ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ನಾಳೆ ಪುತ್ತೂರಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಪುತ್ತೂರು ತಾಲೂಕಿನ ಕಾವು ಜಂಕ್ಷನ್ ನಲ್ಲಿ ನಾಳೆ ಬೃಹತ್ ಕಾಂಗ್ರೆಸ್ ಸಮಾವೇಶ ಸಭೆ ಸಂಜೆ ನಡೆಯಲಿದೆ ಎಂದು ಪುತ್ತೂರು ತಾಲೂಕಿನ ಚುನಾವಣಾ ಉಸ್ತುವಾರಿಯಾದಂತಹ ಕಾವು ಹೇಮನಾಥ ಶೆಟ್ಟಿಯವರು ತಿಳಿಸಿದ್ದಾರೆ.
ಈ ಒಂದು ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಹಾಗೂ ಜಿಲ್ಲೆಯ ಕಾಂಗ್ರೆಸ್ ನಾಯಕರಾದಂತಹ ವಿನಯ್ ಕುಮಾರ್, ಮಂಜುನಾಥ ಭಂಡಾರಿ, ರಮಾನಾಥ ರೈ, ಎಂಎಸ್ ಮೊಹಮ್ಮದ್, ಪುತ್ತೂರು ತಾಲೂಕಿನ ಶಾಸಕರಾದಂತಹ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಬಿ ವಿಶ್ವನಾಥ ರೈ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್,ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಅದೇ ರೀತಿ ಪುತ್ತೂರಿನ ಹಲವು ಕಾಂಗ್ರೆಸ್ ನಾಯಕರು ಉಸ್ತುವಾರಿಗಳು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.
ಅದೇ ರೀತಿ ನಾಳೆ ಸಂಜೆ ಕಾವು ಜಂಕ್ಷನ್ ನಲ್ಲಿ ನಡೆಯುವ ಈ ಒಂದು ಬೃಹತ್ ಸಮಾವೇಶಕ್ಕೆ ಪುತ್ತೂರು ತಾಲೂಕಿನ ಕಾಂಗ್ರೆಸ್ಸಿನ ಎಲ್ಲಾ ಕಾರ್ಯಕರ್ತರು ಹಾಗೂ ಗ್ಯಾರಂಟಿ ಫಲಾನುಭವಿಗಳು ಎಲ್ಲರೂ ಈ ಒಂದು ಕಾರ್ಯಕ್ರಮವನ್ನು ಯಶಸ್ಸಿ ಗೊಳಿಸಬೇಕೆಂದು ಡಿಟಿವಿ ಕನ್ನಡದ ಮೂಲಕ ಹೇಮನಾಥ ಶೆಟ್ಟಿಯವರು ಕೇಳಿಕೊಂಡಿದ್ದಾರೆ.