ಬಂಟ್ವಾಳ : ವಿಧ್ಯಾರ್ಥಿ ಒಕ್ಕೂಟವು ಈ ಹಿಂದಿನಿಂದಲೂ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ನಮ್ಮ ಸಮಾಜದ ಮಕ್ಕಳಿಗೆ ಉಜ್ವಲ ಭವಿಷ್ಯ ನೀಡಿತ್ತು ಮುಂದೆಯೂ ಅದೇ ರೀತಿ ಸಮಾಜವನ್ನು ಬೆಳಗುತ್ತದೆ ಎಂದು ಹಿರಿಯ ರಂಗ ಕಲಾವಿದ ಎ.ಎನ್.ಕೊಳಂಬೆ,ರಾಮಕುಂಜೆ ಅಭಿಪ್ರಾಯಪಟ್ಟರು.
ಅವರು ದ.ಕ.ಜಿ.ಪಂ.ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೋಳಂತೂರಿನಲ್ಲಿ ಆದಿತ್ಯವಾರ ಚಿರಸ್ವಿ ಫೌಂಡೇಶನ್ ಟ್ರಸ್ಟ್ ವತಿಯಿಂದ ನಡೆದ “ಭೈರ ವಿಧ್ಯಾರ್ಥಿ ಪುನರ್ ಸಂಘಟನಾ ಹಾಗೂ ಶಿಕ್ಷಕರ ದಿನಾಚರಣೆ ” ಸಂದರ್ಭದಲ್ಲಿ ನುಡಿದರು.
ಪುಷ್ಪಾರ್ಚನೆ ಹಾಗೂ ದೀಪ ಪ್ರಜ್ವಲನೆಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆತ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಅಧೀಕ್ಷಕರಾದ ಶ್ರೀ ಶ್ರೀಧರ್ ಕೆ.ಎನ್.ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಮಾಣಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರಶ್ಮಿತಾ ಸುರೇಶ್ ವಿಧ್ಯಾರ್ಥಿಗಳಿಗೆ ಹುರುಪು ತುಂಬುವ ಮೂಲಕ ವಿಧ್ಯಾರ್ಥಿ ಒಕ್ಕೂಟದ ಉದ್ದೇಶಗಳನ್ನು ತಿಳಿಸಿದರು,”ವಿದ್ಯಾರ್ಥಿಗಳೆಲ್ಲರು ಸಮಾನ ಮನಸ್ಕರಾಗಿ ಪಾಲ್ಗೊಂಡಾಗ ಮಾತ್ರ ನಾವು ಉತ್ತುಂಗಕ್ಕೆ ಏರಲು ಸಾಧ್ಯ ” ಎಂದು ಅಭಿಪ್ರಾಯ ಪಟ್ಟರು.
ಭೈರ ವಿಧ್ಯಾರ್ಥಿ ಒಕ್ಕೂಟದ ಸ್ಥಾಪಕಾಧ್ಯಕ್ಷರಾದ ಶ್ರೀ ಗಣೇಶ್ ಬೋಳಂತೂರು,ಪುತ್ತೂರಿನ ಪ್ರಾಥಮಿಕ ಶಾಲಾ ಶಿಕ್ಷಕಿ ಸುಲೋಚನಾ,ಬಿ.ಐ. ಟಿ. ಇಂಜಿನಿಯರ್ ಕಾಲೇಜು ಉಪನ್ಯಾಸಕಿಯಾದ ಮಾಲಾಶ್ರೀ ಇವರು ಅಥಿತಿ ಭಾಷಣಗೈದು ಶುಭಹಾರೈಸಿದರು.
ಚಿರಸ್ವಿ ಫೌಂಡೇಶನ್ ಟ್ರಸ್ಟ್ನ ಸದಸ್ಯರೆಲ್ಲರು ಭಾಗವಹಿಸಿದ್ದರು.ವಿವಿಧ ಕಡೆಯ ವಿಧ್ಯಾರ್ಥಿಗಳು ಕಾರ್ಯಕ್ರಮವನ್ನು ಚಂದಗಾಣಿಸಿದರು.ದಿವ್ಯ ಪ್ರಾರ್ಥನೆಗೈದರು, ಶಿವಪ್ರಸಾದ್ ಬೋಳಂತೂರು ನಿರೂಪಿಸಿದರು,ಪ್ರಜ್ವಲ್ ಸ್ವಾಗತಿಸಿ,ನೇಹಾ ವಂದಿಸಿದರು.