ಉಪ್ಪಿನಂಗಡಿ: ನಕ್ಷತ್ರ ಚಾರಿಟೇಬಲ್ ಪೌoಡೇಶನ್ ಟ್ರಸ್ಟ್(ರಿ) ಉರುವಾಲುಪದವು ಇದರ ನೂತನ ಕಚೇರಿ ಉದ್ಘಾಟನೆ ಹಾಗು ಸಂಸ್ಥೆ ಲೋಕಾರ್ಪಣೆ ಕಾರ್ಯಕ್ರಮ ಆದಿತ್ಯವಾರದಂದು ಉಪ್ಪಿನಂಗಡಿ ಸಮೀಪದ ಉರುವಾಲುಪದವುನಲ್ಲಿ ನಡೆಯಿತು.

ಬಡವರ ಪಾಲಿಗೆ ಬೆಳಕಾಗುವ ಮೂಲಕ ಆಶಕ್ತರ ಬಾಳಲ್ಲಿ ನಕ್ಷತ್ರ ಚಾರಿಟೇಬಲ್ ಟ್ರಸ್ಟ್ ಮಿಂಚುತ್ತಲೇ ಇರಲಿ ಎಂದು ಸೆಯ್ಯದ್ ಸಾದಾತ್ ತಂಙಳ್ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಸಮಾಜ ಸೇವೆಯಾಗಿವೆ ಇಸ್ಲಾಮಿನ ಅತೀ ದೊಡ್ಡ ಪುಣ್ಯ ಕಾರ್ಯವೆಂದು ಸೆಯ್ಯದ್ ಜಲಾಲ್ ತಂಙಳ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉರುವಾಲುಪದವು ಮುದರಿಸ್ ಮಸೂದ್ ಹಿಮಮಿ ಸಖಾಫಿ ದಾನ ಧರ್ಮಗಳ ಮತ್ತು ಚಾರಿಟೇಬಲ್ ಟ್ರಸ್ಟ್ ಗಳಿಗೆ ಇಸ್ಲಾಂ ನೀಡಿದ ಮಹತ್ವದ ಬಗ್ಗೆ ವಿವರಿಸಿದರು.



ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಆಗಮಿಸಿದ ಹರೇಕಳ ಹಾಜಬ್ಬ ರವರು ಮಾತನಾಡಿ ನಕ್ಷತ್ರ ಚಾರಿಟೇಬಲ್ ಟ್ರಸ್ಟ್ ನ ಅಶೋತ್ತರಗಳಿಗೆ ಶುಭ ಹಾರೈಸಿದರು.
ವಿರೋಧಗಳನ್ನು ಮೆಟ್ಟಿ ನಿಲ್ಲುವುದಾಗಿದೆ ಸಮಾಜ ಸೇವೆಯ ಅತೀ ದೊಡ್ಡ ಸವಾಲು ಆ ಮೂಲಕ ನಕ್ಷತ್ರ ಚಾರಿಟಿ ಎಲ್ಲಾ ಸವಾಲುಗಳನ್ನು ಎದುರಿಸಿ ಮುನ್ನಡೆಯಲಿ ಎಂದು ಮುಖ್ಯ ಅತಿಥಿ ಆಸೀಫ್ ಆಪತ್ಭಾಂದವ ಮಾತನಾಡಿದರು.
ದಿಕ್ಸೂಚಿ ಭಾಷಣ ಮಾಡಿದ ಜಾಬೀರ್ ನಿಜಾಮಿ ನಾಪೋಕ್ಲು
ಬಡವರ ಆಶಕ್ತರ ಪಾಲಿಗೆ ಭರವಸೆಯ ಆಸರೆಯಾಗಿದೆ ಚಾರಿಟಿ ಸಂಸ್ಥೆಗಳು ಆ ಮೂಲಕ ಆಶಕ್ತರಿಗೆ ವರದಾನವಾಗಲಿದೆ ಎಂದು ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಾಧಕರನ್ನು ಸೃಷ್ಟಿಮಾಡುವಲ್ಲಿ ನಮ್ಮ ಸಮುದಾಯದ ಮುಂದೆ ಬರಬೇಕಿದೆ.ಈ ಮೂಲಕ ನಕ್ಷತ್ರ ಚಾರಿಟೇಬಲ್ ಪೌoಡೇಶನ್ ಸಾಧಕರನ್ನು ಗುರುತಿಸುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದೆ. ನಕ್ಷತ್ರ ಚಾರಿಟೇಬಲ್ ನ ಕಾರ್ಯನಿರ್ವಹಣೆ ಬಗ್ಗೆ ಎಸ್ ಬಿ ದಾರಿಮಿ ಮುಖ್ಯಭಾಷಣ ಮಾಡಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕಮ್ಯುನಿಟಿ ಸೆಂಟರ್ ಪುತ್ತೂರಿನ ಹನೀಫ್, ಶಾಕೀರ್ ಅಳಕೆಮಜಲು, ಕೆ,ಕೆ ಶಾಹುಲ್ ಹಮೀದ್, ಇನ್ನಿತರು ಮಾತನಾಡಿ ಶುಭಹಾರೈಸಿದರು.
ವಸ್ತ್ರ ವಿತರಣೆ, ರಕ್ತದಾನ ಶಿಬಿರ, ಔಷದಿ ವಿತರಣೆ, ಆರೋಗ್ಯ ತಪಾಸಣೆ, ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕಾಲ್ನಡಿಗೆ ಮೂಲಕ ಹಜ್ಜ್ ನಿರ್ವಹಿಸಿ ಬಂದ ನೌಷದ್ ಪೆರಿಯಡ್ಕ, ಹಾಜಬ್ಬ ಹರೇಕಳ, ರಶೀದ್ ಕಾಜೂರ್, S,B ದಾರಿಮಿ ಸಹಿತ ಹಲವಾರು ಸಮಾಜ ಸೇವಕರು, ಮತ್ತು ಸಾಧಕರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಹಲವಾರು ಉಲಮಾ, ಉಮರಾ, ಸಾಮಾಜಿಕ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.ಪಿ,ಕೆ ಅಬೂಬಕ್ಕರ್ ಸಿದ್ದಿಕ್ ಉರುವಾಲುಪದವು ಅಧ್ಯಕ್ಷತೆ ವಹಿಸಿದರು.ಶುಕೂರು ದಾರಿಮಿ ಸ್ವಾಗತಿಸಿ.ನೌಫಲ್ ಅಬ್ಬಾಸ್ ವಂದಿಸಿದರು.
ಸಫ್ವಾನ್ ಮತ್ತು ಮುನವ್ವರ್ ಉರುವಾಲುಪದವು ಕಾರ್ಯಕ್ರಮ ನಿರೂಪಿಸಿದರು.