ಉಪ್ಪಿನಂಗಡಿ: ಪೈಗಂಬರ್ ಮುಹಮ್ಮದ್ ಸ.ಅ ಮರ ಜೀವನದ ಸಂದೇಶಗಳನ್ನು ನಮ್ಮ ಸ್ವತಃ ಜೀವನದಲ್ಲಿ ಅಳವಡಿಸುವುದೇ ಈದ್ ಮಿಲಾದ್ ನ ಸುಂದರ ಸಂದೇಶವಾಗಿದೆ ಎಂದು ಅಬ್ದುಲ್ ಮಜೀದ್ ಸಖಾಫಿ ಅಮ್ಮುoಜೆ ಹೇಳಿದರು.
ಇವರು ಬದ್ರಿಯಾ ಜುಮಾ ಮಸ್ಜಿದ್ ಮತ್ತು ಮಿಲಾದ್ ಸ್ವಾಗತ ಸಮಿತಿ ತೆಕ್ಕಾರು ಇದರ ವತಿಯಿಂದ ನಡೆದ ಬೃಹತ್ ಮಿಲಾದ್ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಶಾಂತಿ ಸೌಹಾರ್ದತೆ ಮತ್ತು ಪ್ರೀತಿಯಿಂದ ಜೀವಿಸುವುದೇ ಹಬೀಬರ ನೈಜ ಸಂದೇಶ ಅವುಗಳನ್ನು ಪಾಲಿಸುವುದರೊಂದಿಗೆ ಈದ್ ಮಿಲಾದ್ ನ ಸಂದೇಶವನ್ನು ಜಗತ್ತಿಗೆ ಸಾರೋಣ ಎಂದು ಅವರು ಹೇಳಿದರು.
ಮಕ್ಕಳ ಇಸ್ಲಾಮಿಕ್ ಸಾಂಸ್ಕೃತಿಕ ಉತ್ಸವ, ಮಿಲಾದ್ ಜಾಥ, ಮೌಲಿದ್ ಮಜ್ಲೀಸ್,ಗಳೊಂದಿಗೆ ಸಂಭ್ರಮದ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಯಿತು.
ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ಲಾ ಅಹ್ಮದ್ ಧ್ವಜಾರೋಹಣಗೈದರು.
ಕಾರ್ಯಕ್ರಮದಲ್ಲಿ ಇಸ್ಹಾಕ್ ಮದನಿ ಅಳಕ್ಕೆ, ಉಸ್ಮಾನ್ ಸಹದಿ ತೆಕ್ಕಾರು, ಬಶೀರ್ ಮದನಿ ಸೇರ್ಕಳ, ಮಿಲಾದ್ ಸ್ವಾಗತ ಸಮಿತಿಯ ಅಧ್ಯಕ್ಷರು ಅಶ್ರಫ್ ಎ.ಟಿ, ಜಮಾಅತ್ ಪ್ರ ಕಾರ್ಯದರ್ಶಿ ಅತಾವುಳ್ಳ ಟಿ ಹೆಚ್. ಜಾಫರ್ ಕೆ.ಪಿ, ಸುಲೈಮಾನ್ ಫಾಳಿಲಿ, ಮತ್ತಿತರು ಉಪಸ್ಥಿತರಿದ್ದರು ಮಿಲಾದ್ ಸ್ವಾಗತ ಸಮಿತಿ ಕಾರ್ಯದರ್ಶಿ ಅಶ್ರಫ್ ಲತೀಫಿ ಬಿ.ಟಿ ಸ್ವಾಗತಿಸಿ ವಂದಿಸಿದರು.