dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಕಳೆದ 20 ವರ್ಷಗಳಿಂದ ಹಲವು ಸಾಮಾಜಿಕ, ಶೈಕ್ಷಣಿಕ, ಹಾಗು ಹೊತ್ತು ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡು ತಾಲೂಕು,ಜಿಲ್ಲೆ ಹಾಗೂ ರಾಜ್ಯದಲ್ಲೂ ಹೆಸರುವಾಸಿಯಾಗಿರುವ ಕುಂಬ್ರ ವರ್ತಕ ಸಂಘಕ್ಕೆ ಇದೀಗ 20 ವರ್ಷಗಳು ತುಂಬುತ್ತಿದ್ದು ಈ ಸಂದರ್ಭದಲ್ಲಿ 20ನೇ ವರ್ಷಾಚರಣೆ ಪ್ರಯುಕ್ತ “ವರ್ತಕ ಸಂಭ್ರಮ ಹಾಗೂ ಪೊರ್ಲುದ ಕುಂಬ್ರ ಸೆಲ್ಫಿ ಪಾಯಿಂಟ್” ಉದ್ಘಾಟನೆ ಮತ್ತು ಸನ್ಮಾನ ಕಾರ್ಯಕ್ರಮ ಇಂದು ಸಂಜೆ ಕುಂಬ್ರ ಜಂಕ್ಷನ್ನಲ್ಲಿ ನಡೆಯಲಿದೆ.

ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರ್ತಕ ಸಂಘದ ಅಧ್ಯಕ್ಷರಾಗಿರುವ ರಫೀಕ್ ಅಲ್‌ರಾಯ ವಹಿಸಲಿದ್ದು ಕಾರ್ಯಕ್ರಮವನ್ನು ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಅದೇ ರೀತಿ ಕುತೂಹಲಕಾರಿಯಾದ ಸೆಲ್ಫಿ ಪಾಯಿಂಟ್ ಅನ್ನು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷ ತ್ರಿವೇಣಿ ಪಲ್ಲತ್ತಾರು ಉದ್ಘಾಟಿಸಲಿದ್ದಾರೆ.

'; } else { echo "Sorry! You are Blocked from seeing the Ads"; } ?>

ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಬೇರೆ ರೀತಿಯಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕೂಡ ನಡೆಯಲಿದೆ.

ಗ್ರಾಮೀಣ ಭಾಗದಲ್ಲಿ ಹೊಸದಾಗಿ ತೆರೆದುಕೊಳ್ಳಲಿರುವ ವಿನೂತನ ಮಾದರಿಯ ಸೆಲ್ಫಿ ಪಾಯಿಂಟ್ ಕುಂಬ್ರ ಪೇಟೆಯ ಜಂಕ್ಷನ್ ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಒಂದು ಉತ್ಪನ್ನವನ್ನು ಈಗಾಗಲೇ ಹಲವು ವರ್ಷಗಳಿಂದ ಬೇರೆ ಬೇರೆ ರೀತಿಯ ವಿನೂತನ ಶೈಲಿಯ ಹಲವು ಮಾದರಿಯ ಪ್ರಾಡಕ್ಟ್‌ಗಳನ್ನು ರಾಜ್ಯಾದ್ಯಂತ ಪರಿಚಯಿಸಿ, ಹೆಸರುವಾಸಿಯಾಗಿರುವ ಪುತ್ತೂರಿನ ಮುಕ್ರಂಪಾಡಿಯ ಆಕರ್ಷಣ್ ಇಂಡಸ್ಟ್ರಿಯವರು ಇದೀಗ ಡಿಜಿಟಲ್ ಯುಗಕ್ಕೆ ತಕ್ಕಂತೆ ನೂತನ ಶೈಲಿಯಲ್ಲಿ ಅವರು ಕಲ್ಪನೆಯಂತೆ ಬಾಂತಲಪ್ಪು ಎಂಬ ಹೆಸರಿನೊಂದಿಗೆ ಸೆಲ್ಫಿ ಪಾಯಿಂಟ್ ಪರಿಚಯಿಸುತ್ತಿದ್ದು ಮೊದಲನೆಯ ಪ್ರಾಡಕ್ಟ‌ನ್ನು ಇದರ ಮಾಲೀಕರ ಸಾಧಿಕ್ ಹಾಜಿಯವರ ಹುಟ್ಟೂರಿಗೆ ನೀಡುತ್ತಿರುವುದು ಇನ್ನಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದು ಯಾವ ರೀತಿ ಇರಲಿದೆ ಎಂದು ನಾಳೆ ಉದ್ಘಾಟನೆಯ ಸಂದರ್ಭದಲ್ಲಿ ನೋಡಬೇಕಾಗಿದೆ.ಇದನ್ನು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷ ತ್ರಿವೇಣಿ ಪಲ್ಲತ್ತಾರು ಉದ್ಘಾಟನೆಗೈಯ್ಯಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದರಾದ ಬ್ರಿಜೇಶ್ ಚೌಟ ಹಾಗೂ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ಮೊದಲು ಹಾಗೂ ನಂತರ ಹಲವು ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮಗಳು ನಡೆಯಲಿದ್ದು ಕುಂಬ್ರ ವರ್ತಕ ಸಂಘದ ಸದಸ್ಯರ ಮಕ್ಕಳಿಂದ ಮತ್ತು ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ವಿವಿಧ ಮನೋರಂಜನ ಕಾರ್ಯಕ್ರಮ ಕೂಡ ನಡೆಯಲಿದೆ.

ಅಕ್ಷಯ ಕಾಲೇಜು ಸಂಪ್ಯ ವತಿಯಿಂದ ಅಕ್ಷಯ ಕಲಾ ವೈಭವ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದ ಕೊನೆಯಲ್ಲಿ ವರ್ತಕ ಸಂಘ ಏರ್ಪಡಿಸಿದ್ದ ಅದೃಷ್ಟ ಚೀಟಿಯ ಡ್ರಾ ಕಾರ್ಯಕ್ರಮ ಕೂಡ ನಡೆಯಲಿದೆ.

ಈ ಒಂದು ಕಾರ್ಯಕ್ರಮಕ್ಕೆ ಊರಿನ ಹಾಗೂ ಪರ ಊರಿನ ಎಲ್ಲಾ ನಾಗರಿಕರು ಭಾಗವಹಿಸಿ ಯಶಸ್ವಿ ಗೊಳಿಸಬೆಕೆಂದು ಸಂಘದ ಅಧ್ಯಕ್ಷರು ಸ್ಥಾಪಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಕೇಳಿಕೊಂಡಿದ್ದಾರೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!