dtvkannada

ಉಪ್ಪಿನಂಗಡಿ: ರಾತ್ರಿ ಹೊತ್ತು ಮೊಬೈಲ್ ನೋಡುತ್ತಿದ್ದಾಗ ತುಂಬಾ ಹೊತ್ತಿನಿಂದ ಮೊಬೈಲ್ ನೋಡುತ್ತಿದ್ದೀಯಾ ಸಾಕು ಮೊಬೈಲ್ ಕೊಡು ಎಂದು ಮಗಳ ಕೈಯಿಂದ ಮೊಬೈಲ್ ಕಿತ್ತುಕೊಂಡಕ್ಕೆ ಬಾಲಕಿಯೋರ್ವಳು ಮನೆಯ ಹೊರಗಡೆಯ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಸಮೀಪದ ಕಲ್ಲೇರಿ ಎಂಬಲ್ಲಿ ನಿನ್ನೆ (ಸೋಮವಾರ) ರಾತ್ರಿ ಸಂಭವಿಸಿದೆ.

ಮೃತಪಟ್ಟ ಬಾಲಕಿಯನ್ನು ಕರಾಯ ಗ್ರಾಮದ ಕೊಂಬೆಟ್ಟಿಮಾರು ಎಂಬಲ್ಲಿ ಕೆಲಸಕ್ಕೆಂದು ಬಂದಿದ್ದ  ಜಾರ್ಖಂಡ್ ಮೂಲದ ನೀಲಮ್ ಕುಮಾರಿ ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ.

ಕೆಲಸಕೆಂದು ಬಂದಿದ್ದ ಆ ತೋಟದ ಮಾಲಕರು ನೀಡಿದ್ದ ಮನೆಯಲ್ಲಿ  ನೀಲಮ್ ಕುಮಾರಿ ಕುಟುಂಬ ವಾಸವಾಗಿತ್ತು.
ರಾತ್ರಿ ತುಂಬಾ ಹೊತ್ತಿನಿಂದ ಸಂಬಂದಿಕರ ಜೊತೆ ವಿಡಿಯೋ ಕಾಲ್ ಮಾಡುತ್ತಿದ್ದ ಮಗಳನ್ನು ಸಾಕು ಮೊಬೈಲ್ ಒತ್ತಿದ್ದು ಎಂದು ಹೇಳಿ ಅವಳ ತಾಯಿ ಮೊಬೈಲ್ ಕಿತ್ತುಕೊಂಡಿದ್ದಾಳೆ ಇದರಿಂದ ಮುನಿಸಿಕೊಂಡು ಬಾಲಕಿ ಮನೆಯ ಹೊರಗಡೆಯಿದ್ದ ಮಾವಿನ ಮರಕ್ಕೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಾಲಕಿಯ ತಂದೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!