ಮಂಗಳೂರು: ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಹಲವು ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು ಜನಪ್ರಿಯ “ಸಮಾಜ ಸೇವಾ ರತ್ನ ಪ್ರಶಸ್ತಿ”ಯನ್ನು ಸಮಾಜ ಸೇವಕ ಅಲಿ ಪರ್ಲಡ್ಕ ಅವರಿಗೆ ನೀಡಿ ಗೌರವಿಸಲಾಯಿತು.
ಇತ್ತೀಚೆಗೆ ಮಂಗಳೂರಿನಲ್ಲಿ ನೂತನವಾಗಿ ತೆರೆದುಕೊಂಡ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲವು ಪ್ರಶಸ್ತಿ ಪ್ರದಾನ ಗೈದಿದ್ದು ಅದರಲ್ಲಿ ಪುತ್ತೂರಿನ ಸಮಾಜ ಸೇವಕ, ಬಡವರಿಗಾಗಿ ತನ್ನನ್ನು ತಾನು ಮುಡಿಪಾಗಿಸಿಕೊಂಡಿರುವ ಹಗಲು ರಾತ್ರಿ ಎಂದು ನೋಡದೆ ಯಾರೆ ಆಗಲಿ ಒಂದು ಕರೆ ಮಾಡಿದರು ತಕ್ಷಣ ಕಾರ್ಯಪ್ರವೃತ್ತರಾಗಿ ಜಾತಿ ಮತ ಧರ್ಮ ನೋಡದೆ ಸಹಾಯಕ್ಕೆ ನಿಲ್ಲುವ ಎಲ್ಲರ ಮೆಚ್ಚುಗೆಗೆ ಈಗಾಗಲೇ ಪಾತ್ರರಾಗಿರುವ ಅಲೀ ಪರ್ಲಡ್ಕ ರವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಈ ಸಂದರ್ಭದಲ್ಲಿ ಜನಪ್ರಿಯ ಆಸ್ಪತ್ರೆಯ ಮಾಲಕರು ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು. ಸಾಮಾಜಿಕ ಜಾಲ ತಾಣಗಳಲ್ಲಿ ವಿಷಯ ಹರಡುತ್ತಿದ್ದಂತೆಯೇ ಸರಿಯಾದ ವ್ಯಕ್ತಿಗೆ ಸರಿಯಾದ ಸಮಯಕ್ಕೆ ಪ್ರಶಸ್ತಿ ಒದಗಿದ್ದು ಸಂದ ಬೇಕಾದಂತಹ ವ್ಯಕ್ತಿಗೆ ಸಂದಿದ್ದು ನಮಗೆಲ್ಲರಿಗೂ ಖುಷಿ ತಂದಿದೆ ಎಂದು ಜಾಲ ತಾಣಗಳಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.