ಮಂಗಳೂರು: ಅನಾಥರೊಂದಿಗೆ ಒಂದು ದಿನ ಎಂಬ ಘೋಷ ವಾಕ್ಯದೊಂದಿಗೆ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (ರಿ) ಇದರ ವತಿಯಿಂದ ಐತಿಹಾಸಿಕ ಕಾರ್ಯಕ್ರಮ ಇಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 9 ರ ವರೆಗೆ ಮಂಗಳೂರು ಕೇಂದ್ರವಾಗಿರಿಕೊಂಡು ಐತಿಹಾಸಿಕವಾಗಿ ನಡೆಯಲಿದೆ.
ಒಂದಲ್ಲ ಒಂದು ಕಾರ್ಯಕ್ರಮಗಳಿಂದ ಜನರ ಮನ ಮುಟ್ಟುವ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಅನಾಥ ಪುಟಾಣಿಗಳ ಜೊತೆಗೆ ಒಂದು ದಿನ ಹೆಜ್ಜೆಯಿಡಲಿದೆ.
ತನ್ನ ಬಾಲ್ಯ ಕಾಲದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ಅನಾಥ ಮಕ್ಕಳ ಪಾಲಿಗೆ ಕೋಸ್ಟಲ್ ಫ್ರೆಂಡ್ಸ್ ವಿಶಿಷ್ಟ ಕಾರ್ಯಕ್ರಮದ ಮೂಲಕ ನೆರಳಾಗಲಿದೆ.
ಹೊರ ಜಗತ್ತನ್ನು ಕಾಣದ, ಮಾಲ್,ಬೀಚ್ ಗಳ ಪರಿಚಯವೇ ಇಲ್ಲದ, ಹೊಸ ಬಟ್ಟೆಗಳ ಬಣ್ಣವೇ ನೋಡದ ಸುಮಾರು 85 ಕ್ಕೂ ಮಿಕ್ಕ ಪುಟಾಣಿಗಳು ಈ ಸಾಂತ್ವನ ಸಂಚಾರದ ಭಾಗವಾಗಲಿದ್ದಾರೆ.
ಪಿಕ್ ನಿಕ್, ಹೊಸ ವಸ್ತ್ರ, ಬಟ್ಟೆ ಬರೆ ಉಡುಗೊರೆ ವಿವಿಧ ತಿನಿಸುಗಳ ಜೊತೆಯಾಗಿ ಕೋಸ್ಟಲ್ ಫ್ರೆಂಡ್ಸ್ ನ ವಿಭಿನ್ನ ಕಾರ್ಯಕ್ರಮದಲ್ಲಿ ಅನಾಥ ಪುಟಾಣಿಗಳು ಕುಣಿದು ಕುಪ್ಪಳಿಸಲಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಶುರುವಾಗುವ ಕಾರ್ಯಕ್ರಮ ರಾತ್ರಿ 9 ರ ಹೊತ್ತಿಗೆ ತೆರೆ ಕಾಣಲಿದೆ.