ಪುತ್ತೂರು: ತಾಲೂಕಿನ ಕೆದಂಬಾಡಿ ಇದ್ಪಾಡಿಯ ಮುಂಡಾಲ ನಿವಾಸಿ ಜಯರಾಮ ಗೌಡ(42) ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ನಿಧನರಾದರು. ಅನಾರೋಗ್ಯದ ನಿಮಿತ್ತ ಮಂಗಳೂರಿನ ಕೆಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದರು . ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವಿದೇಶದಲ್ಲಿ ಕೆಲ ವರ್ಷಗಳ ಕಾಲ ಉದ್ಯೋಗ ನಿರ್ವಹಿಸಿ ಬಳಿಕ ಊರಿಗೆ ಬಂದು ಕುಂಬ್ರದಲ್ಲಿ ಟಯರ್ ವರ್ಕ್ ಶಾಪ್ ನಡೆಸುತ್ತಿದ್ದರು. ವರ್ತಕರ ಸಂಘದ ಸದಸ್ಯರಾಗಿ, ಎಲ್ಲರೊಂದಿಗೆ ಉತ್ತಮವಾಗಿ ವ್ಯವಹರಿಸುತ್ತಾ, ಸ್ನೇಹಜೀವೀಯಾಗಿ ಗುರುತಿಸಿಕೊಂಡಿದ್ದರು.
ಮೃತರು ತಾಯಿ, ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ.
ಮೃತ ಪ್ರಾರ್ಥಿವ ಶರೀರ ಕುಂಬ್ರ ಕಟ್ಟೆಯ ಬಳಿ ದರ್ಶನ
ಮೃತ ಪ್ರಾರ್ಥಿವ ಶರೀರವು ಕುಂಬ್ರ ಬಂದು, ಕುಂಬ್ರದ ಅಶ್ವಥ ಕಟ್ಟೆಯ ಬಳಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಎರಡು ನಿಮಿಷಗಳ ಮೌನ ಪ್ರಾರ್ಥಣೆ ನಂತರ, ಮೃತರಿಗೆ ಗೌರವ ಸೂಚಿಸಿ ಕುಂಬ್ರ ವರ್ತಕ ಸಂಘದಿಂದ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಕೆಲವು ಗಂಟೆಗಳ ಕಾಲ ಬಂದ್ ಮಾಡಲಾಯಿತು