ಕುಂಬ್ರ: ಹತ್ತನೇ ವಾರ್ಷಿಕೋತ್ಸವ ಅಂಗದ ಪ್ರಯುಕ್ತ ಮಿಸ್ಬಾಹುಸುನ್ನ ಯೂತ್ ಫ್ರೆಂಡ್ಸ್ ಉಜಿರೋಡಿ ಸಂಘಟನೆಯು ತಾಜುಲ್ ಉಲಮಾ ಹಾಗೂ ಇನ್ನಿತರ ಅಗಲಿದ ನೇತಾರರ ಅನುಸ್ಮರಣಾ ಕಾರ್ಯಕ್ರಮ ಹಾಗೂ ಬುರ್ದಾ ಮಜೀಲಿಸ್ ಹಾಗೂ ನಾತೆ ಶರೀಫ್ ಕಾರ್ಯಕ್ರಮ ಇಂದು ಸಂಜೆ ಕುಂಬ್ರ ಜಂಕ್ಷನ್ ಬಳಿ ಬಹಳ ಅದ್ದೂರಿಯಾಗಿ ನಡೆಯಲಿದೆ.
ಸೈಯದ್ ಮುಝಮ್ಮಿಲ್ ತಂಙಲ್ ಕಾಸರಗೋಡು ದುವಾ ಮತ್ತು ನೇತ್ರತ್ವ ನೀಡಲಿದ್ದು ಎಸ್ಎಂ ಬಶೀರ್ ಹಾಜಿ ಶೇಖಮಲೆ ಅಧ್ಯಕ್ಷತೆ ವಹಿಸಲಿದ್ದಾರೆ. ಶೇಖಮಲೇ ಜುಮ್ಮಾ ಮಸೀದಿಯ ಮುದರ್ರಿಸ್ ಬದ್ರುದ್ದೀನ್ ಅಹಸನಿ ಉದ್ಘಾಟಿಸಲಿದ್ದು ಮೈದಾನಿಮೂಲೆ ಜುಮ್ಮಾ ಮಸೀದಿ ಖತೀಬ್ ಅಬ್ದುಲ್ ರಜಾಕ್ ಖಾಸಿಮಿ ಪ್ರಾಸ್ತಾವಿಕ ಮಾತುಗಳನ್ನಾಡಲ್ಲಿದ್ದಾರೆ. ಸ್ವಾಧಿಕ್ ಫಾಳಿಲಿ ಗೂಡಲ್ಲೂರು ಮತ್ತು ತಂಡದವರಿಂದ ಬುರ್ದಾ ಮಜ್ಲಿಸ್ ನಡೆಯಲಿದ್ದು ಮ್ಯೊನುದ್ದೀನ್ ಬೆಂಗಳೂರು ಅವರಿಂದ ನಾತೆ ಶರೀಫ್ ಆಲಾಪನೆ ನಡೆಯಲಿದ್ದು ಸಾವಿರಾರು ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕೆಂದು ಡಿಟಿವಿ ಕನ್ನಡದ ಮೂಲಕ ಮಿಸ್ಬಾಹುಸುನ್ನ ಯೂತ್ ಫ್ರೆಂಡ್ಸ್ ಉಜಿರೋಡಿ ಇದರ ಸಂಘಟಕರು ಕೇಳಿಕೊಂಡಿದ್ದಾರೆ. ಈ ಒಂದು ಕಾರ್ಯಕ್ರಮವನ್ನು ಡಿಟಿವಿ ಕನ್ನಡದ ಮೂಲಕ ನೇರಪ್ರಸಾರ ನೀಡಲಿದ್ದೇವೆ.