ಭಟ್ಕಳ: ಅಪ್ರಾಪ್ತ ಯುವತಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಮನೆಯೊಂದಕ್ಕೆ ರಾತ್ರಿ ಹೊತ್ತು ಕರೆದುಕೊಂಡು ಹೋಗಿ ಅಲ್ಲಿಯೇ ಉಳಿಸಿಕೊಂಡು ಅತ್ಯಾಚಾರ ಎಸಗಿದ ಪ್ರಕರಣ ಮುರ್ಡೇಶ್ವರದ ಕನ್ನಡ ಶಾಲೆಯ ಬಳಿ ನಡೆದಿದೆ.
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಅನ್ವಯ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಹಿರೋದೋಮಿಯ ಮಾಸ್ತಪ್ಪ ಯಾನೆ ನಿತಿನ್ ಎಂದು ಆರೋಪಿಸಲಾಗಿದೆ.
ಈತನು ನನ್ನ ಅಪ್ರಾಪ್ತ ಮಗಳಿಗೆ ರಾತ್ರಿ ಹೊತ್ತು ದೂರವಾಣಿ ಕರೆ ಮಾಡಿ, ಮಾತನಾಡುವುದಿದೆ ಎಂದು ಯಾರೂ ಇಲ್ಲದ ಮನೆಯೊಳಗೆ ಕರೆದುಕೊಂಡು ಹೋಗಿ ರಾತ್ರಿಯಿಡೀ ಅಲ್ಲಿಯೇ ಉಳಿಸಿಕೊಂಡು ಅತ್ಯಾಚಾರ ಎಸಗಿದ್ದಾನೆ. ತನ್ನ ಮಗಳು ಎಷ್ಟು ಪ್ರತಿರೋಧ ಒಡ್ಡಿದರೂ ಸಹ ಕೇಳದೆ ಮಗಳ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾರೆ.
ಈ ವಿಷಯವನ್ನು ಹೊರಗಡೆ ಹೇಳಿದರೆ ನಿನ್ನನ್ನು, ತಂದೆ-ತಾಯಿಯರನ್ನು ಕೂಡಾ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಹೇಳಿದ್ದಾರೆ. ಘಟನೆಯನ್ನು ಪೋಸ್ಕೋ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಮುರ್ಡೇಶ್ವರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.