರು ನಮ್ಮ ಲಾಡ್ಜ್’ನಲ್ಲಿ ರೂಂ ಬುಕ್ ಮಾಡಲಿಲ್ಲ ಎಂದು ಲಾಡ್ಜ್ ಮಾಲಕರು ಸ್ಪಷ್ಟಪಡಿಸಿದ್ದಾರೆ. ನಮ್ಮ ಮಾಲಕತ್ವದಲ್ಲಿ ಹಲವು ಹೊಟೇಲ್’ಗಳು ಕಾರ್ಯನಿರ್ವಹಿಸುತ್ತಿದ್ದು, ಸರಿಯಾದ ವಿಚಾರಣೆ ನಡೆಸಿ, ದಾಖಲೆಗಳನ್ನು ಪಡೆದ ನಂತರವಷ್ಟೇ ರೂಂ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

'; } else { echo "Sorry! You are Blocked from seeing the Ads"; } ?>

ಹಲವಾರು ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಸಂಸ್ಥೆಯ ಬಗ್ಗೆ ಇಲ್ಲಸಲ್ಲದ ವರದಿಯೊಂದಿಗೆ ನ್ಯೂಸ್ ಮಾಡಿ, ವ್ಯವಹಾರ ಹಾಗೂ ಮಾನಸಿಕವಾಗಿ ತೆೊಂದರೆಯನ್ನುಂಟು ಮಾಡುವವರ ವಿರುದ್ಧ ಪುತ್ತೂರು ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ ಎಂದು ಲಾಡ್ಜ್ ಮಾಲಕ ಅಬ್ಬಾಸ್ ಷರೀಫ್ ತಿಳಿಸಿದ್ದಾರೆ.

ಘಟನೆಯ ವಿವರ:
ಉತ್ತರ ಕನ್ನಡ ಮೂಲದ ಹಿಂದೂ ಯುವಕನೊಬ್ಬ ಪುತ್ತೂರು ಮೂಲದ ಅನ್ಯಕೋಮಿನ ಯುವತಿ ಮತ್ತು ಹಿಂದೂ ಯುವತಿಯನ್ನು ಭೇಟಿಯಾಗಲು ಪುತ್ತೂರಿಗೆ ಇಂದು ಮಧ್ಯಾಹ್ನ ತನ್ನ ಸ್ನೇಹಿತನೊಂದಿಗೆ ಬಂದಿದ್ದ.
ಪುತ್ತೂರಿನ KSRTC ಬಸ್ ನಿಲ್ದಾಣದಲ್ಲಿ ಯುವತಿಯರನ್ನು ಬೇಟಿಯಾಗಿ ಮಾತನಾಡುತ್ತಿದ್ದ ವೇಳೆ ಕೆಲವು ಯುವಕರು ಇವರನ್ನು ಪ್ರಶ್ನಿಸಿದ್ದು, ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಭೇಟಿಯಾಗಲು ಬಂದ ಮಾಹಿತಿ ಹೊರಬಿದ್ದಿತ್ತು. ಆ ಕೂಡಲೇ ಒಂದು ಕೋಮಿಗೆ ಸೇರಿದ ಯುವಕರ ಗುಂಪು, ರಾಯಚೂರಿನಿಂದ ಬಂದ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದು, ಪುತ್ತೂರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಘಟನೆ ಸಂಬಂಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!