ಬೆಂಗಳೂರು: ಕರ್ನಾಟಕ ಉಪ ಚುನಾವಣೆ ಕದನದಲ್ಲಿ ಮೂರು ಕ್ಷೇತ್ರಗಳಲ್ಲೂ ಕಾಂಗ್ರೇಸ್ ಗೆದ್ದು ಬೀರಿದೆ.
ಶಿಗ್ಗಾವಿ ಕ್ಷೇತ್ರದಲ್ಲಿ ಭರತ್ ಬೊಮ್ಮಾಯಿ ವಿರುದ್ಧ ಯಾಸಿರ್ ಖಾನ್ 14 ಸಾವಿರ ಮತಗಳ ಅಂತರದಿಂದ ಗೆಲುವು ಸಾದಿಸಿಕೊಂಡಿದ್ದಾರೆ.
ಈ ಮೂಲಕ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಮಗ ಬಿಜೆಪಿಯ ಅಭ್ಯರ್ಥಿ ಭರತ್ ಬೊಮ್ಮಾಯಿ ಸೋಲೋಪ್ಪಿಕೊಂಡಿದ್ದಾರೆ.
ಇನ್ನು ಸಂಡೂರು ಕ್ಷೇತ್ರದಲ್ಲಿ ಅನ್ನಪೂರ್ಣ ತುಕಾರಾಂ ರವರು ಸುಮಾರು 9 ಸಾವಿರಕ್ಕೂ ಮಿಕ್ಕ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ವಿರುದ್ಧ ವಿಜಯ ಸಾದಿಸಿದ್ದಾರೆ.
ಚನ್ನಪಟ್ಟಣ ಇಡೀ ರಾಜ್ಯದ ಪ್ರತಿಷ್ಠೆಯ ಕಣ ಎಂದೇ ಹೇಳಬಹುದು ಸತತವಾಗಿ ಮೂರು ಬಾರಿ ಅಖಾಡ ಎದುರಿಸಿದ್ದ ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವ ಕುಮಾರಸ್ವಾಮಿ ರವರ ಮಗ ನಿಖಿಲ್ ಕುಮಾರಸ್ವಾಮಿ ಮತ್ತೆ ಹೀನಾಯವಾಗಿ ಸೋಲೋಪ್ಪಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ರವರು ಗೆಲುವು ಸಾದಿಸಿದರು.
ಸರಿ ಸುಮಾರು 25 ಸಾವಿರಕ್ಕೂ ಮಿಕ್ಕ ಮತಗಳಿಂದ ಯೋಗೇಶ್ವರ್ ರವರು ಶಾಸಕರಾಗಿ ಹೊರ ಹೊಮ್ಮಿದರು.
ಕಾಂಗ್ರೆಸ್ ಮತ್ತು ಬಿಜೆಪಿಯ ಪಾಲಿಗೆ ಈ ಮೂರು ಕ್ಷೇತ್ರಗಳು ಬಾರೀ ಪ್ರತಿಷ್ಠೆಯ ಕಣವಾಗಿತ್ತು ಎರಡು ಕ್ಷೇತ್ರಗಳಲ್ಲಿ ಖುದ್ದು ಮಾಜಿ ಮುಖ್ಯಮಂತ್ರಿಗಳ ಮಕ್ಕಳೇ ಕಣದಲ್ಲಿದ್ದರೂ ಆದರೆ ಕಾಂಗ್ರೆಸ್ ನ ಗ್ಯಾರಂಟಿಯನ್ನು ಜನ ಕೈ ಹಿಡಿದಿದ್ದು ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ.