dtvkannada

ಉಪ್ಪಿನಂಗಡಿ: ಪ್ರಸ್ತಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡಡ್ಕ ಅಲ್ ಮುನವ್ವರ ಪಿಯು ಕಾಲೇಜು ವಿದ್ಯಾರ್ಥಿನಿ ಫಾತಿಮತ್ತುಲ್ ಫರ್ಝನ 577 (96%) ಅಂಕಗಳನ್ನು ಪಡೆದು ತನ್ನ ಕಾಲೇಜಿಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ.

ಪ್ರೌಢ ವಿದ್ಯಾಭ್ಯಾಸವನ್ನು ಸರಕಾರಿ ಪ್ರೌಢಶಾಲೆ ಸರಳಿಕಟ್ಟೆಯಲ್ಲಿ ವ್ಯಾಸಂಗ ಮುಗಿಸಿದ ವಿದ್ಯಾರ್ಥಿನಿ ಪಿ.ಯು ವಿದ್ಯಾಭ್ಯಾಸವನ್ನು ಮೂಡಡ್ಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಂದುವರಿಸಿ ಐತಿಹಾಸಿಕ ಸಾಧನೆಯನ್ನು ಮಾಡಿದ್ದಾಳೆ.
ಇವಳು ತೆಕ್ಕಾರು ಬಾಜಾರು ನಿವಾಸಿ ರಝಾಕ್ ಹಾಗು ಅಸ್ಮಾ ದಂಪತಿಯ ಪುತ್ರಿ.
ಕೂಲಿ ಕೆಲಸ ಮಾಡಿ ಜೀವನ ದೂಡುತ್ತಿರುವ ಈ ಕುಟುಂಬದಲ್ಲಿ ಮಗಳ ಸಾಧನೆ ಸಂಭ್ರಮ ಮನೆ ಮಾಡಿದೆ.

By dtv

Leave a Reply

Your email address will not be published. Required fields are marked *

error: Content is protected !!