dtvkannada

ಯಾದಗಿರಿ: ಪತ್ನಿ ಜತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಕಾನ್ಸ್​ಟೇಬಲ್’ಗೆ ಆಕೆಯ ಪತಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಮಹಿಳೆ ಜೊತೆ ಪೊಲೀಸ್ ಕಾನ್ಸ್​ಟೇಬಲ್ ಅನೈತಿಕ ಸಂಬಂಧ ಹೊಂದಿದ್ದು, ಆಕೆಯ ಪತಿಗೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದ. ಹೀಗಾಗಿ ಮಹಿಳೆಯ ಪತಿ ಕಾನ್ಸ್​ಟೇಬಲ್ ಗುರಪ್ಪಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಯಾದಗಿರಿ ಜಿಲ್ಲಾ ಡಿಆರ್ ಪೊಲೀಸ್ ಕಾನ್ಸ್​ಟೇಬಲ್ ಗುರಪ್ಪ ಬೇರೆ ಮಹಿಳೆಯರ ಜೊತೆ ಕೂಡ ಅನೈತಿಕ ಸಂಬಂಧ ಹೊಂದಿದ್ದ. ಹೀಗಾಗಿ ಎರಡು ಕೈ, ಕಾಲುಗಳನ್ನ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

ಕಾನ್ಸ್ಟೇಬಲ್ ಗುರಪ್ಪ ಕಳೆದ ಹಲವು ದಿನಗಳಿಂದ ಅನೈತಿಕ ಸಂಬಂಧ ಹೊಂದಿದ್ದನಂತೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಬಳಿಕ ಮಹಿಳೆ ದೂರು ದಾಖಲಿಸಲು ಯತ್ನಿಸಿದ್ದು, ಈ ಘಟನೆ ಯಾದಗಿರಿ ಎಸ್ಪಿ ಕಚೇರಿಯ ಸ್ವಲ್ಪ ದೂರದಲ್ಲೇ ನಡೆದಿದೆ.

By dtv

Leave a Reply

Your email address will not be published. Required fields are marked *

error: Content is protected !!