';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಪ್ಪಿನಂಗಡಿ: ಸೈಕಲ್ ರಿಪೇರಿ ಮಾಡಿ ಕೊಟ್ಟಿಲ್ಲವೆಂದು ಮನನೊಂದು ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಸಮೀಪದ ಕರಾಯ ಎಂಬಲ್ಲಿ ನಿನ್ನೆ ಸಂಜೆ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಕರಾಯದ ಗ್ರಾಮದ ಶಿವಗಿರಿಯ ನಂದನ್ (13) ಎಂದು ಗುರುತಿಸಲಾಗಿದೆ.
ಶುಕ್ರವಾರ ತನ್ನ ಸ್ನೇಹಿತರ ಜೊತೆ ಆತವಾಡುತ್ತಿದ್ದಾಗ ತನ್ನ ಸೈಕಲ್ ಸರಿಯಿಲ್ಲ ರಿಪೇರಿ ಮಾಡಿಕೊಡಬೇಕೆಂದು ತನ್ನ ಮನೆಯವರಲ್ಲಿ ಹೇಳಿಕೊಂಡಿದ್ದ.ಆದರೆ ಮನೆಯವರು ನಾಳೆ ರಿಪೇರಿ ಮಾಡಿಕೊಡುತ್ತೇವೆ ಎಂದು ಹೇಳಿದ್ದರು.ಆ ತಕ್ಷಣವೇ ರೂಮಿಗೆ ತೆರಳಿದ ಬಾಲಕ ಚಿಲಕ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ನಂದನ್ ಶಾಲೆಯಲ್ಲಿ ಉನ್ನತ ವಿದ್ಯಾರ್ಥಿಯಾಗಿದ್ದು 8ನೇ ತರಗತಿಗೆ ಉತ್ತಿರ್ನನಾಗಿದ್ದ.ಉಪ್ಪಿನಂಗಡಿ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಯಾಗಿದ್ದ.
ಮಕ್ಕಳ ಇಂತಃಹ ನಡುವಳಿಕೆಗಳು ಪೋಷಕರಲ್ಲಿ ಬಾರೀ ಆಘಾತ ಮೂಡಿಸಿದ್ದು ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.