dtvkannada

ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರಿನಲ್ಲಿ ರಸ್ತೆಯ‌ ಎರಡು ಬದಿಗಳಲ್ಲಿ ಸಣ್ಣ ಸಣ್ಣ ಬ್ಯಾರಿಕೇಟ್ ಹಾಕಿದ್ದು ವಾಹನ ಸವಾರರರನ್ನು ಗೊಂದಲಕ್ಕೀಡು ಮಾಡಿದೆ. ವಾರಗಳ ಹಿಂದೆ ಸಂಟ್ಯಾರಿನಲ್ಲಿ ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ನಡೆದಿತ್ತು. ಅಪಘಾತದಲ್ಲಿ ಬೈಕ್ ಸವಾರ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದರು.
ಈ ಅಪಘಾತದ ಮರುದಿನ ರಸ್ತೆಯ ಎರಡು ಕಡೆ ಸಣ್ಣ ಬ್ಯಾರಿಕೇಡ್ ಹಾಕಿದ್ದು, ಇದು ಅಪಾಯದ ಮುನ್ಸೂಚನೆ ನೀಡುತ್ತಿದೆ.

ಇದೇ ದಾರಿಯಲ್ಲಿ ದಿನಂಪ್ರತಿ ಹಲವಾರು ವಾಹನಗಳು ಸಂಚರಿಸುತ್ತಿದ್ದು, ರಾತ್ರಿ ಹೊತ್ತು ಸಂಚರಿಸುವ ದ್ವಿಚಕ್ರ ವಾಹನದ ಸವಾರರಿಗೆ ಬಹಳಷ್ಟು ತೊಂದರೆಯನ್ನುಂಟುಮಾಡುತ್ತಿದೆ. ರಾತ್ರಿ ಹೊತ್ತು ದೂರದಿಂದ ಸರಿಯಾಗಿ ಕಾಣಿಸದೇ ಇರುವ ಕಾರಣ ಮೊನ್ನೆಯಿಂದ ಒಂದಷ್ಟು ಸವಾರರು ಆಯತಪ್ಪಿ ಬಿದ್ದಿರುವ ಘಟನೆಯೂ ನಡೆದಿದೆ.

ಇದಕ್ಕೆ ಸಂಬಂದ ಪಟ್ಟ ಅಧಿಕಾರಿಗಳು ಆದಷ್ಟು ಬೇಗ ಎಚ್ಚೆತ್ತು ಕೊಂಡು ಇದನ್ನು ತೆರವುಗೊಳಿಸದಿದ್ದಲ್ಲಿ ಹೆಚ್ಚಿನ ಅಪಾಯವಾಗುವುದು ನಿಶ್ಚಿತ. ಅಪಾಯವನ್ನು ಕೈ ಬೀಸಿ ಕರೆಯುತ್ತಿರುವ ಈ ಬ್ಯಾರಿಕೇಡ್ ಸಂಭಂದಪಟ್ಟ ಅಧಿಕಾರಿಗಳು ಆದಷ್ಟು ಬೇಗ ತೆರವುಗೊಳಿಸಿ, ಸುಗಮ ವಾಹನ ಸಂಚಾರಕ್ಕೆ ಅನುವುಮಾಡಿಕೊಡಬೇಕಾಗಿ ವಾಹನ ಸವಾರರು ಡಿಟಿವಿಯೊಂದಿಗೆ ಮನವಿ ಮಾಡಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!